ಕೊನೆ ಆಗುತ್ತಿದೆ ‘ಮಜಾ ಟಾಕೀಸ್’; ಈ ವಾರ ಫಿನಾಲೆ ವೀಕ್
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ "ಮಜಾ ಟಾಕೀಸ್" ಈ ವಾರ ತನ್ನ ಗ್ರ್ಯಾಂಡ್ ಫಿನಾಲೆಯನ್ನು ಆಚರಿಸಲಿದೆ. ಸೃಜನ್ ಲೋಕೇಶ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಈ ಕಾರ್ಯಕ್ರಮವು ಅನೇಕ ಪ್ರತಿಭಾವಂತ ಕಲಾವಿದರನ್ನು ಪರಿಚಯಿಸಿದೆ. ಫಿನಾಲೆ ವಾರದಲ್ಲಿ ದೊಡ್ಡಣ್ಣ ಮತ್ತು ಚಿಕ್ಕಣ್ಣ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇಷ್ಟು ವರ್ಷಗಳ ಕಾಲ ಸೃಜನ್ ಲೋಕೇಶ್ (Srujan Lokesh) ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದ್ದುಕೊಂಡು ನಗಿಸುವ ಕೆಲಸ ಮಾಡಿದ್ದಾರೆ. ಜನವರಿಯಲ್ಲಿ ಅವರ ನೇತೃತ್ವದ ‘ಮಜಾ ಟಾಕೀಸ್’ ಶೋ ಆರಂಭ ಆಗಿತ್ತು. ಈಗ ಈ ಶೋ ಕೊನೆ ಆಗುತ್ತಿದೆ. ಈ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಾರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ ಎಂದು ವಾಹಿನಿಯವರು ಮಾಹಿತಿ ನೀಡಿದ್ದಾರೆ.
‘ಮಜಾ ಟಾಕೀಸ್’ ಶೋನ ನೇತೃತ್ವನ್ನು ಸೃಜನ್ ಲೋಕೇಶ್ ಅವರು ವಹಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರು ವಿಶೇಷ ಸ್ಥಾನ ಅಲಂಕರಿಸಿದ್ದರು. ಕುರಿ ಪ್ರತಾಪ್ ಸೇರಿದಂತೆ ಅನೇಕ ಕಲಾವಿದರು ಈ ಬಾರಿಯ ಮಜಾ ಮನೆಯಲ್ಲಿ ಇದ್ದರು. ಇಷ್ಟು ವಾರಗಳ ಕಾಲ ಶೋ ಪ್ರಸಾರ ಕಂಡಿತ್ತು. ಈಗ ‘ಮಜಾ ಟಾಕೀಸ್’ಗೆ ಗ್ರ್ಯಾಂಡ್ ಫಿನಾಲೆ ವೀಕ್ ಎನ್ನುವ ಪಟ್ಟವನ್ನು ಕೊಡಲಾಗಿದೆ.
‘ಮಜಾ ಟಾಕೀಸ್’ ಶೋನಲ್ಲಿ ಈ ವಾರ ದೊಡ್ಡಣ್ಣ, ಚಿಕ್ಕಣ್ಣ ಇಬ್ಬರೂ ಅತಿಥಿಗಳಾಗಿ ಆಗಮಿಸಿದ್ದಾರೆ. ಅವರು ಪ್ರೇಕ್ಷಕರನ್ನು ರಂಜಿಸೋ ಕೆಲಸ ಮಾಡಲಿದ್ದಾರೆ. ಕೆಲವು ಫನ್ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದ್ದಾರೆ. ಈ ಪೋಸ್ಟರ್ಗೆ ‘ಮಜಾ ಟಾಕೀಸ್ ಗ್ರಾಂಡ್ ಫಿನಾಲೆ ಎನ್ನುವ ಕ್ಯಾಪ್ಶನ್ ಕೊಡಲಾಗಿದೆ. ಅಂದರೆ ಈ ಶೋ ಪೂರ್ಣಗೊಳ್ಳೋದು ಖಚಿತವಾಗಿದೆ.
View this post on Instagram
ಕ್ವಾಟ್ಲೆ ಕಿಚನ್ ಹೆಸರಿನ ಹೊಸ ಶೋ ಬರಲಿದೆ. ಇದಕ್ಕೆ ಕುರಿ ಪ್ರತಾಪ್ ಹಾಗೂ ಅನುಪಮಾ ಗೌಡ ಅವರು ನಿರೂಪಕರಾಗಿ ಇರಲಿದ್ದಾರೆ. ಇವರು ಇಬ್ಬರು ಸೇರಿದರೆ ಫನ್ ಗ್ಯಾರಂಟಿ. ಹೊಸ ಶೋನಿಂದ ನಾವು ಅದನ್ನೇ ನಿರೀಕ್ಷಿಸಬಹುದು. ಈಗ ‘ಮಜಾ ಟಾಕೀಸ್’ ಬಳಿಕ ಆ ಸಮಯದಲ್ಲಿ ಈ ಶೋ ಪ್ರಸಾರ ಕಾಣಬಹುದು ಎಂದು ಊಹಸಿಲಾಗುತ್ತಿದೆ.
ಇದನ್ನೂ ಓದಿ: ‘ಮಜಾ ಟಾಕೀಸ್’ನಿಂದ ಬದಲಾಗಿದೆ ಹಲವರ ಬದುಕು; ವಿವರಿಸಿದ ಸೃಜನ್ ಲೋಕೇಶ್
ವಿಶೇಷ ಎಂದರೆ ಈಗಾಗಲೇ ಬಾಯ್ಸ್ vs ಗರ್ಲ್ಸ್ ಶೋ ಪೂರ್ಣಗೊಂಡಿದೆ. ಈ ಶೋ ಸಮಯಕ್ಕೆ ಈಗ ಧಾರಾವಾಹಿಗಳು ಪ್ರಸಾರ ಕಾಣಲಿವೆ. ಇದಲ್ಲದೆ, ಬೇರೆ ರಿಯಾಲಿಟಿ ಶೋಗಳನ್ನು ಕಲರ್ಸ್ ಅವರು ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







