ಸಿನಿಮಾಗೆ 250 ಕೋಟಿ ರೂಪಾಯಿ ಸಂಭಾವನೆ ಪಡೆಯೋ ದಳಪತಿ ವಿಜಯ್ ಆಸ್ತಿ ಎಷ್ಟು?
Thalapthy Vijay's Birthday: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ದಳಪತಿ ವಿಜಯ್. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಅವರೂ ಒಬ್ಬರು. ಇದೀಗ ರಾಜಕೀಯ ಪಕ್ಷವನ್ನೂ ಸಹ ಪ್ರಾರಂಭ ಮಾಡಿದ್ದಾರೆ. ಪ್ರತಿ ಸಿನಿಮಾಕ್ಕೆ ನೂರಾರು ಕೋಟಿ ಸಂಭಾವನೆ ಪಡೆವ ದಳಪತಿ ವಿಜಯ್ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಕೋಟಿ? ಇಲ್ಲಿದೆ ಮಾಹಿತಿ.

ದಳಪತಿ ವಿಜಯ್ (Thalapathy Vijay) ಅವರಿಗೆ ಇಂದು (ಜೂನ್ 22) ಜನ್ಮದಿನ. ಅವರಿಗೆ ಈಗ 51ನೇ ವರ್ಷ. ಅವರು ಈಗ ‘ಜನ ನಾಯಗನ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇಂದು ಈ ಸಿನಿಮಾದ ಕಡೆಯಿಂದ ಏನಾದರೂ ಅಪ್ಡೇಟ್ ಬರುವ ಸಾಧ್ಯತೆಗಳು ಇವೆ. ದಳಪತಿ ವಿಜಯ್ ಅವರು ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಅವರ ಒಟ್ಟೂ ಆಸ್ತಿ ಬಗ್ಗೆ ಇಂದು ತಿಳಿದುಕೊಳ್ಳೋಣ.
ದಳಪತಿ ವಿಜಯ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಅವರು ಸಿನಿಮಾ ರಂಗವನ್ನು ತೊರೆಯಲು ಸಿದ್ಧರಾಗಿದ್ದಾರೆ. ಇದಕ್ಕೆ ಕಾರಣ ರಾಜಕೀಯ. ಲಕ್ಷುರಿ ಕಾರು, ಚೆನ್ನೈನಲ್ಲಿ ಐಷಾರಾಮಿ ಮನೆ ಇದೆ. ಅವರು ಹೆಚ್ಚು ಸಂಭಾವನೆ ಪಡೆಯುವ ನಟರು ಕೂಡ ಹೌದು ಅನ್ನೋದು ವಿಶೇಷ.
ದಳಪತಿ ವಿಜಯ್ ಅವರ ಆಸ್ತಿ 474 ಕೋಟಿ ರೂಪಾಯಿ ಅಷ್ಟಿದೆ. ತಮಿಳಿನ ಶ್ರೀಮಂತ ನಟರಲ್ಲಿ ಇವರು ಕೂಡ ಒಬ್ಬರು. ದಳಪತಿ ವಿಜಯ್ಗೆ ಕಾರಿನ ಬಗ್ಗೆ ಆಸಕ್ತಿ ಇದೆ. ಅವರ ಬಳಿ ಎರಡೂವರೆ ಕೋಟಿ ರೂಪಾಯಿ ಬೆಲೆಯ ರೋಲ್ಸ್ ರಾಯ್ಸ್, ಬಿಎಂಡಬ್ಲ್ಯೂ ಎಕ್ಸ್ 5, ಎಕ್ಸ್ 6, ಆಡಿ ಎ8, ರೇಂಜ್ ರೋವರ್, ಫೋರ್ಡ್ ಮಸ್ಟಂಗ್, ವೋಲ್ವೋ ಎಕ್ಸ್ಸಿ90, ಮರ್ಸೀಡಿಸ್ ಬೆಂಜ್ ಜಿಎಲ್ಎ ರೀತಿಯ ಕಾರುಗಳು ಇವೆ.
ಇದನ್ನೂ ಓದಿ:ಕೇರಳದಲ್ಲಿ ಅಭಿಮಾನಿಗಳತ್ತ ಕೈ ಬೀಸಿದ ತಲೈವಾ ರಜನೀಕಾಂತ್
ವಿಜಯ್ ಅವರು ಚೆನ್ನೈನ ನೀಕಂಕಾರೈ ಭಾಗದಲ್ಲಿ ಮನೆ ಹೊಂದಿದ್ದಾರೆ. ಇದು ಸಮುದ್ರ ತೀರಕ್ಕೆ ಮುಖ ಮಾಡಿದೆ. ಟಾಮ್ ಕ್ರ್ಯೂಸ್ ಅವರ ಬೀಚ್ ಹೌಸ್ನಿಂದ ಸ್ಫೂರ್ತಿ ಪಡೆದು ಇದನ್ನು ಮಾಡಲಾಗಿದೆ. ಇದರ ಬೆಲೆ 80 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇಷ್ಟೇ ಅಲ್ಲದೆ, ವಿಜಯ್ ಅವರು ತಿರುವಲ್ಲೂರು, ತಿರುಪೊರೂರು, ವಂಡಲೂರು ಕಡೆಗಳಲ್ಲಿ ಆಸ್ತಿ ಹೊಂದಿದ್ದು ಇದರ ಮೌಲ್ಯ 100 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
ವಿಜಯ್ ಅವರ ವರ್ಷದ ಆದಾಯ 120-150 ಕೋಟಿ ರೂಪಾಯಿ. ಬ್ರ್ಯಾಂಡ್ ಪ್ರಚಾರ ಹಾಗೂ ಸಿನಿಮಾಗಳಿಂದ ಇವರು ಹಣ ಮಾಡುತ್ತಾರೆ. ಅವರು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಾಯಕರಲ್ಲೊಬ್ಬರು.
ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ‘ಜನ ನಾಯಗನ್’ ಹೆಸರಿನ ಸಿನಿಮಾ ಮಾಡುತ್ತಿದೆ. ಇದು ವಿಜಯ್ ಅವರ ಕೊನೆಯ ಚಿತ್ರ ಆಗಿರಲಿದೆ ಎನ್ನಲಾಗಿದೆ. ಈ ಚಿತ್ರಕ್ಕಾಗಿ ಅವರು ಬರೋಬ್ಬರಿ 275 ಕೋಟಿ ರೂಪಾಯಿ ಸಂಭಾವನೆ ಪಡೆದ ಬಗ್ಗೆ ವರದಿ ಆಗಿದೆ. 2026ರಲ್ಲಿ ಚೆನ್ನೈನಲ್ಲಿ ಚುನಾವಣೆ ನಡೆಯಲಿದ್ದು, ಆ ಬಳಿಕ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮ ಮಾಡಿದಾಗ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ರಾಜಕೀಯದಲ್ಲಿ ಅವರು ಯಶಸ್ಸು ಕಾಣುತ್ತಾರಾ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ