
ಪವನ್ ಕಲ್ಯಾಣ್ (Pawan Kalyan), ಈಗ ಕೇವಲ ಸ್ಟಾರ್ ನಟರಷ್ಟೆ ಅಲ್ಲ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಜೊತೆಗೆ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸುತ್ತಿರುವ ಸಚಿವ ಸಹ. ನರೇಂದ್ರ ಮೋದಿ ಅವರೊಟ್ಟಿಗೆ ಆಪ್ತ ಬಂಧ ಹೊಂದಿರುವ ಪವನ್ ಕಲ್ಯಾಣ್, ರಾಷ್ಟ್ರಮಟ್ಟದ ಪ್ರಭಾವಿ ನಾಯಕರುಗಳಲ್ಲಿ ಒಬ್ಬರು. ಇಂದು (ಸೆಪ್ಟೆಂಬರ್ 02) ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬ. ಪವನ್ ಕಲ್ಯಾಣ್ ಸಹೋದರ ಚಿರಂಜೀವಿ, ತಮ್ಮ ಸಹೋದರನಿಗೆ ಆಶೀರ್ವಾದ ಮಾಡುತ್ತಾ, ಸಹೋದರನ ವ್ಯಕ್ತಿತ್ವದ ಬಗ್ಗೆ ವಿಶೇಷ ಟಿಪ್ಪಣಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪವನ್ ಕಲ್ಯಾಣ್, ಅಣ್ಣನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದು, ಸಹೋದರನ ತಬ್ಬಿಕೊಂಡು ಚಿರಂಜೀವಿ ಶುಭ ಹಾರೈಸಿದ್ದಾರೆ. ಚಿತ್ರಗಳ ಜೊತೆಗೆ ಸುದೀರ್ಘ ಪೋಸ್ಟ್ ಒಂದನ್ನು ಸಹ ಚಿರಂಜೀವಿ ಹಂಚಿಕೊಂಡಿದ್ದಾರೆ. ‘ನಮ್ಮ ಕಲ್ಯಾಣ್ ಬಾಬು ಅವರಲ್ಲಿ ಬಾಲ್ಯದಿಂದಲೂ ಬದ್ಧತೆಯಿಂದ ತುಂಬಿದ ಪ್ರೀತಿ, ಜವಾಬ್ದಾರಿಯೊಂದಿಗೆ ದೃಢಸಂಕಲ್ಪ ಮತ್ತು ಜನರಿಗೆ ಒಳ್ಳೆಯದನ್ನು ಮಾಡುವ ಪ್ರಾಮಾಣಿಕ ಬಯಕೆಯನ್ನು ನಾನು ನೋಡಿದ್ದೇನೆ. ಅವನು ಮಾಡುವ ಪ್ರತಿಯೊಂದು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾನೆ ಮತ್ತು ಹತ್ತು ಜನರಿಗೆ ಒಳ್ಳೆಯದನ್ನು ಮಾಡುವ ಬಯಕೆಯೊಂದಿಗೆ ಪ್ರತಿ ಹೆಜ್ಜೆಯನ್ನೂ ಇಡುತ್ತಾನೆ’ ಎಂದಿದ್ದಾರೆ ಚಿರಂಜೀವಿ.
‘ತಮ್ಮ ಕುಟುಂಬಕ್ಕೆ ತೋರಿಸುವಷ್ಟೇ ಪ್ರೀತಿ ಮತ್ತು ವಾತ್ಸಲ್ಯವನ್ನು ತಮ್ಮ ಮೇಲೆ ತೋರಿಸುತ್ತಾರೆ. ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ಗ್ರಾಮಗಳ ಅಭಿವೃದ್ಧಿ, ಬುಡಕಟ್ಟು ಪ್ರದೇಶಗಳ ಉನ್ನತಿ, ಪರಿಸರ ಸಂರಕ್ಷಣೆ ಮತ್ತು ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಮರ್ಪಣಾಭಾವದಿಂದ ಕೆಲಸ ಮಾಡುವ ಮೂಲಕ ಆಡಳಿತದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ’ ಎಂದು ಕೊಂಡಾಡಿದ್ದಾರೆ ಚಿರಂಜೀವಿ.
ಇದನ್ನೂ ಓದಿ:ಪ್ರದೀಪ್ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ ಪವನ್ ಕಲ್ಯಾಣ್, ಪ್ರಭುದೇವ
‘ವರ್ಷಗಳಿಂದ ಬಗೆಹರಿಯದ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ನೀಡುತ್ತಿರುವ ಮತ್ತು ದೂರದ ಪ್ರದೇಶಗಳಿಗೆ ಅಭಿವೃದ್ಧಿಯನ್ನು ಕೊಂಡೊಯ್ಯುವ ರೀತಿ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ. ಅವರು ಪಿಠಾಪುರಂ ಜನರ ಬೆಂಬಲಕ್ಕೆ ನಿಂತಿದ್ದಾರೆ, ಅವರು ಅವರನ್ನು ಸಾರ್ವಜನಿಕ ಪ್ರತಿನಿಧಿಯಾಗಿ ಅಲ್ಲ, ಆದರೆ ಕುಟುಂಬದ ಸದಸ್ಯರಾಗಿ ಆಯ್ಕೆ ಮಾಡಿದ್ದಾರೆ’ ಎಂದಿದ್ದಾರೆ ಮೆಗಾಸ್ಟಾರ್.
సంకల్ప సాధకుడు కళ్యాణ్ బాబు..@PawanKalyan
నిబద్ధత నిండిన ప్రేమ, బాధ్యతతో కూడిన సంకల్పం, అనుక్షణం ప్రజలకు మంచి చేయాలనే చిత్తశుద్ధి, ఇవన్నీ మా కళ్యాణ్ బాబులో చిన్నప్పటి నుంచీ చూస్తున్నాను. తాను చేసే ప్రతి పనిలో పూర్తిగా నిమగ్నమవుతూ, తన ప్రతి అడుగూ పదిమందికి మేలు చేయాలనే తపనతో… pic.twitter.com/FEFdNToZ9a
— Chiranjeevi Konidela (@KChiruTweets) September 2, 2026
‘ಜನರ ಕಷ್ಟಗಳನ್ನು ತಮ್ಮದೇ ಎಂದು ಪರಿಗಣಿಸುವ ಕಲ್ಯಾಣ್ ಬಾಬು ಅವರು ಎಲ್ಲಾ ತೆಲುಗು ಜನರಿಂದ ಮೆಚ್ಚುಗೆ ಪಡೆದ ನಾಯಕನಾಗಿ ತಮ್ಮ ಭವಿಷ್ಯದ ಗುರಿಗಳನ್ನು ಸಾಧಿಸಲು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯಲ್ಲೂ ಯಶಸ್ಸನ್ನು ಬಯಸುತ್ತೇನೆ. ನಮ್ಮ ಪ್ರೀತಿಯ ಶ್ರೀ ಆಂಜನೇಯಸ್ವಾಮಿಯವರು ಉತ್ತಮ ಆರೋಗ್ಯದಿಂದ ನೂರು ವರ್ಷ ಬದುಕಿ ಹೆಚ್ಚಿನ ಶಕ್ತಿಯೊಂದಿಗೆ ಸಾರ್ವಜನಿಕ ಸೇವೆಗೆ ಮರಳಲಿ ಎಂದು ಪ್ರಾರ್ಥಿಸುತ್ತಾ, ಕಲ್ಯಾಣ್ ಬಾಬು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹಾರೈಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Wed, 2 September 26