ಬರಲಿದೆ ‘ಸೀತಾ ರಾಮ 2’; ಕ್ಲೈಮ್ಯಾಕ್ಸ್ನಲ್ಲಿ ಸಿಕ್ತು ಅಪ್ಡೇಟ್
Seetha Raama Serial: ಸೀತಾ ರಾಮ ಧಾರಾವಾಹಿಯು ಮೇ 30ರಂದು ತನ್ನ 490ನೇ ಮತ್ತು ಅಂತಿಮ ಎಪಿಸೋಡ್‌ನೊಂದಿಗೆ ಕೊನೆಗೊಂಡಿತು. ಆದರೆ, ಅಂತಿಮ ಎಪಿಸೋಡ್‌ನಲ್ಲಿ ಅಚ್ಚರಿಯ ಸುದ್ದಿಯೊಂದನ್ನು ಘೋಷಿಸಲಾಯಿತು. ಧಾರಾವಾಹಿಗೆ ಎರಡನೇ ಸೀಸನ್ ಬರಲಿದೆ ಎಂದು ತಿಳಿಸಲಾಗಿದೆ. ಈ ಧಾರಾವಾಹಿಯು ಮರಾಠಿ ಧಾರಾವಾಹಿಯ ರಿಮೇಕ್ ಆಗಿದೆ.

‘ಸೀತಾ ರಾಮ’ ಧಾರಾವಾಹಿಯು (Seetha Raama Serial) ತನ್ನ ಕೊನೆಯ ಎಪಿಸೋಡ್ನ ಮೇ 30ರಂದು ಪ್ರಸಾರ ಮಾಡಿದೆ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯು ಬರೋಬ್ಬರಿ 490 ಎಪಿಸೋಡ್ಗಳನ್ನು ಪ್ರಸಾರ ಮಾಡಿತ್ತು. ಈಗ ಧಾರಾವಾಹಿಯ ಕೊನೆಯ ದಿನದ ಎಪಿಸೋಡ್‌ನಲ್ಲಿ ಒಂದು ಅಚ್ಚರಿಯ ಮಾಹಿತಿಯನ್ನು ತಂಡದವರು ನೀಡಿದ್ದನ್ನು ನೀವು ಕಾಣಬಹುದು. ‘ಸೀತಾ ರಾಮ’ ಧಾರಾವಾಹಿಯು ಇಲ್ಲಿಗೆ ಕೊನೆ ಆಗಿಲ್ಲ. ಈ ಧಾರಾವಾಹಿಗೆ ಮತ್ತೊಂದು ಸೀಸನ್ ಬರಲಿದೆ ಎನ್ನುವ ಸೂಚನೆಯನ್ನು ತಂಡದವರು ನೀಡಿದ್ದಾರೆ.
‘ಸೀತಾ ರಾಮ’ ಧಾರಾವಾಹಿ 2023ರ ಜುಲೈ 17ರಂದು ಮೊದಲ ಎಪಿಸೋಡ್ ಪ್ರಸಾರ ಕಂಡಿತು. ಮೇ 30ರಂದು ಧಾರಾವಾಹಿ ಕೊನೆಯ ಎಪಿಸೋಡ್ ಪ್ರಸಾರ ಆಗಿದೆ. ಈ ಧಾರಾವಾಹಿಯು ಮರಾಠಿಯ ‘ಮಜಿ ತುಜಿ ರೇಶಿಮಾಗಢ’ ಧಾರಾವಾಹಿಯ ರಿಮೇಕ್ ಆಗಿದೆ. ಈ ಧಾರಾವಾಹಿ ಆರಂಭದಲ್ಲಿ ಮೆಚ್ಚುಗೆ ಪಡೆಯಿತು. ಆದರೆ, ಕೊನೆಯ ಹಂತದಲ್ಲಿ ಧಾರಾವಾಹಿಯು ಸಮಯ ಬದಲಾವಣೆ ಮತ್ತು ಕಥೆಯಲ್ಲಿ ಆದ ಕೆಲವು ಬದಲಾವಣೆ ಸಿಟ್ಟನ್ನು ತರಿಸಿತು.
‘ಸೀತಾ ರಾಮ’ ಧಾರಾವಾಹಿ ಮತ್ತೆ ಬರಲಿದೆಯಂತೆ. ಈ ಬಗ್ಗೆ ಧಾರಾವಾಹಿಯ ಕ್ಲೈಮ್ಯಾಕ್ಸ್ನಲ್ಲಿ ಮಾಹಿತಿ ನೀಡಲಾಗಿದೆ. ‘ಮರಳಿ ಬರಲಿದ್ದಾರೆ ಸೀತಾ ರಾಮ’ ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಅಂದರೆ ಮುಂದಿನದ ದಿನಗಲ್ಲಿ ಎರಡನೇ ಪಾರ್ಟ್ ಮಾಡುವ ಉದ್ದೇಶ ಅವರಿಗೆ ಇದೆ. ಆದರೆ, ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದಂತೂ ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ.
View this post on Instagram
ಈ ಮೊದಲು ‘ಗಟ್ಟಿ ಮೇಳ’ ಧಾರಾವಾಹಿಯು ಕೊನೆಗೊಂಡಿತ್ತು ಮತ್ತು ಇದು ಕೊನೆಗೊಳ್ಳುವಾಗ ಈ ಧಾರಾವಾಹಿಗೆ ಮತ್ತೊಂದು ಪಾರ್ಟ್ ಬರಲಿದೆ ಎನ್ನುವ ಸೂಚನೆ ನೀಡಲಾಗಿತ್ತು. ಆದರೆ, ಆ ರೀತಿ ಆಗಲೇ ಇಲ್ಲ. ಈಗ ‘ಸೀತಾ ರಾಮ’ ಧಾರಾವಾಹಿ ತಂಡದವರು ನೀಡದ ಭರವಸೆಯೂ ಇದೇ ರೀತಿ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಕೊನೆ ಆದ ‘ಸೀತಾ ರಾಮ’ ಧಾರಾವಾಹಿ; ಭಾರ್ಗವಿಯ ಗತಿ ಏನಾಯಿತು?
‘ಸೀತಾ ರಾಮ’ ಧಾರಾವಾಹಿಯ ಕೊನೆಯಲ್ಲಿ ಭಾರ್ಗವಿ ಕೆಟ್ಟವಳು ಎಂದು ಗೊತ್ತಾಗಿದೆ. ಈ ಕಾರಣದಿಂದಲೇ ಆಕೆಯನ್ನು ಜೈಲಿಗೆ ಹಾಕಲಾಗಿದೆ. ಒಂದೊಮ್ಮೆ ಎರಡನೇ ಪಾರ್ಟ್ ಮಾಡಿದರೆ ಇದರ ಕಥೆ ಮುಂದುವರಿಯುವ ಸಾಧ್ಯತೆ ಇರುತ್ತದೆ. ಆದರೆ, ಸದ್ಯಕ್ಕಂತೂ ಹಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







