ಮಮ್ಮುಟ್ಟಿ(mammootty) ಶನಿವಾರ(ನವೆಂಬರ್ 12) ತಮ್ಮ ಟ್ವಿಟರ್ ಖಾತೆಯಲ್ಲಿ ‘ಕಾತಲ್ ದಿ ಕೋರ್'(kathal the core)ಚಿತ್ರದ ಫಸ್ಟ್ ಲುಕ್ ಪೋಸ್ಟ್ ಬಿಡುಗಡೆ ಮಾಡಿದ್ದಾರೆ. ಪೋಸ್ಟ್ರ್ನಲ್ಲಿ ಮಮ್ಮುಟ್ಟಿ ಹಾಗೂ ಚಿತ್ರದ ನಾಯಕಿ ಜ್ಯೋತಿಕಾ ಅವರು ಮನೆಯ ಎದುರುಗಡೆ ಕುಳಿತು ನಗುತ್ತಿದ್ದಾರೆ. ಮೇಲ್ನೋಟಕ್ಕೆ ಪೋಸ್ಟರ್ ನೋಡಿದರೆ ಕಾತಲ್ ಸಿನಿಮಾವು ಮಧ್ಯವಯಸ್ಕ ದಂಪತಿಗಳ ರೊಮ್ಯಾಂಟಿಕ್ ಕಾಮಿಡಿಯಿಂದ ಕೂಡಿದ ಸಿನಿಮಾ ಆಗಿರಬಹುದು ಎನಿಸುತ್ತದೆ.
ಜ್ಯೋತಿಕಾ ಅವರ ಮೂರನೇ ಮಲಯಾಳಂ ಸಿನಿಮಾ ಇದಾಗಿದ್ದು, (2007)ರಲ್ಲಿ ‘ರಕ್ಕಿಲಿಪಟ್ಟು’, (2009) ರಲ್ಲಿ ‘ಸೀತಾ ಕಲ್ಯಾಣಂ’ ನಲ್ಲಿ ನಟಿಸಿದ್ದಾರೆ. ಇದೀಗ ಅವರು ‘ಕಾತಲ್ ದಿ ಕೋರ್’ ಸಿನಿಮಾದಲ್ಲಿ ಮಮ್ಮುಟ್ಟಿ ಜೊತೆ ಜೋಡಿಯಾಗಿ ನಟಿಸುತ್ತಿದ್ದು, ಇದು ಮಮ್ಮುಟ್ಟಿ ಅವರೊಟ್ಟಿಗೆ ಮೊದಲ ಸಿನಿಮಾ ಆಗಿದೆ. ಚಿತ್ರದ ಮೊದಲ ಪೋಸ್ಟರ್ನಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಮ್ಮುಟ್ಟಿ ಅವರು ಈಗಾಗಲೇ ತಮ್ಮ ಹಿಂದಿನ ಚಿತ್ರ ‘ರೋರ್ಸ್ಚಾಚ್’ನ ಯಶಸ್ಸಿನಲ್ಲಿದ್ದಾರೆ.
Presenting the first look poster of @KaathalTheCore @MKampanyOffl @DQsWayfarerFilm @Truthglobalofcl #KaathalTheCore pic.twitter.com/BricD0a79M
— Mammootty (@mammukka) November 12, 2022
ಇನ್ನು ಈ ಸಿನಿಮಾ ಮಲಯಾಳಂ ಅಭಿಮಾನಿಗಳಲ್ಲಿ ಭಾರಿ ಹೈಫ್ ಕ್ರಿಯೇಟ್ ಮಾಡಿದೆ. ಈ ಸಿನಿಮಾವನ್ನು ಜಿಯೋ ಬೇಬಿ ನಿರ್ದೇಶನ ಮಾಡಿದ್ದು ‘ದಿ ಗ್ರೇಟ್ ಇಂಡಿಯನ್ ಕಿಚನ್’ ಮತ್ತು ‘ಕಿಲೋಮೀಟರ್ಸ್ ಕಿಲೋಮೀಟರ್ಸ್’ ಚಿತ್ರಗಳ ಮೂಲಕ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದ ನಿರ್ದೇಶಕ ಜಿಯೋ ಬೇಬಿ ಈ ಬಾರಿ ಪ್ರೇಕ್ಷಕರಿಗೆ ಯಾವ ರೀತಿಯ ಕಥೆಯ ಮೂಲಕ ಬರಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಸಾಲು.ಕೆ. ಥಾಮಸ್ ಕ್ಯಾಮರಾ ವರ್ಕ್ ಮಾಡಿದ್ದು, ಚಿತ್ರಕ್ಕೆ ಮ್ಯಾಥ್ಯೂಸ್ ಪುಲಿಕನ್ ಸಂಗೀತ ಸಂಯೋಜಿಸಿದ್ದಾರೆ, ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅವರ ಬ್ಯಾನರ್ಗಳಾದ ಮಮ್ಮುಟ್ಟಿ ಕಂಪನಿ ಹಾಗೂ ವೇಫೇರರ್ ಫಿಲ್ಮ್ಸ್ ಸಹ-ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ