AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವರಿಲ್ಲದೆ ಕಥೆಯೇ ಇಲ್ಲ’; ಸುದೀಪ್ ಧ್ವನಿಯಲ್ಲಿ ಬಂತು ‘ಮ್ಯಾಂಗೋ ಪಚ್ಚ’ ಟೀಸರ್

ಕಿಚ್ಚ ಸುದೀಪ್ ಧ್ವನಿಯಲ್ಲಿ ‘ಮ್ಯಾಂಗೋ ಪಚ್ಚ’ ಟೀಸರ್ ಬಿಡುಗಡೆ. ಸಂಚಿತ್ ಸಂಜೀವ್ ನಟನೆಯ ಈ ಸಿನಿಮಾ ಜೂನ್ 5ರಂದು ತೆರೆಗೆ ಬರಲಿದೆ. 2002ರ ಮೈಸೂರು ಹಿನ್ನೆಲೆಯ ಕಥೆಯನ್ನು ಚಿತ್ರ ಹೊಂದಿದೆ. ಟೀಸರ್‌ನಲ್ಲಿ ಪಾತ್ರಗಳ ಪರಿಚಯವಿದ್ದು, ಸುದೀಪ್ ಮೈಸೂರನ್ನು ಕಥೆಯ ಭಾಗವೆಂದು ಬಣ್ಣಿಸಿದ್ದಾರೆ. ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್ ಮತ್ತಿತರರು ತಾರಾಗಣದಲ್ಲಿದ್ದಾರೆ. ವಿವೇಕ್ ನಿರ್ದೇಶಿಸಿದ್ದಾರೆ.

‘ಇವರಿಲ್ಲದೆ ಕಥೆಯೇ ಇಲ್ಲ’; ಸುದೀಪ್ ಧ್ವನಿಯಲ್ಲಿ ಬಂತು ‘ಮ್ಯಾಂಗೋ ಪಚ್ಚ’ ಟೀಸರ್
ಮ್ಯಾಂಗೋ ಪಚ್ಚ
ರಾಜೇಶ್ ದುಗ್ಗುಮನೆ
|

Updated on: May 21, 2026 | 3:15 PM

Share

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 5ರಂದು ತೆರೆಗೆ ಬರುತ್ತಿದೆ. ಈಗ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​​​ನಲ್ಲಿ ‘ಮ್ಯಾಂಗೋ ಪಚ್ಚ’ದ ಪಾತ್ರಗಳನ್ನು ಪರಿಚಯಿಸಲಾಗಿದೆ. ಕಿಚ್ಚ ಸುದೀಪ್ ಧ್ವನಿಯಲ್ಲಿ ಟೀಸರ್ ಬಂದಿದೆ ಎಂಬುದು ವಿಶೇಷ. ಸಿನಿಮಾದ ಟ್ರೇಲರ್​ಗಾಗಿ ಅಭಿಮಾನಿಗಳು ಕಾದಿದ್ದಾರೆ.

‘ಮ್ಯಾಂಗೋ ಪಚ್ಚ’ ಚಿತ್ರದ ಕಥೆ ಸಾಗೋದು ಮೈಸೂರಿನಲ್ಲಿ. ಹಾಗಂತ ಪ್ರೆಸೆಂಟ್​​​ನಲ್ಲಿ ನಡೆಯೋ ಕಥೆಯಲ್ಲ. 2002ರ ಕಾಲಘಟ್ಟದ ಕಥೆ ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಇದೆ. ಈ ಸಿನಿಮಾದ ಟೀಸರ್​​​ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದೆ. ಮೈಸೂರು ಕೂಡ ಸಿನಿಮಾದ ಒಂದು ಪಾತ್ರದ ರೀತಿ ವರ್ತಿಸುವ ಸೂಚನೆಯನ್ನು ಟೀಸರ್​​ನಲ್ಲಿ ನೀಡಲಾಗಿದೆ. ಸಿನಿಮಾದಲ್ಲಿ ಬರುವ ಪಾತ್ರ ಹಾಗೂ ಮೈಸೂರು ಇಲ್ಲದೆ ಚಿತ್ರದ ಕಥೆಯೇ ಇಲ್ಲ ಎನ್ನುತ್ತಾರೆ ಕಿಚ್ಚ.

ಯುವ ಹೀರೋಗಳು ಬಂದು, ಚಿತ್ರರಂಗದಲ್ಲಿ ಮಿಂಚಿ ಸ್ಟಾರ್ ಹೀರೋಗಳಾಗಿ ಬೆಳೆದ ಅದೆಷ್ಟೋ ಉದಾಹರಣೆ ಇದೆ. ಸುದೀಪ್​ ಅವರಿಂದ ಆರಂಭಿಸಿ ಯಶ್​​ವರೆಗೆ ಎಲ್ಲರೂ ಯಂಗ್ ಹೀರೋ ಆಗಿ ಗುರುತಿಸಿಕೊಂಡು, ನಂತರ ತಮ್ಮನ್ನು ತಾವು ಸಾಬೀತು ಮಾಡಿ ಈಗ ಸ್ಟಾರ್ ಹೀರೋಗಳಾಗಿ ಬೆಳೆದಿದ್ದಾರೆ. ಸಂಚಿತ್ ಕೂಡ ಇದೇ ಸಾಲಿಗೆ ಸೇರುತ್ತಾರಾ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ದೃಶ್ಯಂ 3’ ಹೇಗಿದೆ? ನೆಟ್ಟಿಗರು ಕೊಟ್ಟ ಪಾರದರ್ಶಕ ವಿಮರ್ಶೆ ಇಲ್ಲಿದೆ

‘ಸುಪ್ರುಯಾನ್ವಿ ಪಿಕ್ಚರ್ಸ್ ಸ್ಟುಡಿಯೋ’ ಹಾಗೂ ಕೆಆರ್​​ಜಿ ಒಟ್ಟಾಗಿ ‘ಮ್ಯಾಂಗೋ ಪಚ್ಚ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಸಂಚಿತ್ ಸಂಜೀವ್ ಜೊತೆ ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್​, ಮಯೂರ್ ಪಟೇಲ್, ಹರಿಣಿ ಶ್ರೀಕಾಂತ್, ಹಂಸ ನಾರಾಯಣಸ್ವಾಮಿ, ಉಗ್ರಂ ಮಂಜು ಸಿನಿಮಾದಲ್ಲಿ ನಟಿಸಿದ್ದಾರೆ. ವಿವೇಕ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ