AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೆಸಿ ಪಾತ್ರ ಮಾಡಿಸಿಕೊಂಡು ಪ್ರಭಾಸ್ ಬಗ್ಗೆ ಲಘುವಾಗಿ ಮಾತನಾಡಿದ ನಟ

Prabhas and Manchu Vishnu: ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾನಲ್ಲಿ ಪ್ರಭಾಸ್ ಒಂದು ರೂಪಾಯಿ ಸಹ ಹಣ ಪಡೆಯದೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅದರಿಂದಾಗಿ ಸಿನಿಮಾಕ್ಕೆ ಹೆಚ್ಚಿನ ಮೌಲ್ಯ ಬಂದಿದೆ. ಆದರೆ ಈಗ ತಮಗೆ ಸಹಾಯ ಮಾಡಿದ ಪ್ರಭಾಸ್ ನಟನೆ ಬಗ್ಗೆ ಮಂಚು ವಿಷ್ಣು ಲಘುವಾಗಿ ಮಾತನಾಡಿದ್ದಾರೆ.

ಕರೆಸಿ ಪಾತ್ರ ಮಾಡಿಸಿಕೊಂಡು ಪ್ರಭಾಸ್ ಬಗ್ಗೆ ಲಘುವಾಗಿ ಮಾತನಾಡಿದ ನಟ
Manchu Vishnu Prabhas
ಮಂಜುನಾಥ ಸಿ.
|

Updated on: Apr 26, 2025 | 8:09 AM

Share

ನಟ ಪ್ರಭಾಸ್ (Prabhas) ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ವಿರಳ. ಬಾಲಿವುಡ್​ನ ಸ್ಟಾರ್ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡುವಂತೆ ಆಹ್ವಾನ ಬಂದಾಗಲೂ ಅವರು ಸರಳವಾಗಿ ನಿರಾಕರಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಆ ಸಿನಿಮಾದ ನಾಯಕ ಮಂಚು ವಿಷ್ಣು, ಸ್ಟಾರ್ ನಟನೇನೂ ಅಲ್ಲ. ಅವರ ತಂದೆ ಮೋಹನ್ ಬಾಬು ಮೇಲಿನ ಪ್ರೀತಿಗೆ, ಗೆಳೆಯ ಮಂಚು ವಿಷ್ಣುಗೆ ಸಹಾಯ ಆಗಲೆಂದು ಒಂದು ರೂಪಾಯಿ ಸಹ ಹಣ ಪಡೆಯದೆ ಅತಿಥಿ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರು. ಆದರೆ ಈಗ ಮಂಚು ವಿಷ್ಣು, ತಮಗೆ ಸಹಾಯ ಮಾಡಿದ ಪ್ರಭಾಸ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

‘ಕಣ್ಣಪ್ಪ’ ಸಿನಿಮಾದ ಪ್ರಚಾರದಲ್ಲಿ ಭಾಗಿ ಆಗಿರುವ ಮಂಚು ವಿಷ್ಣು, ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಪ್ರಭಾಸ್ ಒಬ್ಬ ಸಾಮಾನ್ಯ ನಟ. ಆತನ ನಟನೆ ನನಗೆ ಸಾಮಾನ್ಯ ಎನಿಸಿತು. ಆತ ಲೆಂಜೆಂಡರಿ ನಟ ಅಲ್ಲ. ಆತ ಲೆಂಜಡರಿ ನಟ ಎನಿಸಿಕೊಳ್ಳಲು ಇನ್ನೂ ಸಾಕಷ್ಟು ಸಮಯ ಇದೆ. ಆತ ಈಗಿನ್ನೂ ಸಾಮಾನ್ಯ ನಟ. ಆದರೆ ಮೋಹನ್​ಲಾಲ್ ಒಬ್ಬ ಲೆಜೆಂಡರಿ ನಟ’ ಎಂದಿದ್ದಾರೆ. ಪ್ರಭಾಸ್ ಅನ್ನು ಸಾಮಾನ್ಯ ನಟ ಎನ್ನುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ.

ಆದರೆ ಅದೇ ಸಂದರ್ಶನದಲ್ಲಿ ಮಾತನಾಡಿರುವ ಮಂಚು ವಿಷ್ಣು, ‘ಸಮಯ ಕಳೆದಂತೆ ಪ್ರಭಾಸ್ ಸಹ ಖಂಡಿತವಾಗಿ ಲೆಜೆಂಡರಿ ನಟ ಆಗುತ್ತಾರೆ. ಮೋಹನ್​ಲಾಲ್ ಅವರನ್ನು ಸಮಯವೇ ಲೆಜೆಂಡರಿ ನಟನನ್ನಾಗಿ ಮಾಡಿದೆ. ಪ್ರಭಾಸ್ ಸಹ ಲೆಜೆಂಡರಿ ನಟ ಆಗುತ್ತಾರೆಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ ಮಂಚು ವಿಷ್ಣು.

ಇದನ್ನೂ ಓದಿ:ವಿಡಿಯೋ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ: ಮಂಚು ವಿಷ್ಣು ಎಚ್ಚರಿಕೆ

‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪನ ಕತೆಯನ್ನು ಒಳಗೊಂಡಿದೆ. ಆದರೆ ಸಿನಿಮಾದ ಟ್ರೈಲರ್ ನೋಡಿದರೆ ಇದೊಂದು ಭಕ್ತಿ ಪ್ರಧಾನ ಸಿನಿಮಾ ಇದ್ದಂತಿಲ್ಲ ಬದಲಿಗೆ ಆಕ್ಷನ್ ಸಿನಿಮಾ ಇದ್ದಂತಿದೆ. ಸತತ ಸೋಲು ಕಂಡು ತೆಲುಗು ಚಿತ್ರರಂಗದಲ್ಲಿ ಸ್ಥಾನವೇ ಇಲ್ಲದಂತಾಗಿರುವ ಮಂಚು ವಿಷ್ಣು ಅನ್ನು ಮತ್ತೆ ತೆಲುಗು ಚಿತ್ರರಂಗದಲ್ಲಿ ನೆಲೆಗೊಳಿಸಲು ಅವರ ತಂದೆ ಮೋಹನ್ ಬಾಬು ‘ಕಣ್ಣಪ್ಪ’ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡುತ್ತಿದ್ದು, ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಮಲಯಾಳಂ ಸ್ಟಾರ್ ನಟ ಮೋಹನ್​ಲಾಲ್ ಅವರನ್ನು ಸಹ ಅತಿಥಿ ಪಾತ್ರಗಳಲ್ಲಿ ಹಾಕಿಕೊಂಡಿದ್ದಾರೆ. ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ