
‘ಮಿರ್ಜಾಪುರ್: ದಿ ಮೂವಿ’ ಚಿತ್ರವು ಪ್ರದರ್ಶನ ಕಾಣುತ್ತಿರುವ ಕಡೆಗಳಲ್ಲೆಲ್ಲ ಧೂಳೆಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮಹಾಪೂರವೇ ಹರಿದು ಬರುತ್ತಿದೆ. ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಅತ್ಯುತ್ತಮ ವಿಮರ್ಶೆ ಮತ್ತು ಸಾರ್ವಜನಿಕ ಪ್ರಶಂಸೆಯಿಂದಾಗಿ ಗಲ್ಲಾಪೆಟ್ಟಿಗೆಯಲ್ಲಿ ಗ್ಯಾಂಗ್‌ಸ್ಟರ್‌ಗಳ ಅಬ್ಬರ ಜೋರಾಗಿದೆ. ಈ ಚಿತ್ರದ ಅಬ್ಬರದ ಕಾರಣಕ್ಕೆ ‘ಟಾಕ್ಸಿಕ್’ ಹಿಂದಿ ವರ್ಷನ್ ಡಲ್ ಆಗಿದೆ.
ಗುರ್ಮೀತ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಭಾರಿ ತಾರಾಗಣವಿದೆ. ಪಂಕಜ್ ತ್ರಿಪಾಠಿ ಮತ್ತು ಅಲಿ ಫಜಲ್ ಮುಖ್ಯ ಪಾತ್ರಗಳಲ್ಲಿದ್ದಾರೆ. ದಿವ್ಯೇಂದು ಹಾಗೂ ಅಭಿನಾಶ್ ಶುಕ್ಲಾ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ‘ಮಿರ್ಜಾಪುರ್’ ಸರಣಿ ಜನಪ್ರಿಯತೆ ಈಗ ಬೆಳ್ಳಿಪರದೆಯ ಮೇಲೆಯೂ ಮುಂದುವರಿದಿದೆ.
ಭಾನುವಾರದ ರಜಾ ದಿನದಂದು ಚಿತ್ರಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 36.50 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಇದು ಮೊದಲ ವಾರಾಂತ್ಯದ ಅತ್ಯಧಿಕ ಒಂದೇ ದಿನದ ಗಳಿಕೆಯಾಗಿದೆ. ಪ್ರೇಕ್ಷಕರು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
Mirzapur The Movie Part-2 is CONFIRMED because the collections of the part-1 is GOING BERSEK 🤯🤯🤯🤯🤯 #MirzapurTheMovie is creating HAVOC at the Box Office 🔥
WW Gross has already crossed the ₹78 Cr mark in TWO DAYs- with the film now EYEING a massive ₹275–325 Cr WORLDWIDE…
— Pan India Review (@PanIndiaReview) September 6, 2026
ಈ ಗಳಿಕೆಯೊಂದಿಗೆ ಚಿತ್ರದ ಒಟ್ಟು ಕಲೆಕ್ಷನ್ 96.85 ಕೋಟಿ ರೂಪಾಯಿಗೆ ತಲುಪಿದೆ. ಸಿನಿಮಾ ಈಗ 100 ಕೋಟಿ ರೂಪಾಯಿ ಕ್ಲಬ್ ಸೇರಲು ಕೆಲವೇ ಮೆಟ್ಟಿಲುಗಳು ಬಾಕಿ ಇವೆ. ಇಂದು ಸಿನಿಮಾ ಈ ಮೈಲಿಗಲ್ಲನ್ನು ದಾಟುವ ನಿರೀಕ್ಷೆಯಿದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ದಾಖಲೆ ಬರೆದ ‘ಮಿರ್ಜಾಪುರ್’ ಸಿನಿಮಾ
ವಾರದ ದಿನಗಳಲ್ಲಿ ಚಿತ್ರದ ಗಳಿಕೆ ಹೇಗೆ ಇರಲಿದೆ ಎಂಬ ಕುತೂಹಲ ಮೂಡಿದೆ. ಸೋಮವಾರದ ಕಲೆಕ್ಷನ್ ಸಿನಿಮಾದ ಭವಿಷ್ಯವನ್ನು ನಿರ್ಧರಿಸಲಿದೆ. ಮೊದಲ ವಾರಾಂತ್ಯದ ಭರ್ಜರಿ ಓಟವು ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.