Manoranjan Ravichandran Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರವಿಚಂದ್ರನ್ ಪುತ್ರ: ಇಲ್ಲಿದೆ ವಿಡಿಯೋ

Manoranjan Ravichandran Marriage Video: ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ನಟಿ ಖುಷ್ಬೂ, ಉಮಾಶ್ರೀ, ಹಂಸಲೇಖಾ, ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖ ಉಪಸ್ಥಿತರಿದ್ದರು.

Manoranjan Ravichandran Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರವಿಚಂದ್ರನ್ ಪುತ್ರ: ಇಲ್ಲಿದೆ ವಿಡಿಯೋ
Manoranjan Ravichandran Marriage
Edited By:

Updated on: Aug 21, 2022 | 10:25 AM

ಸ್ಯಾಂಡಲ್​ವುಡ್​ನ ಕ್ರೇಜಿ ಸ್ಟಾರ್‌ ವಿ. ರವಿಚಂದ್ರನ್ (Ravichandran) ಅವರ ಹಿರಿಯ ಪುತ್ರ ನಟ ಮನೋರಂಜನ್‌ (Manoranjan Ravichandran) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 21 ರಂದು 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬವರನ್ನು ವರಿಸಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್​ನಲ್ಲಿನ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ನಡೆದ ಶುಭಘಳಿಗೆಯಲ್ಲಿ ಚಿತ್ರರಂಗದ ಕೆಲ ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.

ಇದೇ ವೇಳೆ ರವಿಚಂದ್ರನ್ ಅವರ ಆಪ್ತರೆನಿಸಿಕೊಂಡಿರುವ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ನಟಿ ಖುಷ್ಬೂ, ಉಮಾಶ್ರೀ, ನಟ ಶರಣ್, ಹಂಸಲೇಖಾ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖ ಉಪಸ್ಥಿತರಿದ್ದರು.

ಇದನ್ನೂ ಓದಿ
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

2017 ರಲ್ಲಿ ಸಾಹೇಬ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಮನೋರಂಜನ್ ಆ ಬಳಿಕ ಬೃಹಸ್ಪತಿ, ಮುಗಿಲ್​ಪೇಟೆ, ಪ್ರಾರಂಭ ಹೆಸರಿನ ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದರು. ಇದೀಗ ಕುಟುಂಬಸ್ಥರ ಆಶೀರ್ವಾದದೊಂದಿಗೆ ಮನೋರಂಜನ್ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

 

ಇನ್ನು ಇಂದು ಸಂಜೆ ಅರಮನೆ ಮೈದಾನದ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ಆರಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಕೆಲ ರಾಜಕಾರಣಿಗಳು ಭಾಗವಹಿಸುವ ನಿರೀಕ್ಷೆಯಿದೆ.