AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್ ವಾರ್​​ಗಳ ನಡುವೆ ಸೂಪರ್ ಸ್ಟಾರ್ ಮಮ್ಮುಟಿಯ ಮಾತೊಮ್ಮೆ ಕೇಳಿ

Mammootty speech: ನಮ್ಮ ಸ್ಟಾರ್ ಗ್ರೇಟು, ನಿಮ್ಮ ಸ್ಟಾರು ಕಳಪೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಸ್ಟಾರ್ ನಟರು ಸಹ ತಮ್ಮ ಇಮೇಜು ಎಲ್ಲಿ ಮಂಕಾಗುತ್ತದೆಯೋ, ಜನ ಎಲ್ಲಿ ನಮ್ಮನ್ನು ಕಡೆಗಣಿಸಿಬಿಡುತ್ತಾರೆಯೋ ಎಂಬ ಅಭದ್ರತೆ ಅವರಲ್ಲೂ ಇದೆ. ಇಂಥಹಾ ಸಂದರ್ಭದಲ್ಲಿ ಸ್ಟಾರ್ ನಟ ಮಮ್ಮುಟಿಯ ಮಾತುಗಳು ಪ್ರಸ್ತುತ ಎನಿಸುತ್ತವೆ.

ಸ್ಟಾರ್ ವಾರ್​​ಗಳ ನಡುವೆ ಸೂಪರ್ ಸ್ಟಾರ್ ಮಮ್ಮುಟಿಯ ಮಾತೊಮ್ಮೆ ಕೇಳಿ
Mammootty
ಮಂಜುನಾಥ ಸಿ.
|

Updated on: Dec 24, 2025 | 7:17 PM

Share

ಪ್ರಸ್ತುತ ಕರ್ನಾಟಕದಲ್ಲಿ ಫ್ಯಾನ್ಸ್ ವಾರ್ (Fans War) ಜೋರಾಗಿದೆ. ನಮ್ಮ ಸ್ಟಾರ್ ಗ್ರೇಟು, ನಿಮ್ಮ ಸ್ಟಾರು ಕಳಪೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಸ್ಟಾರ್​​ಗಳು ಅವರ ಆಪ್ತರು ಏನು ಕಡಿಮೆ ಇಲ್ಲ. ಅವರೂ ಸಹ ತಮ್ಮ ಸ್ಟಾರ್​​ ಗಿರಿಯನ್ನು ಅನವಶ್ಯಕ ಮಾತುಗಳ ಮೂಲಕ ಪ್ರದರ್ಶನಕ್ಕಿಡುತ್ತಿದ್ದಾರೆ. ತಮ್ಮ ಇಮೇಜು ಎಲ್ಲಿ ಮಂಕಾಗುತ್ತದೆಯೋ, ಜನ ಎಲ್ಲಿ ನಮ್ಮನ್ನು ಕಡೆಗಣಿಸಿಬಿಡುತ್ತಾರೆಯೋ ಎಂಬುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇಂಥಹಾ ಸಂದರ್ಭದಲ್ಲಿ ಭಾರತದ ಅಪ್ರತಿಮ ನಟರಲ್ಲಿ ಒಬ್ಬರಾದ, ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಮಮ್ಮುಟಿಯ ಮಾತುಗಳನ್ನು ಎಲ್ಲ ‘ಇಮೇಜು ಹುಚ್ಚಿನ’ ಸ್ಟಾರ್ ನಟರು ಕೇಳಿಸಿಕೊಳ್ಳಲೇ ಬೇಕು….

ಈಗ ಪ್ರತಿಯೊಬ್ಬ ಸ್ಟಾರ್ ನಟನಿಗೂ ಒಂದೊಂದು ಅಡ್ಡ ಹೆಸರುಗಳಿವೆ, ಒಬ್ಬರು ರಿಯಲ್ ಸ್ಟಾರ್, ಇನ್ನೊಬ್ಬರು ಸೂಪರ್ ಸ್ಟಾರ್, ಮತ್ತೊಬ್ಬರು ಇನ್ನೊಂದು ಸ್ಟಾರ್ ಹೀಗೆ. ಒಟ್ಟಾರೆ ಜನ ತಮ್ಮನ್ನು, ತಮ್ಮ ಹೆಸರನ್ನು ಬಹಳ ಕಾಲ ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದು ಅವರ ಸುಪ್ತ ಆಸೆ. ಇದೇ ಪ್ರಶ್ನೆಯನ್ನು ಸಂದರ್ಶಕನೊಬ್ಬ ಮಮ್ಮುಟಿ ಅವರಿಗೆ ಇತ್ತೀಚೆಗೆ ಕೇಳಿದ್ದಾರೆ. ‘ನಿಮಗೆ 74 ವರ್ಷ ಎಲ್ಲರೂ ಒಂದು ಹಂತಕ್ಕೆ ಬಂದ ಬಳಿಕ, ಇನ್ನು ಸಾಕು ಎಂದುಕೊಳ್ಳುತ್ತಾರೆ, ನಿಮಗೆ ಹಾಗೆ ಅನ್ನಿಸುತ್ತದೆಯೇ? ಎಂಬುದು ಸಂದರ್ಶಕನ ಪ್ರಶ್ನೆ.

‘ನನಗೆ ಸಾಕು ಎನಿಸುವುದಿಲ್ಲ, ನನಗೆ ದಣಿವು ಎನಿಸುವುದಿಲ್ಲ, ನನಗೆ ದಣಿವು ಎನಿಸಿದಾಗ ಅದೇ ನನ್ನ ಕೊನೆಯ ಉಸಿರಾಗುತ್ತದೆ. ನಾನು ಕೆಲಸ ಮಾಡುತ್ತಲೇ ಕೊನೆ ಉಸಿರೆಳೆಯಲು ಇಷ್ಟ ಪಡುತ್ತೀನಿ’ ಎನ್ನುತ್ತಾರೆ ಮಮ್ಮುಟಿ. ಕೂಡಲೇ ಸಂದರ್ಶಕ, ‘ನೀವು ಕೊನೆಯ ಉಸಿರಿನ ಬಗ್ಗೆ ಮಾತನಾಡಿದ್ದೀರಿ, ನೀವು ಹೋದ ಮೇಲೆ ಜನ ನಿಮ್ಮನ್ನು ಹೇಗೆ ನೆನಪಿಟ್ಟುಕೊಳ್ಳಬೇಕು ಎಂದು ನೀವು ಬಯಸಿದ್ದೀರಿ’ ಎನ್ನುತ್ತಾರೆ. ಮಮ್ಮುಟಿಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಇಂಥಹಾ ಒಂದು ಪ್ರಶ್ನೆಯನ್ನು ಸಂದರ್ಶಕ ಮಮ್ಮುಟಿ ಅವರಿಗೆ ಕೇಳುತ್ತಾರೆ. ಆಗ ಮಮ್ಮುಟಿ ಕೊಟ್ಟ ಉತ್ತರ ಸಂದರ್ಶಕನ ಕಣ್ಣಲ್ಲಿ ನೀರು ತರಿಸಿದೆ.

ಇದನ್ನೂ ಓದಿ:ಮಮ್ಮುಟಿ ಮೇಲೆ ಗಂಭೀರ ಆರೋಪ ಮಾಡಿದ ನಟ ಪರೇಶ್ ರಾವಲ್

‘ಎಷ್ಟು ಕಾಲ ಜನ ನೆನಪಿಟ್ಟುಕೊಳ್ಳುತ್ತಾರೆ. ಒಂದು ವರ್ಷ, ಹತ್ತು ವರ್ಷ, ಹದಿನೈದು ವರ್ಷ ಅಷ್ಟೆ. ಪ್ರಪಂಚ ಇರುವವರೆಗೆ ಜನ ನಿಮ್ಮನ್ನು ನೆನಪಿಟ್ಟುಕೊಳ್ಳಬೇಕು ಎಂದು ಆಶಿಸುವುದು ತಪ್ಪು. ಅದು ಯಾವ ಮಹನೀಯರಿಗೂ ಆಗಿಲ್ಲ. ಎಂತೆಥ ಮಹನೀಯರನ್ನೇ ಜನ ಸ್ಮರಿಸಿಕೊಂಡಿದ್ದು ಬಹಳ ಕಡಿಮೆ ಕಾಲಕ್ಕೆ. ಕಡಿಮೆ ಸಂಖ್ಯೆಯ ಮಹನೀಯರಷ್ಟೆ ಈಗಲೂ ಜನಸ್ಮೃತಿಯಲ್ಲಿದ್ದಾರೆ. ಎಷ್ಟೋ ಸಾವಿರಾರು ಅದ್ಭುತವಾದ ನಟರು ಇದ್ದರು, ಈಗಲೂ ಇದ್ದಾರೆ ಅವರಲ್ಲಿ ನಾನೂಬ್ಬ ಅಷ್ಟೆ. ಅಷ್ಟೋಂದು ನಟರ ನಡುವೆ ಜನ ಹೇಗೆ ನನ್ನನ್ನು ನೆನಪಿಟ್ಟುಕೊಂಡಾರು. ನಾನೇ ಈ ಜಗತ್ತಿನಲ್ಲಿ ಇಲ್ಲವಾದ ಮೇಲೆ ಜನ ನೆನಪಿಟ್ಟುಕೊಳ್ಳಬೇಕೆಂಬ ಅಪೇಕ್ಷೆ ಏಕೆ? ಅದೂ ಜಗತ್ತು ಇರುವ ವರೆಗೆ. ಆ ನಿರೀಕ್ಷೆಯೇ ಸರಿಯಲ್ಲ’ ಎಂದಿದ್ದಾರೆ ಮಮ್ಮುಟಿ.

ಮಹಾನ್ ನಟನೊಬ್ಬ, ಸ್ಟಾರ್ ಗಿರಿಯನ್ನು ಎಳ್ಳಷ್ಟು ತಲೆಗೆ ಹತ್ತಿಸಿಕೊಳ್ಳದೆ, ಇಷ್ಟು ಸರಳವಾಗಿ ನಿರ್ಗಮನದ ಬಗ್ಗೆ ಆಡಿದ ಮಾತುಗಳನ್ನು ಕೇಳಿ ಸಂದರ್ಶಕ ಕಣ್ಣೀರು ಹಾಕಿದ್ದಾರೆ. ಖಲೈದ್ ಅಲ್ ಅಮೆರಿ ಅವರ ಯೂಟ್ಯೂಬ್ ಅವರ ಚಾನೆಲ್​​ನಲ್ಲಿ ಸಂದರ್ಶನವನ್ನು ವೀಕ್ಷಿಸಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರ್ಕಲ್‌ ಮಧ್ಯೆ ಕೈಕೊಟ್ಟ ಡಕೋಟಾ ಸರ್ಕಾರಿ ಬಸ್
ಸರ್ಕಲ್‌ ಮಧ್ಯೆ ಕೈಕೊಟ್ಟ ಡಕೋಟಾ ಸರ್ಕಾರಿ ಬಸ್
ಸರ್ಕಾರಿ ಶಾಲೆ ಮಕ್ಕಳ ಹೆಲಿಕಾಪ್ಟರ್ ಸವಾರಿ: ಫುಲ್​​ ಜಾಲಿ ಜಾಲಿ
ಸರ್ಕಾರಿ ಶಾಲೆ ಮಕ್ಕಳ ಹೆಲಿಕಾಪ್ಟರ್ ಸವಾರಿ: ಫುಲ್​​ ಜಾಲಿ ಜಾಲಿ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಬಳ್ಳಾರಿಯಲ್ಲಿ ಶೋಧ ನಡೆಸುತ್ತಿರುವ ಕೇರಳ ಎಸ್ಐಟಿ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ