Jyothika: 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಜ್ಯೋತಿಕಾ; ಅಚ್ಚರಿಯ ಗಿಫ್ಟ್ ನೀಡಿದ ಆಮೆಜಾನ್ ಪ್ರೈಮ್

Udanpirappe: ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ತಮ್ಮ 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿದ್ದಾರೆ. ಈ ವೇಳೆ ಆಮೆಜಾನ್ ಪ್ರೈಮ್ ವಿಡಿಯೋ ಅವರಿಗೆ ವಿಶೇಷ ರೀತಿಯಲ್ಲಿ ಶುಭಕೋರಿದೆ.

Jyothika: 50ನೇ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿ ಜ್ಯೋತಿಕಾ; ಅಚ್ಚರಿಯ ಗಿಫ್ಟ್ ನೀಡಿದ ಆಮೆಜಾನ್ ಪ್ರೈಮ್
ಮರಳು ಶಿಲ್ಪ (ಎಡ), ಉಡನ್​ಪಿರಪ್ಪೆ ಚಿತ್ರದಲ್ಲಿ ಜ್ಯೋತಿಕಾ (ಬಲ)
Follow us
TV9 Web
| Updated By: shivaprasad.hs

Updated on: Oct 14, 2021 | 4:07 PM

ನಟಿಯರ ವೃತ್ತಿ ಬದುಕಿನಲ್ಲಿ 50ನೇ ಚಿತ್ರದ ಸಾಧನೆ ಬಹಳ ಅಪೂರ್ವವಾದದ್ದು. ಕಾಲಿವುಡ್​ನ ಖ್ಯಾತ ನಟಿ ಜ್ಯೋತಿಕಾ ಸದ್ಯ ಇದೇ ಹಾದಿಯಲ್ಲಿದ್ದಾರೆ. ಅವರ ಅಭಿನಯದ 50ನೇ ಚಿತ್ರ ‘ಉಡನ್​ಪಿರಪ್ಪೆ’ ಇಂದು ಬಿಡುಗಡೆಯಾಗಿದೆ. ವಿಶೇಷವೆಂದರೆ ಜ್ಯೋತಿಕಾರ ಈ ಹಿಂದಿನ ಚಿತ್ರದಂತೆ ಇದೂ ಕೂಡ ನೇರವಾಗಿ ಆಮೆಜಾನ್ ಪ್ರೈಮ್​ ಮೂಲಕ ನೇರವಾಗಿ ಒಟಿಟಿ ಬಿಡುಗಡೆ ಕಂಡಿದೆ. ಈ ವಿಶೇಷ ಸಂದರ್ಭದಲ್ಲಿ ಆಮೆಜಾನ್ ಪ್ರೈಮ್ ವಿಡಿಯೋ ಜ್ಯೋತಿಕಾ ಅವರಿಗೆ ಸರ್ಪ್ರೈಸ್ ಗಿಫ್ಟ್ ಒಂದನ್ನು ನೀಡಿದೆ. ಏನದು? ಇಲ್ಲಿದೆ ಮಾಹಿತಿ.

ಚೆನ್ನೈನ ಮರೀನಾ ಬೀಚ್​ನಲ್ಲಿಮರಳು ಶಿಲ್ಪದ ಮುಖಾಂತರ ಜ್ಯೋತಿಕಾರ 50ನೇ ಚಿತ್ರಕ್ಕೆ ಆಮೆಜಾನ್ ಪ್ರೈಮ್ ಶುಭಾಶಯ ಕೋರಿದೆ. ಸಾಮಾನ್ಯವಾಗಿ ಆನ್​ಲೈನ್ ವೇದಿಕೆಗಳು ಡಿಜಿಟಲ್ ವೇದಿಕೆಗಳಲ್ಲಿ ಪೋಸ್ಟರ್​, ಟೀಸರ್​ ಮೊದಲಾದವುಗಳ ಮೂಲಕ ಶುಭಕೋರುವುದು ವಾಡಿಕೆ. ಆದರೆ ಆಮೆಜಾನ್ ಪ್ರೈಮ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಖ್ಯಾತ ಕಲಾವಿದೆಗೆ ಗೌರವ ಸಲ್ಲಿಸಿದೆ. ಇದು ಜ್ಯೋತಿಕಾರಿಗೆ ಬಹಳ ಇಷ್ಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಧನ್ಯವಾದ ಸಮರ್ಪಿಸಿದ್ದಾರೆ.

ಖ್ಯಾತ ಮರೀನಾ ಬೀಚ್​ನಲ್ಲಿ ನಿತ್ಯವೂ ಸಾವಿರಾರು ಮಂದಿ ಓಡಾಡುತ್ತಾರೆ. ಅಲ್ಲಿ ಜ್ಯೋತಿಕಾರಿಗೆ ವಿಶೇಷ ಕಲಾ ಪ್ರದರ್ಶನದ ಮುಖಾಂತರ ಪ್ರೈಮ್ ಶುಭಕೋರಿದ್ದು, ಜ್ಯೋತಿಕಾರಿಗೆ ಬಹಳ ಸಂತಸ ಉಂಟುಮಾಡಿದೆ. ಅವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಿಮ್ಮ ಪ್ರೀತಿ ಹಾಗೂ ಗೌರವಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಜ್ಯೋತಿಕಾ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:

View this post on Instagram

A post shared by Jyotika (@jyotika)

ಈ ಮರಳು ಶಿಲ್ಪ ಸದ್ಯ ಮರೀನಾ ಬೀಚ್​ನ ಆಕರ್ಷಣೆಯಾಗಿದ್ದು, ಇದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಈ ಶಿಲ್ಪವು ಅಕ್ಟೋಬರ್ 17ರವರೆಗೆ ನೋಡುಗರಿಗೆ ಲಭ್ಯವಿರಲಿದೆ. ‘ಉದನ್​ಪಿರಪ್ಪೆ’ ಚಿತ್ರವನ್ನು ಇರಾ ಸರವಣನ್ ನಿರ್ದೇಶಿಸಿದ್ದು, ಜ್ಯೋತಿಕಾ, ಶಶಿಕುಮಾರ್, ಸೂರಿ ಮೊದಲಾದ ತಾರೆಯರು ನಟಿಸಿದ್ದಾರೆ. ಈ ಚಿತ್ರವು ತೆಲುಗಿಗೂ ಡಬ್ ಆಗಿದ್ದು, ‘ರಕ್ತ ಸಂಬಂಧಮ್’ ಎಂಬ ಹೆಸರಿನಲ್ಲಿ ವೀಕ್ಷಕರಿಗೆ ಲಭ್ಯವಿದೆ.

ಇದನ್ನೂ ಓದಿ:

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್​ ವಿಡಿಯೋ ಸಂದೇಶ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್