ಕೊನೆ ಆದ ‘ಸೀತಾ ರಾಮ’ ಧಾರಾವಾಹಿ; ಭಾರ್ಗವಿಯ ಗತಿ ಏನಾಯಿತು?
Seetha Raama Serial: ‘ಸೀತಾ ರಾಮ’ ಧಾರಾವಾಹಿ ಕೊನೆ ಆಗಿದೆ. ಈ ವಾರ ಕೊನೆಯ ಸಂಚಿಕೆಗಳು ಪ್ರಸಾರ ಕಂಡಿದೆ. ಏಪ್ರಿಲ್ 30ರಂದು ಧಾರಾವಾಹಿ ಪೂರ್ಣಗೊಂಡಿದೆ.ಸೀತಾ ರಾಮ ಧಾರಾವಾಹಿಯ ಅಂತಿಮ ಸಂಚಿಕೆಯಲ್ಲಿ ಭಾರ್ಗವಿಯ ರಹಸ್ಯಗಳು ಬಯಲಾಗುತ್ತವೆ.ಆಕೆ ಮಾಡಿದ ಕೆಟ್ಟ ಕೆಲಸಗಳು ಹೊರ ಬಿದ್ದಿವೆ.

‘ಸೀತಾ ರಾಮ’ ಧಾರಾವಾಹಿಯು (Seetha Raama) ಇಂದು (ಮೇ 30) ತನ್ನ ಕೊನೆಯ ಎಪಿಸೋಡ್ ಅನ್ನು ಪ್ರಸಾರ ಮಾಡಿದೆ. ಇಂದು 490ನೇ ಎಪಿಸೋಡ್ ಪ್ರಸಾರ ಕಂಡಿತು. ಕೊನೆಯ ವಾರ ಹಲವು ತಿರುವುಗಳೊಂದಿಗೆ ಧಾರಾವಾಹಿ ಕೊನೆಗೊಂಡಿತು. ಈ ಧಾರಾವಾಹಿ ಪೂರ್ಣಗೊಂಡಿತು ಎನ್ನುವ ಬೇಸರವು ಅವರ ಅಭಿಮಾನಿಗಳಿಗೆ ಕಾಡುತ್ತಿದೆ. ಹಾಗಾದರೆ ಸೀತಾ ರಾಮ ಕೊನೆಯ ಎಪಿಸೋಡ್ ಹಾಗೂ ಅದಕ್ಕಿಂತ ಮೊದಲು ಏನಾಯಿತು ಎಂಬುದನ್ನು ತಿಳಿದುಕೊಳ್ಳೋಣ.
ರಾಮನ ತಂದೆ ಇಂದ್ರ ಹಾಗೂ ತಾಯಿ ವಾಣಿಯನ್ನು ಕೊಂದಿದ್ದು ಭಾರ್ಗವಿಯೇ ಆಗಿರುತ್ತಾಳೆ . ಭಾರ್ಗವಿಗೆ ಇಂದ್ರ ಮಾವನ ಮಗ. ಅವನನ್ನು ಮದುವೆ ಆಗಬೇಕು ಎಂಬುದು ಭಾರ್ಗವಿ ಆಸೆ ಆಗಿರುತ್ತದೆ. ಆದರೆ, ಈ ಆಸೆಗೆ ತಣ್ಣೀರು ಎರಚುವ ಕೆಲಸವನ್ನು ವಾಣಿ ಮಾಡುತ್ತಾಳೆ ಮತ್ತು ಆತನ ಮದುವೆ ಆಗುತ್ತಾಳೆ. ಈ ಕಾರಣಕ್ಕೆ ಇಬ್ಬರನ್ನೂ ಭಾರ್ಗವಿ ಹತ್ಯೆ ಮಾಡಿರುತ್ತಾಳೆ. ಆದರೆ, ಇಷ್ಟು ವರ್ಷ ಇದು ಗುಟ್ಟಾಗಿ ಇತ್ತು. ಆದರೆ, ಈ ಸತ್ಯ ಈಗ ಹೊರ ಬಿದ್ದಿದೆ. ಅಂದು ತೆಗೆದ ಫೋಟೋಗಳಿಂದ ವಿಚಾರವನ್ನು ರಿವೀಲ್ ಮಾಡಲಾಯಿತು.
ಸೀತಾಳು ಭಾರ್ಗವಿ ಎದುರೇ ಬಂದು ಈ ವಿಚಾರವನ್ನು ಹೇಳಿದಳು. ಆ ಬಳಿಕ ಸೀತಾಳನ್ನು ಭಾರ್ಗವಿ ಕಿಡ್ನ್ಯಾಪ್ ಮಾಡಿದಳು. ಸೀತಾಳ ಎದುರೇ ತಾನು ಮಾಡಿದ ಎಲ್ಲ ತಪ್ಪುಗಳನ್ನು ಆಕೆ ನೇರವಾಗಿ ಹೇಳಿಕೊಂಡಳು. ಆ ಜಾಗವನ್ನು ಎಲ್ಲರೂ ಹುಡುಕಿ ಬಂದರು. ಈ ವೇಳೆ ಸೀತಾಳಿಗೆ ಭಾರ್ಗವಿ ಗನ್ ಹಿಡಿದು ನಿಂತಿದ್ದಳು. ಆಗ ಭಾರ್ಗವಿ ಗಂಡನೇ ಬಂದು ಗನ್ ಕಿತ್ತುಕೊಂಡಿದ್ದಾನೆ ಮತ್ತು ಕೆನ್ನೆಗೆ ಬಾರಿಸಿದ್ದಾನೆ.
View this post on Instagram
ರಾಮನಿಗೆ ಭಾರ್ಗವಿ ಮಾಡಿದ ಕೆಲಸಗಳನ್ನು ಕೇಳಿ ರಾಮನಿಗೆ ನಂಬಲೇ ಆಗಲಿಲ್ಲ. ತಂದೆ-ತಾಯಿ, ಮಗಳನ್ನು ಕಿತ್ತುಕೊಂಡಿದ್ದು ಭಾರ್ಗವಿ ಎಂದು ಕೇಳಿ ಶಾಕ್ ಆಗಿದೆ. ‘ಕಾಲಿನಲ್ಲಿ ತೋರಿಸಿದ್ದನ್ನು ತಲೆಮೇಲೆ ಇಟ್ಟುಕೊಂಡು ಮಾಡಿದ್ದೇನೆ. ಹಣವೇ ಬೇಕು ಎಂದು ಹೇಳಿದ್ದರೆ ನಾನು ಉಟ್ಟ ಬಟ್ಟೆಯಲ್ಲೇ ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದೆ’ ಎಂದು ರಾಮ ಹೇಳುತ್ತಾ ಅತ್ತಿದ್ದಾನೆ. ಇಷ್ಟೆಲ್ಲ ಹೇಳುವಾಗ ಭಾರ್ಗವಿ ಸುಮ್ಮನೆ ಇದ್ದಳು.
‘ನಿನ್ನನ್ನು ತುಂಬಾನೇ ನಂಬಿದ್ದೆ. ಎಲ್ಲಾ ನಂಬಿಕೆ ಒಡೆದಿದೆ. ಅಪ್ಪ-ಅಮ್ಮ ಇಲ್ಲದೆ ಇರುವವರು ಅನಾಥರಲ್ಲ. ನಂಬಿದವರು ಜೊತೆಗಿಲ್ಲದವರೇ ಅನಾಥರು. ನನ್ನ ಮಗಳೂ ಬಿಟ್ಟು ಹೋದಳು’ ಎಂದು ರಾಮನು ಕಣ್ಣೀರು ಹಾಕಿದನು. ಇದೆಲ್ಲ ಹೇಳುವಾಗ ಸುಮ್ಮನೆ ಇದ್ದ ಭಾರ್ಗವಿ ಆಮೇಲೆ ಒಮ್ಮೆಲೇ ಕಿರುಚಾಡೋಕೆ ಆರಂಭಿಸಿದಳು. ನನಗೂ ನಿನಗೂ ಯಾವುದೇ ಸಂಬಂಧ ಇಲ್ಲ ಎಂದು ರಾಮನಿಗೆ ನೇರವಾಗಿ ಭಾರ್ಗವಿ ಹೇಳಿಯೇ ಬಿಟ್ಟಳು.
ಇದನ್ನೂ ಓದಿ: ಕ್ಲೈಮ್ಯಾಕ್ಸ್ನಲ್ಲಿ ಏರಿತು ‘ಸೀತಾ ರಾಮ’ ಟಿಆರ್ಪಿ; ಟಾಪ್ ಐದು ಧಾರಾವಾಹಿ ಲಿಸ್ಟ್ ಇಲ್ಲಿದೆ
‘ನಿನಗೆ ನೋವಾದಾಗಲ್ಲ ನನ್ನ ಮನಸ್ಸಿಗೆ ಸಂತೋಷ ಸಿಗುತ್ತಿತ್ತು. ನಾನು ತಪ್ಪು ಮಾಡಿಲ್ಲ. ನನ್ನ ಮನಸ್ಸಿಗೆ ಆದ ಗಾಯಕ್ಕೆ ಮುಲಾಮು ಹಚ್ಚಿಕೊಳ್ಳುತ್ತಿದ್ದೆ. ಆ ಮುಲಾಮೇ ನಿನ್ನ ನೋವು’ ಎಂದು ಭಾರ್ಗವಿ ಹೇಳಿದ್ದಾಳೆ. ಇಷ್ಟೆಲ್ಲ ನಡೆಯುವಾಗ ಭಾರ್ಗವಿ ಮಗನು ಅವಳ ಜೊತೆ ಸೇರದೇ ಹೋಗಿಯೇ ಬಿಟ್ಟನು. ಆ ಬಳಿಕ ರಾಮನು ಮಲೇಷ್ಯಾ ಹೋಗುವ ನಿರ್ಧಾರ ಮಾಡುತ್ತಾನೆ. ಆದರೆ, ಇದಕ್ಕೆ ಸೂರ್ಯಪ್ರಕಾಶ್ ದೇಸಾಯಿ ಅವಕಾಶ ಕೊಡೋದಿಲ್ಲ. ಭಾರ್ಗವಿ ಬಂಧನಕ್ಕೆ ಒಳಗಾಗುತ್ತಾಳೆ. ಈ ರೀತಿಯಲ್ಲಿ ಧಾರಾವಾಹಿ ಕೊನೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







