AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್​ನಲ್ಲಿ 7000 ಎಕರೆ ಭೂಮಿ ಖರೀದಿಸಿದ ಸ್ಟಾರ್ ನಟ

Mohan Babu movies: ತೆಲುಗು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಮೋಹನ್​​ ಬಾಬು ಯಶಸ್ವಿ ನಟ, ನಿರ್ಮಾಪಕ ಆಗಿರುವ ಜೊತೆಗೆ ಯಶಸ್ವಿ ಉದ್ಯಮಿಯೂ ಹೌದು. ಹಲವಾರು ಶಾಲೆ, ಖಾಸಗಿ ಆಸ್ಪತ್ರೆಗಳು, ಅಪಾರ್ಟ್​ಮೆಂಟ್​ಗಳನ್ನು ಹೊಂದಿದ್ದಾರೆ. ಇದೀಗ ಮೋಹನ್​ ಬಾಬು ತಾವು ನ್ಯೂಜಿಲೆಂಡ್​​ನಲ್ಲಿ ಏಳು ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ.

ನ್ಯೂಜಿಲೆಂಡ್​ನಲ್ಲಿ 7000 ಎಕರೆ ಭೂಮಿ ಖರೀದಿಸಿದ ಸ್ಟಾರ್ ನಟ
Manchu Mohan Babu
ಮಂಜುನಾಥ ಸಿ.
|

Updated on: Jun 22, 2025 | 11:26 AM

Share

ತೆಲುಗು ಚಿತ್ರರಂಗದಲ್ಲಿ (Tollywood) ಯಶಸ್ವಿಯಾಗಿರುವ ಹಲವಾರು ನಟ, ನಟಿಯರು ರಿಯಲ್ ಎಸ್ಟೇಟ್​ ಮೇಲೆ ತಪ್ಪದೆ ಹೂಡಿಕೆ ಮಾಡುತ್ತಾರೆ. ತೆಲುಗಿನ ಹಿರಿಯ ನಟ ಶೋಭನ್ ಬಾಬು ಕಲಿಸಿಕೊಟ್ಟ ಪಾಠವದು. ಶೋಭನ್ ಬಾಬು ಅವರನ್ನು ಅನುಸರಿಸಿ ತೆಲುಗಿನ ಹಲವಾರು ನಟ, ನಟಿಯರು ಸಿನಿಮಾ ಸಂಭಾವನೆ ಹಣವನ್ನು ಭೂಮಿ ಮೇಲೆ ಹೂಡಿಕೆ ಮಾಡಿದರು, ಈಗಲೂ ಮಾಡುತ್ತಲೇ ಇದ್ದಾರೆ. ಅವರಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಸಹ ಒಬ್ಬರು.

ಸಿನಿಮಾ ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಭಾರಿ ಯಶಸ್ಸು ಗಳಿಸಿರುವ ಮೋಹನ್​ಬಾಬು ಒಳ್ಳೆಯ ಉದ್ಯಮಿಯೂ ಹೌದು. ಹಲವು ಶಾಲೆಗಳು, ಅಪಾರ್ಟ್​ಮೆಂಟ್​ಗಳು, ರೆಸಾರ್ಟ್, ಹೋಟೆಲ್ ಚೈನ್​ಗಳನ್ನು ಸಹ ಮೋಹನ್​ಬಾಬು ಹೊಂದಿದ್ದಾರೆ. ಸಾಕಷ್ಟು ಕಡೆ ರಿಯಲ್ ಎಸ್ಟೇಟ್​ ಮೇಲೆ ಮೋಹನ್​ಬಾಬು ಹೂಡಿಕೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಮೋಹನ್ ಬಾಬು ಸಹ ನಿರ್ಮಾಣದ ‘ಕಣ್ಣಪ್ಪ’ ಸಿನಿಮಾದ ಚಿತ್ರೀಕರಣ ನ್ಯೂಜಿಲೆಂಡ್​​ನಲ್ಲಿ ನಡೆಯಿತು. ಇದೀಗ ಅಲ್ಲಿಯೂ ಸಹ ಭಾರಿ ದೊಡ್ಡ ಪ್ರಮಾಣದ ರಿಯಲ್ ಎಸ್ಟೇಟ್ ಹೂಡಿಕೆ ಮಾಡಿದ್ದಾರೆ ಮೋಹನ್​ಬಾಬು.

ಮೋಹನ್ ಬಾಬು ಹಾಗೂ ಅವರ ಪುತ್ರ ಮಂಚು ವಿಷ್ಣು ಅವರ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ನ್ಯೂಜಿಲೆಂಡ್​ನ ವಲಾಕ ಎಂಬಲ್ಲಿ ತಾವು ಏಳು ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದಾಗಿ ಮೋಹನ್​ ಬಾಬು ಹೇಳುತ್ತಿದ್ದಾರೆ. ಮಂಚು ವಿಷ್ಣು ಅದಕ್ಕೆ ಹೌದೆನ್ನುತ್ತಿದ್ದಾರೆ. ಮೋಹನ್​ ಬಾಬು ವಿಶಾಲವಾದ ಸ್ಥಳವೊಂದರ ಮುಂದೆ ನಿಂತಿದ್ದಾರೆ. ಅವರ ಮುಂದೆ ಸಾಲು ಸಾಲು ಬೆಟ್ಟಗಳು, ನದಿ ಎಲ್ಲವೂ ಇದೆ. ಅವನ್ನೆಲ್ಲ ತೋರಿಸುತ್ತಾ, ಏಳು ಸಾವಿರ ಎಕರೆ ಜಮೀನು ಖರೀದಿಸಿದ್ದೀವಿ. ಈ ಮನೆ ಸ್ಥಳ ಎಲ್ಲವೂ ಇನ್ನು ಮುಂದೆ ಮಂಚು ವಿಷ್ಣುವಿನದ್ದೆ ಎಂದಿದ್ದಾರೆ.

ಅದೇ ಸಮಯದಲ್ಲಿ ಅಲ್ಲಿಗೆ ನಟ ಪ್ರಭುದೇವ ಸಹ ಬರುತ್ತಾರೆ. ಆಗ ಮೋಹನ್​​ಬಾಬು, ಈ ಖರೀದಿಗೆ ಪ್ರಭುದೇವ ಸಹ ಸಾಕ್ಷಿ ಆಗಿದ್ದಾರೆ ಎಂದಿದ್ದಾರೆ. ಆಗ ಪ್ರಭುದೇವ ಸಹ ಹೌದು ಎನ್ನುತ್ತಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಮೋಹನ್​ಬಾಬು ಆಂಧ್ರ, ತೆಲಂಗಾಣದಲ್ಲಿ ಸಾಕಷ್ಟು ಜಮೀನು, ಹಲವು ಲಾಭದಾಯಕ ಉದ್ಯಮಗಳನ್ನು ಹೊಂದಿದ್ದಾರೆ. ಹಾಗಾಗಿ ಅವರು ನ್ಯೂಜಿಲೆಂಡ್​​ನಲ್ಲಿ ಜಮೀನು ಖರೀದಿ ಮಾಡಿರಬಹುದು ಎನ್ನಲಾಗುತ್ತಿದೆ.

ಆದರೆ ನ್ಯೂಜಿಲೆಂಡ್​​ನಲ್ಲಿ ವಿದೇಶಿಗರಿಗೆ ಜಮೀನು ಖರೀದಿ ಅಷ್ಟು ಸುಲಭವಿಲ್ಲ. ಕನಿಷ್ಟ 12 ತಿಂಗಳು ಅಲ್ಲಿ ವಾಸಿಸದೇ ಇರುವವರು ರೆಸಿಡೆನ್ಶಿಯಲ್ ಪ್ರಾಪರ್ಟಿಗಳನ್ನು ಖರೀದಿಸುವುದು ಬಹಳ ಕಷ್ಟದ ಕೆಲಸ. ಓವರ್​​ಸೀಸ್ ಇನ್​ವೆಸ್ಟ್​ಮೆಂಟ್ ಆಫೀಸ್​ನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದರೆ ಖರೀದಿ ಮಾಡುವವರು ಸಿಂಗಪುರ ಅಥವಾ ಆಸ್ಟ್ರೇಲಿಯಾ ಪ್ರಜೆಯಾಗಿದ್ದರೆ ಖರೀದಿ ಸುಲಭ ಆಗುತ್ತದೆ. ಕೆಲ ಮೂಲಗಳ ಪ್ರಕಾರ ಮಂಚು ವಿಷ್ಣು ಸಿಂಗಪುರ ಪ್ರಜೆ ಆಗಿದ್ದಾರೆ ಎನ್ನಲಾಗುತ್ತಿದೆ. ಆ ಮೂಲಕ ಮೋಹನ್​ಬಾಬು ಖರೀದಿ ಮಾಡಿರಬಹುದು ಎನ್ನಲಾಗುತ್ತದೆ. ಆದರೆ ಮೋಹನ್​ಬಾಬು, ವಿಡಿಯೋನಲ್ಲಿ ಏಳು ಸಾವಿರ ಎಕರೆ ಖರೀದಿ ಮಾಡಿದ್ದೀನಿ ಎಂದಿದ್ದಾರೆ. ಇದು ನಿಜವೇ, ಅಥವಾ ಮೋಹನ್​ಬಾಬು ಸುಳ್ಳು ಹೇಳಿದ್ದಾರೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ