ಅದಿತಿ ಪ್ರಭುದೇವ ಸೀಮಂತ ಶಾಸ್ತ್ರ; ಶುಭ ಕೋರಿದ ಸೆಲೆಬ್ರಿಟಿಗಳು, ಅಭಿಮಾನಿಗಳು
ನಟಿ ಅದಿತಿ ಪ್ರಭುದೇವ ಅವರಿಗೆ 2024ರ ವರ್ಷ ತುಂಬ ಸ್ಪೆಷಲ್. ಯಾಕೆಂದ್ರೆ, ಸದ್ಯದಲ್ಲೇ ಅವರು ತಾಯಿ ಆಗಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರ ನೆರವೇರಿಸಲಾಗಿದೆ. ಗುರುಕಿರಣ್, ಶರಣ್ ಮುಂತಾದ ಸೆಲೆಬ್ರಿಟಿಗಳು ಬಂದು ಅದಿತಿ ಪ್ರಭುದೇವ ಹಾಗೂ ಯಶಸ್ ದಂಪತಿಗೆ ಶುಭ ಹಾರೈಸಿದ್ದಾರೆ. ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ.
ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಜನವರಿ 1ರಂದು ಅವರು ಪ್ರೆಗ್ನೆನ್ಸಿ ಸುದ್ದಿ ನೀಡಿದ್ದರು. ಈಗ ಅವರ ಮನೆಯಲ್ಲಿ ಸಂಭ್ರಮದಿಂದ ಸೀಮಂತ ಶಾಸ್ತ್ರ ಮಾಡಲಾಗಿದೆ. ಅದಿತಿ ಪ್ರಭುದೇವ ಅವರ ಸೀಮಂತ ಶಾಸ್ತ್ರಕ್ಕೆ (Aditi Prabhudeva Baby Shower) ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭ ಕೋರಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕಮೆಂಟ್ ಮಾಡುವ ಮೂಲಕ ಅಭಿಮಾನಿಗಳು ಕೂಡ ಅದಿತಿ ಪ್ರಭುದೇವ ಅವರಿಗೆ ವಿಶ್ ಮಾಡಿದ್ದಾರೆ. ಶೀಘ್ರದಲ್ಲೇ ಅದಿತಿ ಪ್ರಭುದೇವ ಹಾಗೂ ಯಶಸ್ ಪಾಟ್ಲಾ (Yashas Patla) ದಂಪತಿಯ ಮನೆಗೆ ಮಗುವಿನ ಆಗಮನ ಆಗಲಿದೆ.
ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ಆಗಿರುವ ಅದಿತಿ ಪ್ರಭುದೇವ ಅವರು ಮದುವೆ ಬಗ್ಗೆ ಅನೌನ್ಸ್ ಮಾಡಿದ್ದಾಗ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಕೈತುಂಬ ಸಿನಿಮಾಗಳು ಇರುವಾಗಲೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. 2022ರ ನವೆಂಬರ್ನಲ್ಲಿ ಉದ್ಯಮಿ ಯಶಸ್ ಜೊತೆ ಅವರ ವಿವಾಹ ನೆರವೇರಿತ್ತು. ಈಗ ತಾಯಿ ಆಗುತ್ತಿರುವ ಸಂಭ್ರಮದಲ್ಲಿ ಅದಿತಿ ಪ್ರಭುದೇವ ಇದ್ದಾರೆ.
ಅದಿತಿ ಪ್ರಭುದೇವ ಸೀಮಂತ ಶಾಸ್ತ್ರದ ವಿಡಿಯೋ:
View this post on Instagram
ಮದುವೆ ಬಳಿಕ ಅದಿತಿ ಪ್ರಭುದೇವ ಅವರು ಸಿನಿಮಾ ಒಪ್ಪಿಕೊಳ್ಳುವುದು ಕಡಿಮೆ ಆಯಿತು. ಪ್ರಗ್ನೆಂಟ್ ಆದ ನಂತರ ಅವರು ಸಂಪೂರ್ಣವಾಗಿ ಆರೋಗ್ಯದ ಕಡೆಗೆ ಗಮನ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರು ಸಿನಿಮಾ ಕೆಲಸಗಳಿಂದ ಸದ್ಯಕ್ಕೆ ಅಂತರ ಕಾಯ್ದಕೊಂಡಿದ್ದಾರೆ. ಅವರ ಸೀಮಂತ ಶಾಸ್ತ್ರಕ್ಕೆ ನಟ ಶರಣ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ‘2024 ನಾನು ಅಮ್ಮನಾಗುವೆ’; ಸಿಹಿ ಸುದ್ದಿ ನೀಡಿದ ನಟಿ ಅದಿತಿ ಪ್ರಭುದೇವ
ಅದಿತಿ ಪ್ರಭುದೇವ ಅವರು ಮೂಲತಃ ದಾವಣಗೆರೆಯವರು. ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿದ ಅವರು ‘ಗುಂಡ್ಯಾನ್ ಹೆಂಡ್ತಿ’ ಸೀರಿಯಲ್ನಲ್ಲಿ ನಟಿಸಿರು. ಬಳಿಕ ‘ನಾಗ ಕನ್ನಿಕೆ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಈ ಸಂದರ್ಭದಲ್ಲಿ ಅವರಿಗೆ ಸ್ಯಾಂಡಲ್ವುಡ್ಗೆ ಎಂಟ್ರಿ ಸಿಕ್ಕಿತು. ಅಜಯ್ ರಾವ್ ನಟನೆಯ ‘ಧೈರ್ಯಂ’ ಸಿನಿಮಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ಅವರು ಚಂದನವನಕ್ಕೆ ಕಾಲಿಟ್ಟರು. ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಅವರು ಅಭಿನಯಿಸಿದರು. ಬಜಾರ್, ಸಿಂಗ, ರಂಗನಾಯಕಿ, ಓಲ್ಡ್ ಮಾಂಕ್, ತೋತಾಪುರಿ ಮುಂತಾದ ಸಿನಿಮಾಗಳಲ್ಲಿ ನಟಿಸುವ ಮೂಲಕ ಅದಿತಿ ಪ್ರಭುದೇವ ಅವರು ಪ್ರಸಿದ್ಧಿ ಪಡೆದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಬಿಡುಗಡೆಯಾದ ‘ಲವ್ ಯೂ ಅಭಿ’ ವೆಬ್ ಸರಣಿಯಲ್ಲೂ ಅವರು ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ