AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ ರಾಜ್​ ಕುಮಾರ್​ ಹಾಗೂ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ವ್ಯಕ್ತಿ ಅರೆಸ್ಟ್!​

ವರನಟ ಡಾ. ರಾಜ್​ಕುಮಾರ್​ ಮತ್ತು ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿನೋದ್ ಶೆಟ್ಟಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿನೋದ್ ಶೆಟ್ಟಿ ರಾಜ್​ ಕುಟುಂಬದವರ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ಮಾತನಾಡಿ, ವಿಡಿಯೋ ಹರಿಬಿಟ್ಟಿದ್ದರು. ಸದ್ಯ ಈ ವಿಚಾರವಾಗಿ ಅವರು ಕ್ಷಮೆ ಕೂಡ ಕೇಳಿದ್ದಾರೆ.

ಡಾ ರಾಜ್​ ಕುಮಾರ್​ ಹಾಗೂ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ವ್ಯಕ್ತಿ ಅರೆಸ್ಟ್!​
ವಿನೋದ್ ಶೆಟ್ಟಿ, ವರನಟ ಡಾ. ರಾಜ್​ಕುಮಾರ್
ಗಂಗಾಧರ​ ಬ. ಸಾಬೋಜಿ
|

Updated on:Sep 15, 2025 | 1:02 PM

Share

ಬೆಂಗಳೂರು, ಸೆಪ್ಟೆಂಬರ್​ 15: ವರನಟ ಡಾ. ರಾಜ್​ಕುಮಾರ್ (Dr. Rajkumar) ಹಾಗೂ ಅವರ ಕುಟುಂಬದವರ ಬಗ್ಗೆ ಇತ್ತೀಚೆಗೆ ಅವಹೇಳನಕಾರಿ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ವಿನೋದ್ ಶೆಟ್ಟಿ ಎಂಬುವವರು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ (Arrest). ಜಾಲತಾಣದಲ್ಲಿ ಹೆಸರಾಗುತ್ತೆ ಅಂತಾ ವಿನೋದ್ ಶೆಟ್ಟಿ ನಾಲಗೆ ಹರಿಬಿಟ್ಟಿದ್ದರು ಎನ್ನಲಾಗಿದೆ.

ನಡೆದದ್ದೇನು?

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ತೆರವು ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ವಾರ್​ ಕೂಡ ನಡೆದಿತ್ತು. ಇದೇ ವಿಚಾರವಾಗಿ ವಿನೋದ್ ಶೆಟ್ಟಿ, ವಿಡಿಯೋ ಒಂದನ್ನು ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ವಿಡಿಯೋಗೆ ಅಣ್ಣಾವ್ರ ಅಭಿಮಾನಿಗಳು ಕೆಟ್ಟದಾಗಿ ಮಾತನಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ರಾತ್ರೋರಾತ್ರಿ ವಿಷ್ಣುವರ್ಧನ್ ಸ್ಮಾರಕ ನೆಲಸಮ; ಹಬ್ಬದ ದಿನವೇ ನೋವಿನ ಸುದ್ದಿ

ಇದರಿಂದ ಕೆರಳಿದ ವಿನೋದ್ ಶೆಟ್ಟಿ, ಮತ್ತೊಂದು ವಿಡಿಯೋ ಹರಿಬಿಡುವ ಮೂಲಕ ರಾಜ್​ಕುಮಾರ್ ಹಾಗೂ ಕುಟುಂಬದವರ ಬಗ್ಗೆ ಏಕವಚನದಲ್ಲಿ ಕೆಟ್ಟದಾಗಿ ನಿಂದಿಸಿದ್ದರು. ಅಷ್ಟೇ ಅಲ್ಲದೆ ಬಾಯಿಗೆ ಬಂದಂತೆ ಮಾತಾಡಿ ತಾಕತ್ತಿದ್ದರೆ, ಚರ್ಚೆಗೆ ಬನ್ನಿ ಎಂದು ತಮ್ಮ ಫೋನ್​​ ನಂಬರ್​​ ನೀಡಿದ್ದರು.

ಇದನ್ನೂ ಓದಿ: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗ ಖರೀದಿಸಿದ ಕಿಚ್ಚ ಸುದೀಪ್

ಡಾ. ರಾಜ್​ಕುಮಾರ್​ ಹಾಗೂ ಅವರ ಕುಟುಂಬದವರ ಬಗ್ಗೆ ನಿಂದಿಸಿದ್ದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಣ್ಣಾವ್ರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ವಿನೋದ್ ಶೆಟ್ಟಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು.

ಕ್ಷಮೆ ಕೇಳಿದ್ದ ವಿನೋದ್ ಶೆಟ್ಟಿ

ಇನ್ನು ಕ್ಷಮೆ ಕೇಳಿರುವ ವಿನೋದ್ ಶೆಟ್ಟಿ, ರಾಜ್‌ ಕುಮಾರ್ ಅವರ ಬಗ್ಗೆ ನಾನು ಹಾಗೇ ಮಾತನಾಡಬಾರದಿತ್ತು. ಕರ್ನಾಟಕದ ಜನರಲ್ಲಿ ಕ್ಷಮೆ ಕೇಳುತ್ತೇನೆ. ರಾಜ್ ಅಭಿಮಾನಿಗಳು ವಿಷ್ಣು ಅಪ್ಪಾಜಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಆ ದ್ವೇಷದಿಂದ, ಸ್ಮಾರಕ ಒಡೆದು ಹಾಕಿದ್ದ ಬೇಸರದಲ್ಲಿ ನಾನು ಈ ರೀತಿ ಮಾತನಾಡಿ ವೀಡಿಯೋ ಮಾಡಿದ್ದೆ ಎಂದು ಹೇಳಿದ್ದರು. ಸದ್ಯ ಅವರು ಪೊಲೀಸರ ಅತಿಥಿ ಆಗಿದ್ದಾರೆ.

ವರದಿ: ವಿಕಾಸ್​. ಟಿವಿ9 ಕ್ರೈಂ 

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:54 pm, Mon, 15 September 25