ಧಾರಾವಾಹಿ ಚಿತ್ರೀಕರಣ ಪ್ರಾರಂಭಿಸಿದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ
Smriti Irani: ಮಾಜಿ ಕೇಂದ್ರ ಸಚಿವೆ, ಬಿಜೆಪಿಯ ಪ್ರಮುಖ ರಾಷ್ಟ್ರೀಯ ನಾಯಕಿ ಎನಿಸಿಕೊಂಡಿರುವ ಸ್ಮೃತಿ ಇರಾನಿ ಇದೀಗ ಧಾರಾವಾಹಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಸ್ಮೃತಿ ಇರಾನಿಯವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿದ್ದ ಟಿವಿ ಲೋಕದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಧಾರಾವಾಹಿಯ ಎರಡನೇ ಸೀಸನ್ ಚಿತ್ರೀಕರಣದಲ್ಲಿ ಅವರು ಭಾಗವಹಿಸಿದ್ದಾರೆ.

ಧಾರಾವಾಹಿಗಳು (Serial) ಭಾರತದಲ್ಲಿ ಸಿನಿಮಾಗಳಿಗಿಂತಲೂ ಜನಪ್ರಿಯವಾಗಿದ್ದ ಸಮಯ ಒಂದಿತ್ತು. ‘ರಾಮಾಯಣ’, ‘ಓಂ ನಮಃ ಶಿವಾಯ’, ‘ಮಹಾಭಾರತ’, ‘ಅಲಿಫ್ ಲೈಲಾ’, ‘ಶಕ್ತಿಮಾನ್’, ಇನ್ನೂ ಕೆಲ ಧಾರಾವಾಹಿಗಳು ಜನಮಾನಸದಲ್ಲಿ ಸೇರಿಬಿಟ್ಟಿದ್ದವು. ಇವುಗಳಷ್ಟೆ ಅಥವಾ ಇವಕ್ಕಿಂತಲೂ ತುಸು ಹೆಚ್ಚೇ ಜನಪ್ರಿಯವಾಗಿದ್ದ ಕೌಟುಂಬಿಕ ಧಾರಾವಾಹಿ ಒಂದು ಪ್ರಸಾರವಾಗುತ್ತಿತ್ತು ಅದರ ಹೆಸರು ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’. ಮಾಜಿ ಕೇಂದ್ರ ಸಚಿವೆ, ಬಿಜೆಪಿಯ ರಾಷ್ಟ್ರೀಯ ನಾಯಕಿಯಾಗಿ ಗುರುತಿಸಿಕೊಂಡಿರುವ ಸ್ಮೃತಿ ಇರಾನಿಯ ಈ ಧಾರಾವಾಹಿ ಉತ್ತರ ಭಾರತದ ಅಥವಾ ಹಿಂದಿ ಭಾಷಿಕ ಪ್ರತಿ ಮನೆಯಲ್ಲಿಯೂ ಪ್ರಸಾರವಾಗುತ್ತಿತ್ತು. ಇದೀಗ ಈ ಧಾರಾವಾಹಿಯ ಎರಡನೇ ಸೀಸನ್ ಆರಂಭವಾಗಿದೆ.
ಮೊದಲ ಬಾರಿ 2000 ರಲ್ಲಿ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಧಾರಾವಾಹಿ ಪ್ರಸಾರವಾಗಿತ್ತು. ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಸ್ಮೃತಿ ಇರಾನಿಯವರಿಗೆ ಆಗ ಸುಮಾರು 25 ವರ್ಷ ವಯಸ್ಸು. ಧಾರಾವಾಹಿಯಲ್ಲಿ ಸೊಸೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಸೊಸೆ ತುಳಸಿಯ ಪಾತ್ರದಲ್ಲಿ ನಟಿಸಿದ್ದರು. ಬರೋಬ್ಬರಿ ಎಂಟು ವರ್ಷಗಳಿಗೂ ಹೆಚ್ಚು ಸಮಯ ಆಗ ಈ ಧಾರಾವಾಹಿ ಪ್ರಸಾರವಾಗಿತ್ತು. ಧಾರಾವಾಹಿಯ ಕತೆಯಲ್ಲಿ ಮೂರು ಜನರೇಷನ್ನ ಕತೆಯನ್ನು ಹೇಳಲಾಗಿತ್ತು. ಇದೀಗ ಈ ಧಾರಾವಾಹಿಯ ಎರಡನೇ ಸೀಸನ್ ಚಿತ್ರೀಕರಣ ಪ್ರಾರಂಭವಾಗಿದ್ದು, ಹಲವಾರು ವರ್ಷಗಳ ಬಳಿಕ ಸ್ಮೃತಿ ಇರಾನಿಯವರು ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
2013 ರಲ್ಲಿ ಕೊನೆಯ ಬಾರಿಗೆ ಸ್ಮೃತಿ ಇರಾನಿ ಧಾರಾವಾಹಿಯೊಂದರಲ್ಲಿ ನಟಿಸಿದ್ದರು. ಆ ಬಳಿಕ ಅವರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾದರು. ರಾಜಕೀಯದಲ್ಲಿಯೂ ಸಹ ಅವರಿಗೆ ಗೆಲುವಿನ ಮೇಲೆ ಗೆಲುವು, ಯಶಸ್ಸು ಧಕ್ಕುತ್ತಾ ಸಾಗಿ ಎರಡು ಅವಧಿಗೆ ಕೇಂದ್ರ ಮಂತ್ರಿಯೂ ಆದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿ ಸೋತಿರುವ ಸ್ಮೃತಿ ಇರಾನಿ ಇದೀಗ ತಮಗೆ ಜನಪ್ರಿಯತೆ ತಂದು ಕೊಟ್ಟ ಅದೇ ಟಿವಿ ಲೋಕಕ್ಕೆ ಮರಳಿದ್ದಾರೆ. ಅದೂ ತಮ್ಮ ಅತ್ಯಂತ ಯಶಸ್ವಿ ಧಾರಾವಾಹಿ ಮೂಲಕವೇ.
ಇದನ್ನೂ ಓದಿ:ಕೊನೆ ಆದ ‘ಸೀತಾ ರಾಮ’ ಧಾರಾವಾಹಿ; ಭಾರ್ಗವಿಯ ಗತಿ ಏನಾಯಿತು?
ಮೊದಲ ‘ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ’ ಧಾರಾವಾಹಿ ನಿರ್ಮಾಣ ಮಾಡಿದ್ದ ಏಕ್ತಾ ಕಪೂರ್ ಅವರೇ ಅದರ ಎರಡನೇ ಸೀಸನ್ ಅನ್ನು ನಿರ್ಮಿಸುತ್ತಿದ್ದಾರೆ. ಎರಡನೇ ಸೀಸನ್ ಭಿನ್ನವಾಗಿರಲಿದ್ದು, ಚಿತ್ರೀಕರಣದಲ್ಲಿಯೂ ಸಹ ಭಾರಿ ನಿಯಮಗಳನ್ನು ಹೇರಲಾಗಿದೆ. ಚಿತ್ರೀಕರಣ ಸ್ಥಳದಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇಲ್ಲ. ಸ್ಮೃತಿ ಇರಾನಿಯವರಿಗೆ ಚಿತ್ರೀಕರಣದ ಸಮಯದಲ್ಲಿ ಜೆಡ್ ಕ್ಯಾಟಗರಿ ಭದ್ರತೆ ವ್ಯವಸ್ಥೆ ಇನ್ನೂ ಕೆಲವಾರು ನಿಯಮಗಳನ್ನು ಅನುಸರಿಸಲಾಗುತ್ತಿದೆ.
ಈ ಧಾರಾವಾಹಿಯಲ್ಲಿ ಸ್ಮೃತಿ ಇರಾನಿಯವರ ಜೊತೆಗೆ ಮೊದಲ ಸೀಸನ್ನಲ್ಲಿ ಅವರ ಪತಿಯ ಪಾತ್ರದಲ್ಲಿ ನಟಿಸಿದ್ದ ಅಮರ್ ಉಪಾಧ್ಯಾಯ್ ಸಹ ಇರಲಿದ್ದಾರೆ. ಇವರುಗಳ ಬಾಲಿವುಡ್ ಸ್ಟಾರ್ ಮೌನಿ ರಾಯ್ ಸೇರಿದಂತೆ ಇನ್ನೂ ಕೆಲವು ಹೊಸ ಪ್ರತಿಭೆಗಳು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




