Radhe Movie: ಜೀ5ನಲ್ಲಿ ರಾಧೆ ಹವಾ; ಸಲ್ಮಾನ್ ಖಾನ್ ಅಬ್ಬರಕ್ಕೆ ಸರ್ವರ್ ಕ್ರ್ಯಾಶ್
ಜೀ5ನಲ್ಲಿ ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗಿತ್ತು. ಈ ವೇಳೆ ಸುಮಾರು 12.5 ಲಕ್ಷ ಜನರು ಒಮ್ಮೆಲೇ ಲಾಗಿನ್ ಆಗಲು ಪ್ರಯತ್ನಿಸಿದ್ದಾರೆ. ಇದರ ಪರಿಣಾಮವಾಗಿ ಅನೇಕರಿಗೆ ಜೀ5 ವೆಬ್ಸೈಟ್ ಮತ್ತು ಆ್ಯಪ್ ಓಪನ್ ಆಗಿಲ್ಲ.
ಸಲ್ಮಾನ್ ಖಾನ್ ನಟನೆಯ ರಾಧೆ: ಯುವರ್ ದಿ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಇಂದು (ಮೇ 13) ತೆರೆಗೆ ಬಂದಿದೆ. ಈ ಸಿನಿಮಾ ಚಿತ್ರಮಂದಿರಗಳ ಜತೆಗೆ ಒಟಿಟಿಯಲ್ಲೂ ಏಕಕಾಲಕ್ಕೆ ರಿಲೀಸ್ ಆಗಿದೆ. ಜೀ5ನಲ್ಲಿ ಸಿನಿಮಾ ವೀಕ್ಷಣೆ ಮಾಡೋಕೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಪರಿಣಾಮ ಜೀ5 ಸರ್ವರ್ ಕ್ರ್ಯಾಶ್ ಆಗಿದೆ.
ಜೀ5ನಲ್ಲಿ ಮಧ್ಯಾಹ್ನ 12 ಗಂಟೆಗೆ ರಿಲೀಸ್ ಆಗಿತ್ತು. ಈ ವೇಳೆ ಸುಮಾರು 12.5 ಲಕ್ಷ ಜನರು ಒಮ್ಮೆಲೇ ಲಾಗಿನ್ ಆಗಲು ಪ್ರಯತ್ನಿಸಿದ್ದಾರೆ. ಇದರ ಪರಿಣಾಮವಾಗಿ ಅನೇಕರಿಗೆ ಜೀ5 ವೆಬ್ಸೈಟ್ ಮತ್ತು ಆ್ಯಪ್ ಓಪನ್ ಆಗಿಲ್ಲ. ಈ ಬಗ್ಗೆ ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.
ಜೀ-ಪ್ಲೆಕ್ಸ್ನಲ್ಲಿ 249 ರೂಪಾಯಿಕೊಟ್ಟು ಸಿನಿಮಾ ನೋಡುವ ಆಯ್ಕೆ ನೀಡಲಾಗಿದೆ. ಇದು ಭಾರತದಲ್ಲಿ ವರ್ಕ್ ಆಗುವುದಿಲ್ಲ ಎಂದೇ ಅನೇಕರು ಭಾವಿಸಿದ್ದರು. ಈಗ ಸರ್ವರ್ ಕ್ರ್ಯಾಶ್ ಆಗಿರುವ ವಿಚಾರ ಈ ಆಲೋಚನೆಯನ್ನು ಸುಳ್ಳು ಮಾಡಿದೆ. ಶನಿವಾರ ಮತ್ತು ಭಾನುವಾರ ವೀಕ್ಷಣೆ ಹೆಚ್ಚುವ ನಿರೀಕ್ಷೆ ಇದೆ.
ಇನ್ನು, ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಯಲ್ಲಿ ಪೈರಸಿಯಾಗಿದೆ. ತಮಿಳ್ ರಾಕರ್ಸ್ ಸೇರಿ ಸಾಕಷ್ಟು ವೆಬ್ಸೈಟ್ಗಳಲ್ಲಿ ರಾಧೆ ಸಿನಿಮಾ ಲೀಕ್ ಆಗಿದೆ. ಇದರ ಬಗ್ಗೆ ಸಲ್ಲು ಅಭಿಮಾನಿಗಳು ಕಿಡಿಕಾರಿದ್ದಾರೆ. ಸಿನಿಮಾ ಲೀಕ್ ಮಾಡಿದವರ ವಿರುದ್ಧ ಸೈಬರ್ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದು ಸಿನಿಮಾಗೆ ಕೊಂಚ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.
@ZEE5India @BeingSalmanKhan zee 5 server crash not able to buy subscription I am already a zee5 prime member pic.twitter.com/PYnNyMeuGV
— Tushar Chaudhary (@Tushar_chaudhry) May 13, 2021
Whatt @ZEE5India Website Crashing Already? See To It Man @ZEE5helps!#Radhe #RadheDay pic.twitter.com/3UAv1w5H3U
— YOGESH (@i_yogesh22) May 12, 2021
ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಫ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಅವಕಾಶ ಇರುವ ಕಡೆಗಳಲ್ಲಿ ‘ರಾಧೆ’ ಚಿತ್ರಮಂದಿರಗಳಲ್ಲೇ ತೆರೆ ಕಾಣಲಿದೆ. ಉಳಿದಂತೆ ಡಿ2ಎಚ್, ಓಟಿಟಿ ಪ್ಲಾಟ್ಫಾರ್ಮ್ ಮುಂತಾದ ವೇದಿಕೆಗಳಲ್ಲಿ ಹಣ ಪಾವತಿಸಿ ಸಿನಿಮಾ ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂಲಕ ಹೊಸ ಸಾಧ್ಯತೆಗಳಿಗೆ ಚಿತ್ರರಂಗ ತೆರೆದುಕೊಳ್ಳುತ್ತಿದೆ.
ಇದನ್ನೂ ಓದಿ: Radhe Movie: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲೀಕ್ ಆಯ್ತು ರಾಧೆ ಸಿನಿಮಾ; ಸಲ್ಲು ಅಭಿಮಾನಿಗಳಿಗೆ ಬೇಸರ
Published On - 10:16 pm, Thu, 13 May 21