- TV9 Kannada Photo gallery Satwik-Chirag Conquer China Masters Super 750! India's Badminton Stars Claim Title
ಚೀನಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್-ಚಿರಾಗ್ ಜೋಡಿ
ಭಾರತದ ಸ್ಟಾರ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ ಚೀನಾ ಮಾಸ್ಟರ್ಸ್ ಸೂಪರ್ 750 ಪ್ರಶಸ್ತಿ ಗೆದ್ದಿದೆ. ಚೀನಾದ ಜೋಡಿಯನ್ನು ರೋಮಾಂಚಕ ಫೈನಲ್‌ನಲ್ಲಿ ಸೋಲಿಸಿ, ಮೊದಲ ಗೇಮ್ ಸೋತ ನಂತರ ಭವ್ಯ ಮರುಪ್ರವೇಶ ಮಾಡಿದರು. ಈ ಗೆಲುವು ಅವರಿಗೆ ಸುಮಾರು 87 ಲಕ್ಷ ರೂ. ಬಹುಮಾನ ತಂದಿದೆ ಮತ್ತು ಇದು ಅವರ ಈ ಋತುವಿನ ಎರಡನೇ ಪ್ರಮುಖ ಪ್ರಶಸ್ತಿಯಾಗಿದೆ, ಇದು ಭಾರತೀಯ ಬ್ಯಾಡ್ಮಿಂಟನ್‌ಗೆ ದೊಡ್ಡ ಉತ್ತೇಜನ ನೀಡಿದೆ.
Updated on: Sep 06, 2026 | 9:12 PM

ಭಾರತದ ಸ್ಟಾರ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಚೀನಾ ಮಾಸ್ಟರ್ಸ್ ಸೂಪರ್ 750 ಫೈನಲ್ ಪಂದ್ಯದಲ್ಲಿ ಚೀನಾದ ಸ್ಪರ್ಧಿಗಳಾದ ಹೆ ಜಿ ಟಿಂಗ್ ಮತ್ತು ರೆನ್ ಕ್ಸಿಯಾಂಗ್ ಯು ಅವರನ್ನು 11-21, 21-13, 21-17 ಸೆಟ್‌ಗಳಿಂದ ಸೋಲಿಸಿದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ರಶಸ್ತಿಯನ್ನು ಗೆದ್ದಿಕೊಂಡುಕೊಂಡಿದ್ದಾರೆ (PC-PTI).

ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮೊದಲ ಪಂದ್ಯವನ್ನು ಸೋತ ನಂತರ ಅದ್ಭುತ ಪುನರಾಗಮನವನ್ನು ಮಾಡಿ 1 ಗಂಟೆ 10 ನಿಮಿಷಗಳ ಕಾಲ ನಡೆದ ಕಠಿಣ ಹೋರಾಟದಲ್ಲಿ ಚೀನಾದ ಜೋಡಿಯನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಐತಿಹಾಸಿಕ ಪ್ರಶಸ್ತಿ ಗೆಲುವಿನೊಂದಿಗೆ, ಸಾತ್ವಿಕ್ ಮತ್ತು ಚಿರಾಗ್ ಚೀನಾ ಮಾಸ್ಟರ್ಸ್ ಟ್ರೋಫಿಯನ್ನು ಮಾತ್ರವಲ್ಲದೆ ಸುಮಾರು ರೂ. 87 ಲಕ್ಷ ರೂ. ಹಣವನ್ನು ಬಹುಮಾನವನ್ನಾಗಿ ಪಡೆದುಕೊಂಡಿದ್ದಾರೆ(PC-PTI).

ಚೀನಾ ಮಾಸ್ಟರ್ಸ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಈ ಹಿಂದೆ ಈ ಜೋಡಿ 2023 ಮತ್ತು 2025 ರಲ್ಲಿ ಫೈನಲ್ ತಲುಪಿತ್ತಾದರೂ ಎರಡೂ ಬಾರಿಯೂ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ, ಮಾಜಿ ವಿಶ್ವದ 4 ನೇ ಶ್ರೇಯಾಂಕದ ಚೀನಾದ ಜೋಡಿಯ ವಿರುದ್ಧ ಮೊದಲ ಗೇಮ್ ಅನ್ನು 11-21 ರಿಂದ ಸೋತರೂ, ಭಾರತೀಯ ಜೋಡಿ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸಿತು(PC-PTI).

ಎರಡನೇ ಗೇಮ್ ಅನ್ನು 21-13 ಅಂತರದಲ್ಲಿ ಗೆದ್ದು ಪಂದ್ಯವನ್ನು ಸಮಬಲಗೊಳಿಸಿದ ಸಾತ್ವಿಕ್ ಮತ್ತು ಚಿರಾಗ್ ಮೂರನೇ ಮತ್ತು ಅಂತಿಮ ಗೇಮ್ ಅನ್ನು 21-17 ಅಂತರದಲ್ಲಿ ಗೆದ್ದು, ಪಂದ್ಯವನ್ನು ಗೆದ್ದುಕೊಂಡಿತು. ಈ ಐತಿಹಾಸಿಕ ಪ್ರಶಸ್ತಿ ಗೆಲುವಿನೊಂದಿಗೆ, ಸಾತ್ವಿಕ್ ಮತ್ತು ಚಿರಾಗ್ ಚೀನಾದ ಜೋಡಿಯ ವಿರುದ್ಧ ತಮ್ಮ ಅಜೇಯ ದಾಖಲೆಯನ್ನು ಉಳಿಸಿಕೊಂಡಿದೆ(PC-PTI).

ಇದು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಪ್ರಸಕ್ತ ಆವೃತ್ತಿಯ ಎರಡನೇ ಪ್ರಮುಖ ಪ್ರಶಸ್ತಿಯಾಗಿದೆ. ಈ ಹಿಂದೆ ಅವರು ಸಿಂಗಾಪುರ ಓಪನ್ ಸೂಪರ್ 750 ಪ್ರಶಸ್ತಿಯನ್ನು ಗೆದ್ದಿದ್ದರು. ಹಾಗೆಯೇ ಈ ಜೋಡಿ ಥೈಲ್ಯಾಂಡ್ ಓಪನ್ ಸೂಪರ್ 500 ಟೂರ್ನಮೆಂಟ್‌ನ ಫೈನಲ್ ತಲುಪಿತ್ತಾದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. 2026 ರ ಏಷ್ಯನ್ ಕ್ರೀಡಾಕೂಟಕ್ಕೆ ಸ್ವಲ್ಪ ಮುಂಚಿತವಾಗಿ ಈ ಗೆಲುವು ಭಾರತೀಯ ಬ್ಯಾಡ್ಮಿಂಟನ್‌ಗೆ ನೈತಿಕ ಸ್ಥೈರ್ಯ ತುಂಬಲಿದೆ(PC-PTI).




