AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅರ್ಜುನ್ ರೆಡ್ಡಿ’ ಸಿನಿಮಾ ಕೈಬಿಟ್ಟು ಭಾರಿ ನಷ್ಟ ಅನುಭವಿಸಿದ ಆ ಹೀರೋ

Manchu Manoj: ‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ದೇವರಕೊಂಡ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಅಸಲಿಗೆ ಈ ಸಿನಿಮಾ ಮೊದಲು ಆಫರ್ ಆಗಿದ್ದು ಬೇರೊಬ್ಬ ನಟನಿಗೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಕೈಬಿಟ್ಟ ಆ ನಟ ಈಗ ಸಿನಿಮಾ ಅವಕಾಶಗಳಾಗಿ ಹೆಣಗಾಡುತ್ತಿದ್ದಾರೆ. ವಿಲನ್ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ. ಯಾರು ಆ ನಟ?

‘ಅರ್ಜುನ್ ರೆಡ್ಡಿ’ ಸಿನಿಮಾ ಕೈಬಿಟ್ಟು ಭಾರಿ ನಷ್ಟ ಅನುಭವಿಸಿದ ಆ ಹೀರೋ
Arjun Reddy
ಮಂಜುನಾಥ ಸಿ.
|

Updated on:May 30, 2025 | 11:19 AM

Share

‘ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ತೆಲುಗು ಚಿತ್ರರಂಗದ ಕಲ್ಟ್ ಸಿನಿಮಾಗಳ ಪಟ್ಟಿಗೆ ಸೇರಿಕೊಂಡು ಬಿಟ್ಟಿದೆ. ಭಿನ್ನ ರೀತಿಯ ಪಾತ್ರಗಳು, ದೇವದಾಸ್ ಕತೆಯನ್ನು ಆಧುನಿಕವಾಗಿ ಹೇಳಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾ ಭಾರಿ ದೊಡ್ಡ ಗೆಲುವು ಸಾಧಿಸಿದ್ದು ಮಾತ್ರವೇ ಅಲ್ಲದೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ಎಲ್ಲರಿಗೂ ಜನಪ್ರಿಯತೆ, ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟಿತು. ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಆದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹ ಸ್ಟಾರ್ ಆದರು. ನಾಯಕಿ ಶಾಲಿನಿ ಪಾಂಡೆ ಸಹ ಸ್ಟಾರ್ ಆದರು. ಆದರೆ ಆ ಸಿನಿಮಾದ ನಾಯಕ ಪಾತ್ರಕ್ಕೆ ಮೊದಲ ಆಯ್ಕೆ ವಿಜಯ್ ದೇವರಕೊಂಡ ಆಗಿರಲಿಲ್ಲ.

ತೆಲುಗು ಚಿತ್ರರಂಗದ ಆರಕ್ಕೇರದ ಮೂರಕ್ಕಿಳಿಯುವ ಹಾದಿಯಲ್ಲಿರುವ ನಟ ಮಂಚು ಮನೋಜ್ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾನಲ್ಲಿ ನಟಿಸಬೇಕಿತ್ತಂತೆ. 2013 ರಲ್ಲಿ ಸಂದೀಪ್ ರೆಡ್ಡಿ ವಂಗಾ ಮಂಚು ಮನೋಜ್ ಅವರಿಗೆ ‘ಅರ್ಜುನ್ ರೆಡ್ಡಿ’ ಸಿನಿಮಾದ ಕತೆ ಹೇಳಿದ್ದರಂತೆ. ಆದರೆ ವೈಯಕ್ತಿಕ ಕಾರಣಗಳಿಂದ ಆ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದರೆ ಆ ಸಿನಿಮಾ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರ ಇದೆ. ಅದ್ಭುತ ನಿರ್ದೇಶಕನ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ನಾನು ಕಳೆದುಕೊಂಡೆ’ ಎಂದಿದ್ದಾರೆ.

‘ಅರ್ಜುನ್ ರೆಡ್ಡಿ’ ಮಾತ್ರವೇ ಅಲ್ಲದೆ, ರಾಮ್ ಚರಣ್ ನಟಿಸಿದ ಸೂಪರ್ ಹಿಟ್ ಸಿನಿಮಾ ‘ರಚ್ಚ’, ನಾಗ ಚೈತನ್ಯ ನಟಿಸಿದ ‘ಆಟೋನಗರ್ ಸೂರ್ಯ’ ಸಿನಿಮಾಗಳು ಸಹ ಮೊದಲು ಮಂಚು ಮನೋಜ್​ಗೆ ಆಫರ್ ಆಗಿದ್ದವಂತೆ ಆದರೆ ವೈಯಕ್ತಿಕ ಕಾರಣಗಳಿಂದ ಆ ಸಿನಿಮಾಗಳಲ್ಲಿಯೂ ಮಂಚು ಮನೋಜ್ ನಟಿಸಲಿಲ್ಲವಂತೆ. ಆದರೆ ಹೀಗೆ ಅವಕಾಶಗಳನ್ನು ಕೈಬಿಟ್ಟ ಕಾರಣದಿಂದಲೇ ಮಂಚು ಮನೋಜ್ ಈಗ ವೃತ್ತಿ ಜೀವನದ ಇಳಿಜಾರಿನಲ್ಲಿದ್ದಾರೆ.

ಇದನ್ನೂ ಓದಿ:ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಮಂದಣ್ಣ ಭರ್ಜರಿ ಫೋಟೋಶೂಟ್

ಮಂಚು ಮನೋಜ್ 2017 ರ ಬಳಿಕ ಯಾವುದೇ ಸಿನಿಮಾದಲ್ಲಿ ನಾಯಕನಾಗಿ ನಟಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮಂಚು ಮನೋಜ್ ಮತ್ತೆ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಭೈರವಂ’ ಸಿನಿಮಾನಲ್ಲಿ ನಟಿಸಿದ್ದು, ಮೂವರು ನಾಯಕರಲ್ಲಿ ಒಬ್ಬರು. ‘ಮಿರಾಯ್’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ‘ವಾಟ್ ದಿ ಫಿಶ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:16 am, Fri, 30 May 25

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ