Roberrt Movie: ಅಮೇಜಾನ್​​ ಪ್ರೈಮ್​ನಲ್ಲಿ ರಾಬರ್ಟ್​​; ಯಾವತ್ತಿನಿಂದ ಪ್ರಸಾರ ಶುರು?

ರಾಬರ್ಟ್​ ಸಿನಿಮಾ ತೆರೆಕಂಡ ಒಂದು ತಿಂಗಳ ನಂತರ ಕೊರೊನಾ ಎರಡನೆ ಅಲೆ ಕಾಣಿಸಿಕೊಂಡಿತ್ತು. ಹೀಗಾಗಿ, ಎರಡನೇ ಬಾರಿ ಈ ಸಿನಿಮಾ ನೋಡಬೇಕು ಎಂದುಕೊಂಡಿದ್ದವರಿಗೆ ನಿರಾಸೆ ಉಂಟಾಗಿತ್ತು.

Roberrt Movie: ಅಮೇಜಾನ್​​ ಪ್ರೈಮ್​ನಲ್ಲಿ ರಾಬರ್ಟ್​​; ಯಾವತ್ತಿನಿಂದ ಪ್ರಸಾರ ಶುರು?
ರಾಬರ್ಟ್​ ಸಿನಿಮಾ ಪೋಸ್ಟರ್​
Follow us
ರಾಜೇಶ್ ದುಗ್ಗುಮನೆ
|

Updated on: Apr 21, 2021 | 4:11 PM

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ 100 ಕೋಟಿ ಕ್ಲಬ್​ ಸೇರಿ ಸ್ಯಾಂಡಲ್​ವುಡ್​ನಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದೆ. ಈ ಸಿನಿಮಾ ಅಭಿಮಾನಿಗಳಿಗೆ ಹಬ್ಬದೂಟವನ್ನೇ ಉಣಬಡಿಸಿತ್ತು. ಸಿನಿಮಾವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬೇಕು ಎಂದುಕೊಂಡವರಿಗೆ ಈಗ ಸಿಹಿ ಸುದ್ದಿಯೊಂದು ಸಿಕ್ಕಿದೆ. ಏಪ್ರಿಲ್​ 25ರಂದು ಸಿನಿಮಾ ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರವಾಗಲಿದೆ.

ತರುಣ್ ಸುಧೀರ್ ನಿರ್ದೇಶಿಸಿ, ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ ರಾಬರ್ಟ್​ ಸಿನಿಮಾದಲ್ಲಿ ದರ್ಶನ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದರು. ಜಗಪತಿ ಬಾಬು, ರವಿ ಶಂಕರ್​, ವಿನೋದ್ ಪ್ರಭಾಕರ್ ಮತ್ತು ಆಶಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಂದ ಮನ್ನಣೆ ಪಡೆದುಕೊಂಡಿತ್ತು. ಈಗ ಈ ಸಿನಿಮಾ ಅಮೇಜಾನ್ ಪ್ರೈಮ್​ನಲ್ಲಿ ಬಿಡುಗಡೆ ಆಗುತ್ತಿದೆ.

ರಾಬರ್ಟ್​ ಸಿನಿಮಾ ತೆರೆಕಂಡ ಒಂದು ತಿಂಗಳ ನಂತರ ಕೊರೊನಾ ಎರಡನೆ ಅಲೆ ಕಾಣಿಸಿಕೊಂಡಿತ್ತು. ಹೀಗಾಗಿ, ಎರಡನೇ ಬಾರಿ ಈ ಸಿನಿಮಾ ನೋಡಬೇಕು ಎಂದುಕೊಂಡಿದ್ದವರಿಗೆ ನಿರಾಸೆ ಉಂಟಾಗಿತ್ತು. ಇನ್ನು, ವಿದೇಶದಲ್ಲಿದ್ದವರಿಗೆ ರಾಬರ್ಟ್​ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗುತ್ತಿರುವುದರಿಂದ ಮನೆಯಲ್ಲೆ ಕುಳಿತು ನೋಡಬಹುದಾಗಿದೆ. ಭಾರತ ಸೇರಿ 240 ದೇಶಗಳಲ್ಲಿ ಪ್ರೈಮ್ ಲಭ್ಯವಾಗುತ್ತಿದೆ. ಇತ್ತೀಚೆಗೆ ಅಮೇಜಾನ್​ ಪ್ರೈಮ್​ನಲ್ಲಿ ಪುನೀತ್ ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾ ತೆರೆಕಂಡಿತ್ತು. ಈಗ ರಾಬರ್ಟ್​ ಸಿನಿಮಾ ಒಟಿಟಿಯಲ್ಲಿ ರಿಲೀಸ್​ ಆಗುತ್ತಿರುವುದು ಪ್ರೇಕ್ಷಕರಿಗೆ ಖುಷಿ ನೀಡಿದೆ.

ಮಾ.11ರಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದ್ದ ರಾಬರ್ಟ್​ ಸಿನಿಮಾ ಮೊದಲ ದಿನವೇ 17.24 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಹಾಗೂ ನಾಲ್ಕನೇ ದಿನ ಬರೋಬ್ಬರಿ 15.68 ಕೋಟಿ ರೂ. ಹರಿದುಬಂತು. ಒಂದು ವಾರದ ಬಳಿಕವೂ ರಾಬರ್ಟ್​ ನಾಗಾಲೋಟ ಮುಂದುವರಿದಿತ್ತು. 8 ದಿನಗಳಲ್ಲಿ ಈ ಚಿತ್ರ 78.36 ಕೋಟಿ ರೂ. ಬಾಚಿಕೊಂಡು ಗೆಲುವಿನ ಪತಾಕೆ ಹಾರಿಸಿತ್ತು. ನಂತರ ಸಿನಿಮಾ 100 ಕೋಟಿ ಮೈಲಿಗಲ್ಲು ತಲುಪಿತ್ತು.

ಇದನ್ನೂ ಓದಿ: ರಾಬರ್ಟ್ ನಂತ್ರ ಕನ್ನಡದ ಕರಿಯಾ ಐ ಲವ್ ಯು ಗೆ ಮಂಗ್ಲಿ ಹಾಡು

Roberrt: 2 ಗಂಟೆ 46 ನಿಮಿಷ ಇರುವ ರಾಬರ್ಟ್​ ಚಿತ್ರಕ್ಕೆ ಇನ್ನೊಂದು ಸಮಸ್ಯೆ! ಥಿಯೇಟರ್​ ಮಾಲಿಕರಿಗೆ ತಲೆನೋವು