ಚಿತ್ರರಂಗದಲ್ಲಿ 17 ವರ್ಷ ಕಳೆದ ಶುಭಾ ಪೂಂಜಾಗೆ ಈ ಗತಿಯೇ; ಮರುಗಿದ ಮಂಜು
ಬಿಗ್ ಬಾಸ್ ಮನೆಯಲ್ಲಿ ಏಪ್ರಿಲ್ 20ರ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆ ಖಾಲಿ ಖಾಲಿ ಆಗಿದೆ. ಮನೆಯಲ್ಲಿ ದಿನಸಿ ಸಾಮಾನುಗಳಿಲ್ಲ. ಇನ್ನು, ಹಾಯಾಗಿ ಮಲಗೋಣ ಎಂದರೆ ಬೆಡ್ ಶೀಟ್, ಬೆಡ್ ಎರಡೂ ಇಲ್ಲ.
ಬಿಗ್ ಬಾಸ್ ಮನೆಯ ಸದಸ್ಯರು ನಿತ್ಯ ಒಂದೊಂದು ಟಾಸ್ಕ್ ಎದುರಿಸುತ್ತಲೆ ಇರುತ್ತಾರೆ. ಸ್ಪರ್ಧೆ ನೀಡಿದಾಗ ಎದುರಿಸುವ ಟಾಸ್ಕ್ನ ಜತೆಗೆ, ಮನೆ ಸದಸ್ಯರ ಜತೆ ಹೊಂದಿಕೊಂಡು ಹೋಗುವುದು ಕೂಡ ಒಂದು ಟಾಸ್ಕ್. ಈಗ ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸ ಸವಾಲೊಂದು ಎದುರಾಗಿದೆ. ಮನೆಯ ಎಲ್ಲಾ ಸೌಲಭ್ಯವನ್ನು ಬಿಗ್ ಬಾಸ್ ಕಿತ್ತುಕೊಂಡಿದ್ದಾರೆ. ಹೀಗಾಗಿ ಟಾಸ್ಕ್ ಮೂಲಕ ಎಲ್ಲವನ್ನೂ ವಾಪಸ್ ಪಡೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಏಪ್ರಿಲ್ 20ರ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆ ಖಾಲಿ ಖಾಲಿ ಆಗಿದೆ. ಮನೆಯಲ್ಲಿ ದಿನಸಿ ಸಾಮಾನುಗಳಿಲ್ಲ. ಅಡುಗೆ ಮಾಡೋಕೆ ಪಾತ್ರೆಗಳಿಲ್ಲ. ಶೌಚಾಲಯದಲ್ಲಿ ಬಕೆಟ್ಗಳಿಲ್ಲ. ಇನ್ನು, ಹಾಯಾಗಿ ಮಲಗೋಣ ಎಂದರೆ ಬೆಡ್ ಶೀಟ್, ಬೆಡ್ ಎರಡೂ ಇಲ್ಲ. ಈ ಎಲ್ಲವನ್ನೂ ಬಿಗ್ ಬಾಸ್ ನೀಡುವ ಟಾಸ್ಕ್ ಮೂಲಕ ಗೆಲ್ಲಬೇಕು. ಒಂದೊಮ್ಮೆ ಗೆದ್ದಿಲ್ಲ ಎಂದರೆ, ವಾರಪೂರ್ತಿ ಆ ಸೌಲಭ್ಯ ಮನೆಗೆ ಲಭ್ಯವಾಗುವುದಿಲ್ಲ. ಇದು ಮನೆಯವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ರಾತ್ರಿ ಮಲಗುವ ವೇಳೆ ಯಾರಿಗೂ ಬೆಡ್ಶೀಟ್ ಇರಲಿಲ್ಲ. ಬಿಗ್ ಬಾಸ್ ಮನೆಯಲ್ಲಿ ಎಸಿ ಇರುವುದರಿಂದ ಚಳಿಯಲ್ಲಿ ಮಲಗೋಕೆ ಸಾಧ್ಯವೇ ಆಗುತ್ತಿರಲಿಲ್ಲ. ಹೀಗಾಗಿ, ಎಲ್ಲರೂ ಮನೆಯ ಗಾರ್ಡನ್ ಏರಿಯಾಗೆ ಬಂದಿದ್ದರು. ಗಾರ್ಬೆಜ್ ಕವರ್ ಅನ್ನೇ ಹೊದಿಕೆ ಮಾಡಿಕೊಂಡು ಮಲಗೋಕೆ ಮುಂದಾದರು.
View this post on Instagram
ಗಾರ್ಡನ್ ಎರಿಯಾದಲ್ಲಿ ಒಂದು ಸಣ್ಣ ರಸ್ತೆ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಶುಭಾ ಪೂಂಜಾ ಅಲ್ಲಿಯೇ ನಿದ್ರಿಸೋಕೆ ಮುಂದಾಗಿದ್ದರು. ಇದನ್ನು ನೋಡಿದ ಮಂಜು ತುಂಬಾನೇ ಮರುಕ ವ್ಯಕ್ತಪಡಿಸಿದರು. 17 ವರ್ಷ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿರುವ ದೊಡ್ಡ ಹೀರೋಯಿನ್ಗೆ ಗಾರ್ಬೆಜ್ ಕವರ್ ಹಾಕಿಕೊಂಡು ರಸ್ತೆ ಮೇಲೆ ಮಲಗೋ ಪರಿಸ್ಥಿತಿ ಬಂತಲ್ಲಪ್ಪ. ನಿಮ್ಮನ್ನು ನೋಡಿದರೆ ಬೇಸರ ಎನಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Kannada Bigg Boss Elimination: ಸುದೀಪ್ ಭೇಟಿ ಮಾಡದೇ ಬಿಗ್ ಬಾಸ್ ಮನೆಯಿಂದ ಹೊರಹೋದ ವಿಶ್ವನಾಥ್