ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಮಂಜುಗೆ ದಿವ್ಯಾ ಸುರೇಶ್ ಮುಟ್ಟಿದ್ರೆ ಮೈಯೆಲ್ಲಾ ಪುಳಕ!
ಬಿಗ್ ಬಾಸ್ ಮನೆಯಲ್ಲಿ ಇಬ್ಬರು ದಿವ್ಯಾ ಜತೆ ಮಂಜು ಅನ್ಯೋನ್ಯವಾಗಿದ್ದರು. ಆದರೆ, ಇತ್ತೀಚೆಗೆ ದಿವ್ಯಾ ಉರುಡುಗ ಬಗ್ಗೆ ಅವರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇದು ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಬಿಗ್ ಬಾಸ್ ಮನೆ ಸೇರಿರುವ ಮಂಜು ಅವರು ಇತ್ತೀಚೆಗೆ ತಮ್ಮ ಕಷ್ಟದ ಜೀವನದ ಬಗ್ಗೆ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಜೀವನದಲ್ಲಿ ತಾವು ಎಲ್ಲವನ್ನೂ ಕಳೆದುಕೊಂಡು ನಂತರ ಇಲ್ಲಿಗೆ ಬಂದಿರುವ ಬಗ್ಗೆಯೂ ಹೇಳಿಕೊಂಡಿದ್ದರು. ಈ ಮಧ್ಯೆ, ಬಿಗ್ ಬಾಸ್ ಮನೆಯಲ್ಲಿ ಅವರು ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಇಬ್ಬರ ಜತೆಯೂ ಫ್ಲರ್ಟ್ ಮಾಡುತ್ತಿದ್ದರು. ದಿವ್ಯಾ ಉರುಡುಗ ಅವರು ಅರವಿಂದ್ ಜತೆ ಹೆಚ್ಚು ಒಡನಾಟ ಬೆಳೆಸಿಕೊಂಡ ನಂತರ ಅವರ ಸಂಘವನ್ನು ಮಂಜು ಕಡಿಮೆ ಮಾಡಿದ್ದಾರೆ. ಈ ಮಧ್ಯೆ, ತಮಗೆ ದಿವ್ಯಾ ಸುರೇಶ್ ಮುಟ್ಟಿದ್ರೆ ಮಾತ್ರ ಮೈ ಜುಂ ಅನ್ನುತ್ತೆ ಎನ್ನುವ ಬಗ್ಗೆಯೂ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಬ್ಬರು ದಿವ್ಯಾ ಜತೆ ಮಂಜು ಅನ್ಯೋನ್ಯವಾಗಿದ್ದರು. ಆದರೆ, ಇತ್ತೀಚೆಗೆ ದಿವ್ಯಾ ಉರುಡುಗ ಬಗ್ಗೆ ಅವರು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇದು ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಇಂದು ಕಲರ್ಸ್ ಕನ್ನಡ ವಾಹಿನಿ ಅನ್ಸೀನ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೊದಲ್ಲಿ ಮಂಜು ಅಕ್ಕ-ಪಕ್ಕ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಕೂತಿದ್ದರು. ಸಾಮಾನ್ಯವಾಗಿ ಯಾರದದ್ದಾರೂ ಕಿವಿ ಒಳಗೆ ಬೆರಳು ಆಡಿಸಿದರೆ ಕಚಗುಳಿ ಇಟ್ಟಂತಾಗುತ್ತದೆ. ದಿವ್ಯಾ ಉರುಡುಗ ಕೂಡ ಇದನ್ನೇ ಮಾಡಿದ್ದಾರೆ.
ಮಂಜು ಕಿವಿ ಒಳಗೆ ದಿವ್ಯಾ ಉರುಡುಗ ಬೆರಳು ಆಡಿಸಿದ್ದಾರೆ. ಆದರೆ, ಮಂಜು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನು ನೋಡಿದ ದಿವ್ಯಾ ಅಚ್ಚರಿಗೊಂಡಿದ್ದಾರೆ. ಏನು ಆಗ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಮಂಜು ಎಲ್ಲಾ ಜ್ಞಾನೇಂದ್ರಿಯಗಳನ್ನು ಕಳೆದುಕೊಂಡು ಬಿಟ್ಟಿದ್ದೇನೆ ಎಂದು ನಕ್ಕಿದ್ದಾರೆ. ಈ ವೇಳೆ ದಿವ್ಯಾ ಸುರೇಶ್ ಕಿವಿ ಮುಟ್ಟಿದ್ದಾರೆ. ಆಗ ಮಂಜು ಕೀಲಿ ಕೊಟ್ಟಂತೆ ಕುಣಿದಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
View this post on Instagram
ಇದನ್ನೂ ಓದಿ: BBK8: ಬಿಗ್ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!