ಆರ್ಆರ್ಆರ್-2 ಚಿತ್ರ ಬರಲಿದ್ಯಾ? ಚಿತ್ರದ ಬಗ್ಗೆ ಸುಳಿವು ನೀಡಿದ ಎಸ್ಎಸ್ ರಾಜಮೌಳಿ
ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರು ಇತ್ತೀಚೆಗೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್ಆರ್ಆರ್-2 ಚಿತ್ರದ ಬಗ್ಗೆ ಚರ್ಚಿಸಿದ್ದು, ಕಥೆಯ ಮೇಲೆ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ರಾಜಮೌಳಿ ಅವರು ಇತ್ತೀಚಿಗೆ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಆರ್ಆರ್ಆರ್-2′ ಚಿತ್ರದ ಕಥೆಯಲ್ಲಿ ಕೆಲಸ ನಡೆಯುತ್ತಿದೆ ಎಂದು ಖಚಿತಪಡಿಸಿದ್ದಾರೆ. ರಾಜಮೌಳಿಯವರ ಎಲ್ಲಾ ಚಿತ್ರಗಳಿಗೆ ಅವರ ತಂದೆ ವಿ.ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಾರೆ. ‘ಆರ್ಆರ್ಆರ್-2’ ಕಥೆಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಆರ್ಆರ್ಆರ್ ಸಿನಿಮಾವು ದೇಶದಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ. ಈ ಸಿನಿಮಾವು ಇತ್ತೀಚೆಗೆ ಜಪಾನ್ನಲ್ಲಿ ಬಿಡುಗಡೆಯಾಗಿದ್ದು ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ವಿಶ್ವಾದ್ಯಂತ ಈ ಚಿತ್ರವು 1100 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಬಾಹುಬಲಿ ಸಿನಿಮಾದ ಯಶಸ್ಸಿನ ನಂತರ ಎಸ್.ಎಸ್.ರಾಜಮೌಳಿ ಅವರು ‘ಆರ್ಆರ್ಆರ್’ ಸಿನಿಮಾದ ಮೂಲಕ ತಾನೊಬ್ಬ ಸಾರ್ವಕಾಲಿಕ ಹಿಟ್ ನಿರ್ದೇಶಕ ಎಂದು ಪ್ರೂವ್ ಮಾಡಿದ್ದಾರೆ. ಆರ್ಆರ್ಆರ್ ಸಿನಿಮಾವು ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೊಮರಂ ಭೀಮ್ ಅವರ ಜೀವನವನ್ನಾಧರಿಸಿದ ಕಾಲ್ಪನಿಕ ಕಥೆಯಾಗಿದೆ. ಇನ್ನು ಈ ಸಿನಿಮಾದ ನಿರ್ಮಾಪಕರು ಎಲ್ಲಾ ಜನಪ್ರಿಯ ವಿಭಾಗಗಳ ಪ್ರಶಸ್ತಿಗಳಿಗೆ ಸಲ್ಲಿಸಿದ್ದಾರೆ.
ಇನ್ನು ‘ಆರ್ಆರ್ಆರ್’ ಸಿನಿಮಾದ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ‘ಆರ್ಆರ್ಆರ್ ಚಿತ್ರದ ಯಶಸ್ಸು ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಮೈಲುಗಲ್ಲುಗಳನ್ನು ಸೃಷ್ಟಿಸುವ ಮೂಲಕ, ಭಾಷಾ ಮತ್ತು ಸಾಂಸ್ಕೃತಿಕ ಅಡೆತಡೆಗಳನ್ನು ಮೀರಿ ವಿಶ್ವದಾದ್ಯಂತ ಚಿತ್ರರಸಿಕರನ್ನ ಒಂದುಗೂಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸಿದೆ ಎಂದು ಭಾವಿಸುತ್ತೇವೆ, ನಮ್ಮ ಸಿನಿಮಾವನ್ನು ಪ್ರೀತಿಸಿ ಹುರಿದುಂಬಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:‘ನಮ್ಮ ಸಿನಿಮಾ RRR ಚಿತ್ರದ ಕಲೆಕ್ಷನ್ ಹಿಂದಿಕ್ಕಿದೆ; ಪಾಕಿಸ್ತಾನದ ಬಿಗ್ ಬಜೆಟ್ ಚಿತ್ರತಂಡದಿಂದ ಘೋಷಣೆ
ಇನ್ನು ಗೋವಾದಲ್ಲಿ ನವೆಂಬರ್ 20ರಿಂದ ನವೆಂಬರ್ 28, 2022 ರವರೆಗೆ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(International Film Festival)ದಲ್ಲಿ ಆಯ್ಕೆಯಾದ 20 ವಿಭಿನ್ನ ಚಿತ್ರಗಳ ಪೈಕಿ ಆರ್ಆರ್ಆರ್ ಚಿತ್ರವು ಒಂದಾಗಿದ್ದು ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ.
ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ