ಮಕ್ಕಳಿಂದ ದೂರವಿದ್ದು ಬದುಕುತ್ತಿರುವ ರಣಬೀರ್ ಕಪೂರ್ ತಾಯಿ ನೀತು; ಕಾರಣ ಬಿಚ್ಚಿಟ್ಟ ನಟಿ
Ranbir Kapoor: ನೀವು ನನ್ನ ಹೃದಯದಲ್ಲಿರಿ. ಆದರೆ ತಲೆ ಮೇಲೆ ಕುಳಿತುಕೊಳ್ಳಬೇಡಿ ಎಂದು ಮಕ್ಕಳಾದ ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್ಗೆ ನೀತು ಕಪೂರ್ ಹೇಳಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ.
ಬಾಲಿವುಡ್ ನಟ ರಣಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಕೂಡ ಬಂದು ಕಾಲದಲ್ಲಿ ಜನಪ್ರಿಯ ನಟಿ. ಬಾಲ ಕಲಾವಿದೆಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಬಣ್ಣದ ಲೋಕದಲ್ಲಿ ಪಯಣ ಆರಂಭಿಸಿದ್ದರು. ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದರು. 1980ರಲ್ಲಿ ನಟ ರಿಷಿ ಕಪೂರ್ ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ರಿಷಿ ಕಪೂರ್ ವಿಧಿವಶರಾದರು. ಮಕ್ಕಳಾದ ರಣಬೀರ್ ಕಪೂರ್ ಮತ್ತು ರಿಧಿಮಾ ಕಪೂರ್ ಜೊತೆ ನೀತು ವಾಸಿಸುತ್ತಿಲ್ಲ. ಸದಾ ಅವರು ಮಕ್ಕಳಿಂದ ದೂರವಾಗಿಯೇ ಬದುಕುತ್ತಿದ್ದಾರೆ.
ಅಷ್ಟಕ್ಕೂ ನೀತು ಯಾಕೆ ಮಕ್ಕಳಿಂದ ದೂರವಿದ್ದು ಜೀವನ ನಡೆಸುತ್ತಿದ್ದಾರೆ? ಅವರ ಫ್ಯಾಮಿಲಿಯಲ್ಲಿ ಏನಾದರೂ ಕಿರಿಕ್ ಆಗಿದೆಯೇ? ಹಾಗೇನೂ ಇಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ನೀತು ಬಾಯಿ ಬಿಟ್ಟಿದ್ದಾರೆ. ತಮ್ಮ ಖಾಸಗಿತನಕ್ಕೆ ಸಮಯ ಸಿಗಬೇಕು ಎಂಬ ಕಾರಣಕ್ಕೆ ಅವರು ಮಕ್ಕಳಿಂದ ದೂರ ಇದ್ದಾರಂತೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
‘ನನ್ನ ಮಕ್ಕಳು ಅವರದೇ ಜೀವನದಲ್ಲಿ ಬ್ಯುಸಿ ಆಗಿರಬೇಕು ಎಂಬುದು ನನ್ನ ಆಸೆ. ನೀವು ನನ್ನ ಹೃದಯದಲ್ಲಿರಿ. ಆದರೆ ತಲೆ ಮೇಲೆ ಕುಳಿತುಕೊಳ್ಳಬೇಡಿ ಎಂದು ಅವರಿಗೆ ಹೇಳಿದ್ದೇನೆ. ಕಳೆದ ವರ್ಷ ಕೊರೊನಾ ಲಾಕ್ಡೌನ್ ಸಮಯದಲ್ಲಿ ರಿಧಿಮಾ ನನ್ನ ಜೊತೆ ಇದ್ದಳು. ಅವಳಿಂದಾಗಿ ನನಗೆ ಒಂದು ವರ್ಷ ಒತ್ತಡ ಎನಿಸಿತು. ದಯವಿಟ್ಟು ಹೋಗು ಎಂದು ಅವಳನ್ನು ತಳ್ಳಿದೆ. ಯಾಕೆಂದರೆ ನನಗೆ ಪ್ರೈವೆಸಿ ಬೇಕು. ಈ ಬದುಕಿಗೆ ನಾನು ಹೊಂದಿಕೊಂಡಿದ್ದೇನೆ’ ಎಂದು ನೀತು ಹೇಳಿದ್ದಾರೆ.
ಆದರೆ ಹಲವು ವರ್ಷಗಳ ಹಿಂದೆ ಅವರು ಈ ರೀತಿ ಇರಲಿಲ್ಲ. ಪುತ್ರಿ ರಿಧಿಮಾ ಉನ್ನತ ಶಿಕ್ಷಣಕ್ಕಾಗಿ ಲಂಡನ್ಗೆ ತೆರಳುವಾಗ ನೀತು ಕಣ್ಣೀರು ಸುರಿಸಿದ್ದರಂತೆ. ಆದರೆ ನಂತರ ಅವರಿಗೆ ಅದು ಅಭ್ಯಾಸ ಆಯಿತು. ಬಳಿಕ ರಣಬೀರ್ ಕಪೂರ್ ವಿದೇಶಕ್ಕೆ ಹೋಗುವಾಗ ನೀತು ಕಣ್ಣೀರು ಹಾಕಿರಲಿಲ್ಲ. ‘ನನ್ನ ಮೇಲೆ ನಿನಗೆ ಪ್ರೀತಿಯೇ ಇಲ್ಲ ಎಂದು ರಣಬೀರ್ ಹೇಳಿದ್ದೆ. ಆದರೆ ಅದು ಹಾಗಲ್ಲ. ಮಕ್ಕಳಿಂದ ದೂರವಾಗಿದ್ದು ಬದುಕುವುದು ನನಗೆ ಅಭ್ಯಾಸ ಆಗಿತ್ತು. ಅದಕ್ಕೆ ನಾನು ತಯಾರಾಗಿದ್ದೆ’ ಎಂದು ನೀತು ಹೇಳಿದ್ದಾರೆ.
ಇದನ್ನೂ ಓದಿ:
ರಣಬೀರ್-ಆಲಿಯಾಗೆ ಕೂಡಿ ಬರುತ್ತಿಲ್ಲ ಕಂಕಣ ಭಾಗ್ಯ; ಚಿಂತೆಗೊಳಗಾದ ಕುಟುಂಬದವರು