ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್: ಬಾಯ್ಬಿಟ್ಟ ಸ್ಟಾರ್ ನಟ

ಹಿಂದಿ ಚಿತ್ರರಂಗದ ಖ್ಯಾತ ನಟ ಮಿಥುನ್ ಚಕ್ರವರ್ತಿ ಅವರು ಈ ವಿಷಯ ಬಹಿರಂಗಪಡಿಸಿದ್ದಾರೆ. ಈ ಸುದ್ದಿ ತಿಳಿದು ಅಭಿಮಾನಿಗಳಿಗೆ ಸಖತ್ ಖುಷಿ ಆಗಿದೆ. ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ. ಶಾರುಖ್ ಖಾನ್, ರಜನಿಕಾಂತ್, ಶಿವಣ್ಣ ಅವರನ್ನು ಒಟ್ಟಿಗೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್: ಬಾಯ್ಬಿಟ್ಟ ಸ್ಟಾರ್ ನಟ
Shah Rukh Khan, Rajinikanth, Shiva Rajkumar

Updated on: Dec 26, 2025 | 4:50 PM

ಮಲ್ಟಿಸ್ಟಾರರ್ ಸಿನಿಮಾಗಳ ಬಗ್ಗೆ ಪ್ರೇಕ್ಷಕರು ಯಾವಾಗಲೂ ಒಲವು ತೋರಿಸುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಿದ ಬಳಿಕ ಈ ಟ್ರೆಂಡ್ ಜಾಸ್ತಿ ಆಗಿದೆ. ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಒಟ್ಟಿಗೆ ನಟಿಸುತ್ತಿದ್ದಾರೆ. ಅಚ್ಚರಿ ಎಂದರೆ, ಈಗ ಒಂದು ಬ್ರೇಕಿಂಗ್ ನ್ಯೂಸ್ ಕೇಳಿಬಂದಿದೆ. ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ರಜನಿಕಾಂತ್, ಶಿವರಾಜ್​​ಕುಮಾರ್ ಮುಂತಾದವರು ನಟಿಸುತ್ತಿದ್ದಾರೆ. ಈ ಬಗ್ಗೆ ಬಾಲಿವುಡ್​ನ ಹಿರಿಯ ನಟ ಮಿಥುನ್ ಚಕ್ರವರ್ತಿ (Mithun Chakraborty) ಅವರು ಬಾಯ್ಬಿಟ್ಟಿದ್ದಾರೆ. ಯಾವುದು ಆ ಸಿನಿಮಾ ‘ಜೈಲರ್ 2’! ಈ ಚಿತ್ರದಲ್ಲಿ ರಜನಿಕಾಂತ್, ಶಿವಣ್ಣ ನಟಿಸುತ್ತಿರುವುದು ಗೊತ್ತೇ ಇದೆ. ಆದರೆ ಶಾರುಖ್ ಖಾನ್ (Shah Rukh Khan) ಕೂಡ ಪಾತ್ರವರ್ಗದಲ್ಲಿ ಇದ್ದಾರೆ ಎಂಬ ಗುಟ್ಟನ್ನು ಮಿಥುನ್ ಚಕ್ರವರ್ತಿ ಈಗ ಬಿಟ್ಟುಕೊಟ್ಟಿದ್ದಾರೆ.

ಇತ್ತೀಚೆಗೆ ನಟ ಮಿಥುನ್ ಚಕ್ರವರ್ತಿ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಅವರು ‘ಜೈಲರ್ 2’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ಮುಂದಿನ ಸಿನಿಮಾ ಜೈಲರ್ 2. ಅದರಲ್ಲಿ ಎಲ್ಲರೂ ನನ್ನ ಪಾತ್ರದ ವಿರುದ್ಧವಾಗಿ ಇರುತ್ತಾರೆ. ರಜನಿಕಾಂತ್, ಮೋಹನ್​ಲಾಲ್, ಶಾರುಖ್ ಖಾನ್, ರಮ್ಯಾ ಕೃಷ್ಣನ್, ಶಿವರಾಜ್​​ಕುಮಾರ್ ಸೇರಿದಂತೆ ಎಲ್ಲರೂ ನನ್ನ ವಿರುದ್ಧ ಇರುತ್ತಾರೆ’ ಎಂದು ಮಿಥುನ್ ಚಕ್ರವರ್ತಿ ಹೇಳಿದ್ದಾರೆ.

ಈ ಹೇಳಿಕೆ ನೀಡುವ ಮೂಲಕ ತಾವು ‘ಜೈಲರ್ 2’ ಸಿನಿಮಾದಲ್ಲಿ ವಿಲನ್ ಎಂಬುದನ್ನು ಮಿಥುನ್ ಚಕ್ರವರ್ತಿ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ಕೂಡ ನಟಿಸುತ್ತಿದ್ದಾರೆ ಎಂಬ ರಹಸ್ಯವನ್ನು ಅವರು ಬಾಯಿಬಿಟ್ಟಿದ್ದಾರೆ. ಈವರೆಗೂ ಚಿತ್ರತಂಡದವರು ಶಾರುಖ್ ಖಾನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಈಗ ವಿಷಯ ಲೀಕ್ ಆದಂತೆ ಆಗಿದೆ.

ಶಾರುಖ್ ಖಾನ್, ರಜನಿಕಾಂತ್, ಶಿವರಾಜ್​​ಕುಮಾರ್, ಮೋಹನ್​ಲಾಲ್ ಮುಂತಾದವರು ಒಟ್ಟಿಗೆ ನಟಿಸುತ್ತಿರುವುದರಿಂದ ‘ಜೈಲರ್ 2’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ಜಾಸ್ತಿ ಆಗಿದೆ. ಶಾರುಖ್ ಖಾನ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಬೇಕಿದೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಧ್ಯ ಬೆರಳು ತೋರಿಸಿದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್

‘ಸನ್ ಪಿಕ್ಚರ್ಸ್’ ಮೂಲಕ ‘ಜೈಲರ್ 2’ ಸಿನಿಮಾ ನಿರ್ಮಾಣ ಆಗುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. 2026ರ ಜೂನ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 2023ರಲ್ಲಿ ತೆರೆಕಂಡ ‘ಜೈಲರ್’ ಸೂಪರ್ ಹಿಟ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ ‘ಜೈಲರ್ 2’ ನಿರ್ಮಾಣ ಆಗುತ್ತಿದೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಮೇಲಿನ ಹೈಪ್ ಹೆಚ್ಚುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:49 pm, Fri, 26 December 25