ಮಲಯಾಳಂನಲ್ಲಿ ಇತ್ತೀಚೆಗೆ ಸಾಕಷ್ಟು ಚಿತ್ರಗಳು ರಿಲೀಸ್ ಆಗಿ ಹಿಟ್ ಆಗುತ್ತಾ ಇವೆ. ಅದರಲ್ಲೂ ಕ್ರೈಮ್ ಥ್ರಿಲ್ಲರ್ ಚಿತ್ರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅವರು ನಿರ್ಮಾಣ ಮಾಡುತ್ತಾ ಇದ್ದಾರೆ. ಈಗ ಮಲಯಾಳಂನಲ್ಲಿ ಯಶಸ್ಸು ಕಂಡ ಚಿತ್ರವೊಂದು ಒಟಿಟಿಗೆ ಬರೋಕೆ ರೆಡಿ ಆಗಿದೆ. ಮಿಸ್ ಮಾಡದೇ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬೇಕು ಎಂಬುದು ಕೆಲವರ ಸಲಹೆ. ಹಾಗಾದರೆ, ಈ ಚಿತ್ರದಲ್ಲಿ ಏನಿದೆ? ಇದಕ್ಕೆ ಸಿಕ್ಕ ರೇಟಿಂಗ್ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಈ ವರ್ಷ ಜನವರಿ 9ರಂದು ಮಲಯಾಳಂನಲ್ಲಿ ‘ರೇಖಾಚಿತ್ರಂ’ ಸಿನಮಾ ರಿಲೀಸ್ ಆಯಿತು. ಆಸಿಫ್ ಅಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಅನಸ್ವರ ರಂಜನ್ ನಟಿಯ ಪಾತ್ರದಲ್ಲಿದ್ದಾರೆ. ಮನೋಜ್ ಜಯನ್, ಸಿದ್ದಿಖಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ. ಈ ವಿಧದ ಚಿತ್ರಗಳನ್ನು ಇಷ್ಟಪಡುವವರಿಗೆ ಸಿನಿಮಾ ಸಖತ್ ಇಷ್ಟ ಆಗಲಿದೆ.
An anklet that echoes through time.
Watch #Rekhachithram from March 7 only on sonyLIV!#Rekhachithram #AsifAli #AneswaraRajan #JofinTChacko #ManojKJayan #ZarinShihab #BhamaArun #MeghaThomas pic.twitter.com/yuD5s2JJRU— Sony LIV (@SonyLIV) March 3, 2025
ಒಂದು ಊರಿನಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತವೆ. ಅದರ ಬೆನ್ನು ಹತ್ತಿ ಹೋಗುತ್ತಾನೆ ಕಥಾ ನಾಯಕ. ಈ ಕೊಲೆಗಳ ಹಿಂದೆ ಇರೋರು ಯಾರು ಎನ್ನುವುದನ್ನು ಹುಡುಕುವ ಪ್ರಯತ್ನದಲ್ಲಿ ಕಥಾ ನಾಯಕ ತನ್ನ ಜೀವನ ಸವೆಸುತ್ತಾನೆ. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 40 ಸಾವಿರಕ್ಕೂ ಅಧಿಕ ಜನ ವೋಟ್ ಮಾಡಿದ್ದು, 8.8 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲೂ ಚಿತ್ರಕ್ಕೆ 8+ ರೇಟಿಂಗ್ ಸಿಕ್ಕಿದೆ.
ಇದನ್ನೂ ಓದಿ: ನಟ ಯಶ್ಗೆ ಅವಮಾನ ಮಾಡಿದ ಮಲಯಾಳಂ ಸಿನಿಮಾ
ಈ ಚಿತ್ರ ಥಿಯೇಟರ್ನಲ್ಲಿ ಮಲಯಾಳಂ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಒಟಿಟಿಯಲ್ಲಿ ಬಿಡುಗಡೆ ಆಗುವಾಗ ಈ ಸಿನಿಮಾ ಮಲಯಾಳಂ, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ಲಭ್ಯವಿದೆ. ಸೋನಿ ಲಿವ್ ಆ್ಯಪ್ ಮೂಲಕ ಈ ಚಿತ್ರವನ್ನು ನೀವು ವೀಕ್ಷಿಸಬಹುದು. ಮಾರ್ಚ್ 7ರಿಂದ ಸಿನಿಮಾ ಪ್ರಸಾರ ಆರಂಭಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.