Remdesivir: ರೆಮಿಡಿಸಿವರ್ ಇಂಜೆಕ್ಷನ್​ಗೆ ಬಾಲಿವುಡ್ ಕೊರಿಯೋಗ್ರಾಫರ್​ ಹೆಸರು; ಫನ್ನಿ ವಿಡಿಯೋ ವೈರಲ್​

|

Updated on: May 14, 2021 | 8:08 AM

Remo Dsouza: ದೇಶಾದ್ಯಂತ ಚರ್ಚೆ ಆಗುತ್ತಿರುವ ರೆಮಿಡಿಸಿವರ್​ ಬಗ್ಗೆ ಯುವಕಯೊಬ್ಬ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ. ಆ ಸಂದರ್ಭದಲ್ಲಿ ರೆಮಿಡಿಸಿವರ್​ ಕುರಿತಂತೆ ಇರುವ ಭ್ರಷ್ಟಾಚಾರದ ಬಗ್ಗೆ ಆತ ಮಾತನಾಡಿದ್ದಾನೆ.

Remdesivir: ರೆಮಿಡಿಸಿವರ್ ಇಂಜೆಕ್ಷನ್​ಗೆ ಬಾಲಿವುಡ್ ಕೊರಿಯೋಗ್ರಾಫರ್​ ಹೆಸರು; ಫನ್ನಿ ವಿಡಿಯೋ ವೈರಲ್​
ನೃತ್ಯ ನಿರ್ದೇಶಕ ರೆಮೋ ಡಿಸೋಜಾ
Follow us on

ಕೊರೊನಾ ವೈರಸ್​ ಎರಡನೇ ಅಲೆ ದೇಶಾದ್ಯಂತ ಜೋರಾಗಿ ಹಬ್ಬಿದ ಬಳಿಕ ಅತಿ ಹೆಚ್ಚು ಬಾರಿ ಕೇಳಿಬಂದಿದ್ದು ರೆಮಿಡಿಸಿವರ್​ ಚುಚ್ಚುಮದ್ದಿನ ಹೆಸರು. ರೆಮಿಡಿಸಿವರ್​ಗಾಗಿ ಕೊರೊನಾ ಸೋಂಕಿತರು ತುಂಬ ಕಷ್ಟಪಟ್ಟಿದ್ದಾರೆ. ಇದರ ಬೆಲೆ ಬಗ್ಗೆಯೂ ತಕರಾರು ಇದು. ಕಾಳಸಂತೆಯಲ್ಲಿ ಈ ಚುಚ್ಚುಮದ್ದನ್ನು ಮಾರಾಟ ಮಾಡಿದ್ದರ ಬಗ್ಗೆಯೂ ಜನಾಕ್ರೋಶ ವ್ಯಕ್ತವಾಗಿದೆ. ಇದರ ನಡುವೆ ಒಂದು ತಮಾಷೆಯ ಪ್ರಸಂಗ ನಡೆದಿದೆ. ರೆಮಿಡಿಸಿವರ್​ ಇಂಜೆಕ್ಷನ್​ಗೆ ಬಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಹೆಸರನ್ನು ಇಡಲಾಗಿದೆ! ಹಾಗಂತ ಇದು ಅಧಿಕೃತ ಅಲ್ಲ. ಒಂದು ತಮಾಷೆಯ ಪ್ರಸಂಗ ನಡೆದಿದೆ.

ದೇಶಾದ್ಯಂತ ಚರ್ಚೆ ಆಗುತ್ತಿರುವ ರೆಮಿಡಿಸಿವರ್​ ಬಗ್ಗೆ ಯುವಕಯೊಬ್ಬ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ. ಆ ಸಂದರ್ಭದಲ್ಲಿ ರೆಮಿಡಿಸಿವರ್​ ಕುರಿತಂತೆ ಇರುವ ಭ್ರಷ್ಟಾಚಾರದ ಬಗ್ಗೆ ಆತ ಮಾತನಾಡಿದ್ದಾನೆ. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಆತ ರೆಮಿಡಿಸಿವರ್​ ಎನ್ನುವ ಬದಲು ರೆಮೋ ಡಿಸೋಜಾ ಎಂದು ಹೇಳಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ಇದನ್ನು ಕಂಡು ಜನರು ಬಿದ್ದಿ ಬಿದ್ದು ನಗುತ್ತಿದ್ದಾರೆ.

ಸಿಕ್ಕಾಪಟ್ಟೆ ವೈರಲ್​ ಆಗಿರುವ ಈ ವಿಡಿಯೋವನ್ನು ಸ್ವತಃ ರೆಮೋ ಡಿಸೋಜಾ ಕೂಡ ನೋಡಿದ್ದಾರೆ. ಅದನ್ನು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳ ಮೂಲಕ ಶೇರ್​ ಮಾಡಿಕೊಂಡಿದ್ದಾರೆ. ‘ತಮಾಷೆಗಾಗಿ ಮಾತ್ರ. ಇದರ ಕೊನೇ ಕ್ಷಣವನ್ನು ಮಿಸ್​ ಮಾಡಿಕೊಳ್ಳಬೇಡಿ’ ಎಂಬ ಕ್ಯಾಪ್ಷನ್​ನೊಂದಿಗೆ ಅವರನ್ನು ಅದನ್ನು ಹಂಚಿಕೊಂಡಿದ್ದಾರೆ. ರೆಮೋ ಪೋಸ್ಟ್​ ಮಾಡಿರುವ ಈ ವಿಡಿಯೋಗೆ ಅನೇಕ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ. 20 ಲಕ್ಷ ಬಾರಿ ಈ ವಿಡಿಯೋವನ್ನು ಜನರು ನೋಡಿದ್ದಾರೆ. 8 ಸಾವಿರಕ್ಕೂ ಅಧಿಕ ಕಮೆಂಟ್ಸ್​ ಬಂದಿವೆ.

ಬಾಲಿವುಡ್​ನಲ್ಲಿ ಫೇಮಸ್​ ಆಗಿರುವ ರೆಮೋ ಡಿಸೋಜಾ ಅವರು ನೂರಾರು ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಎಬಿಸಿಡಿ, ಎಬಿಸಿಡಿ 2, ರೇಸ್​ 3, ಸ್ಟ್ರೀಟ್​ ಡ್ಯಾನ್ಸರ್​ ಮುಂತಾದ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿ ಅವರು ಕೆಲಸ ಮಾಡಿದ್ದಾರೆ. 2020ರ ಡಿಸೆಂಬರ್​ನಲ್ಲಿ ಅವರಿಗೆ ಹೃದಯಾಘಾತ ಆಗಿತ್ತು. ನಂತರ ಅವರು ಚೇತರಿಸಿಕೊಂಡರು. ಇತ್ತೀಚೆಗಷ್ಟೇ ಅವರು ಕೊವಿಡ್​ ಮೊದಲ ಡೋಸ್​ ವ್ಯಾಕ್ಸಿನ್​ ಪಡೆದುಕೊಂಡರು.

ಇದನ್ನೂ ಓದಿ:

ರೆಮಿಡಿಸಿವರ್ ಚುಚ್ಚುಮದ್ದು ಈಗಲೇ ತಲುಪಲಿದೆ! ರೈನಾ ಬಳಿಕ ಹರ್ಭಜನ್ ಬೇಡಿಕೆಗೆ ಸೋನು ಸೂದ್ ನೆರವು

ಕೊರೊನಾ ನಡುವೆ ಅಮಾನುಷ ಕೆಲಸ: ದೇಶದ ವಿವಿಧೆಡೆ ನಕಲಿ ರೆಮಿಡಿಸಿವಿರ್ ಮಾರಾಟ; ಪೊಲೀಸರಿಂದ ಖದೀಮರ ಬಂಧನ