‘ಮಾರ್ಕೊ’ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಹೊಸ ಅಲೆಸೃಷ್ಟಿಸಿದ ಸಿನಿಮಾಗಳಲ್ಲಿ ಒಂದು. ಉನ್ನಿ ಮುಕುಂದನ್ ನಟನೆಯ ಈ ಚಿತ್ರ 2024ರ ಡಿಸೆಂಬರ್ನಲ್ಲಿ ತೆರೆಗೆ ಬಂತು. ಈ ಚಿತ್ರವನ್ನು ನೋಡಿ ಒಂದು ವರ್ಗದ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಮೊದಲು ಮೂಲ ಭಾಷೆಯಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಆ ಬಳಿಕ ಈ ಚಿತ್ರವನ್ನು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲೂ ರಿಲೀಸ್ ಮಾಡಲಾಯಿತು. ಈಗ ಚಿತ್ರದ ಕನ್ನಡ ವರ್ಷನ್ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ.
ಉನ್ನಿ ಮುಕುಂದನ್ ನಟನೆಯ ‘ಮಾರ್ಕೊ’ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಇದರಲ್ಲಿ ಜನವರಿ 31ರಂದು ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ ಎಂಬ ಮಾಹಿತಿ ನೀಡಲಾಗಿದೆ. ಈ ಚಿತ್ರ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರ ‘A’ ಸರ್ಟಿಫಿಕೇಟ್ ಪಡೆದುಕೊಂಡಿದ್ದು, ಸಾಕಷ್ಟು ಹಿಂಸಾತ್ಮಕ ದೃಶ್ಯಗಳು ಇವೆ. ಈ ಕಾರಣಕ್ಕೆ ಒಂದು ವರ್ಗದ ಜನರು ಇದನ್ನು ಇಷ್ಟಪಟ್ಟಿಲ್ಲ.
ನಮಸ್ಕಾರ ಕರ್ನಾಟಕದ ಪ್ರಿಯ ಪ್ರೇಕ್ಷಕರೇ! ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಎಲ್ಲೆಡೆ ಪ್ರಶಂಶೆಗೊಳಗಾದ #ಮಾರ್ಕೋ ಸಿನಿಮಾ ಈಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ.
After receiving a PHENOMENAL response worldwide, the BIGGEST action thriller #Marco is now arriving in Kannada!
Brace yourselves for an… pic.twitter.com/f0N4E7Ocua
— Unni Mukundan (@Iamunnimukundan) January 20, 2025
‘ಅನಿಮಲ್’ ಸಿನಿಮಾದಲ್ಲೂ ಸಾಕಷ್ಟು ಹಿಂಸಾತ್ಮಕ ದೃಶ್ಯಗಳು, ಹೆಣ್ಣುಮಕ್ಕಳಿಗೆ ಬೈಯ್ಯುವ ದೃಶ್ಯಗಳು ಇವೆ. ಇದನ್ನು ಒಂದಷ್ಟು ಜನರು ಇಷ್ಟಪಟ್ಟಿದ್ದು, ವಿಜ್ರಂಭಿಸಿದ್ದಾರೆ. ‘ಮಾರ್ಕೊ’ ಚಿತ್ರವನ್ನು ಕೂಡ ಅನೇಕರು ಇದೇ ವರ್ಗಕ್ಕೆ ಹೋಲಿಕೆ ಮಾಡಿದ್ದಾರೆ. ಈ ಚಿತ್ರ ಕೆಲವರಿಗೆ ಇಷ್ಟವಾಗಿಲ್ಲ. ಈ ಸಿನಿಮಾದಲ್ಲಿ ಅತಿಯಾದ ಹಿಂಸೆ ತೋರಿಸಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: 100 ಕೋಟಿ ಗಳಿಕೆ, ಆದರೂ ಸಿನಿಮಾಕ್ಕೆ ವಿರೋಧ, ಅಂಥದ್ದೇನಿದೆ ‘ಮಾರ್ಕೊ’ನಲ್ಲಿ
‘ಮಾರ್ಕೊ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಕಾರಣಕ್ಕೆ ಚಿತ್ರದ ಒಟಿಟಿ ಹಕ್ಕಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಇನ್ನೂ ರಿವೀಲ್ ಆಗಿಲ್ಲ. ಈ ಚಿತ್ರವನ್ನು ಹನೀಫ್ ಅದೇನಿ ನಿರ್ದೇಶನ ಮಾಡಿದ್ದು, ಶರೀಫ್ ಮೊಹಮದ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದು, ಇದು ಅನೇಕರಿಗೆ ಇಷ್ಟ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.