ಹಾಲಿವುಡ್ ಹೀರೋ ಟಾಮ್ ಕ್ರ್ಯೂಸ್ ಮನೆ ನೋಡಿ ಅದೇ ರೀತಿ ಮನೆ ಕಟ್ಟಿದ್ದಾರೆ ವಿಜಯ್
Thalapathy Vijay: ದಳಪತಿ ವಿಜಯ್ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಅತಿ ಹೆಚ್ಚು ತೆರಿಗೆ ಕಟ್ಟುವ ನಟರಲ್ಲಿ ಒಬ್ಬರು ಸಹ. ವಿಜಯ್ ಹಲವು ಆಸ್ತಿಗಳನ್ನು ಹೊಂದಿದ್ದಾರೆ. ಒಮ್ಮೆ ವಿಜಯ್ ವಿದೇಶಕ್ಕೆ ಹೋಗಿದ್ದಾಗ ಅಲ್ಲಿ ಸ್ಟಾರ್ ನಟ ಟಾಮ್ ಕ್ರೂಸ್ ಅವರ ಬೀಚ್ ಸೈಡ್ ಮನೆ ನೋಡಿ ಅದರಂಥಹುದೇ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ಐಷಾರಾಮಿ ಆಗಿ ತಮ್ಮ ಮನೆ ನಿರ್ಮಾಣ ಮಾಡಲು ಆದ್ಯತೆ ನೀಡುತ್ತಾರೆ. ಅನೇಕ ಸೆಲೆಬ್ರಿಟಿಗಳು ಸಿನಿಮಾ ಗೆಲ್ಲುತ್ತಿದ್ದಂತೆ ಒಂದು ಸುಂದರ ಮನೆ ಕಟ್ಟಿಕೊಳ್ಳಲು ಬಯಸುತ್ತಾರೆ. ಸೂಪರ್ಸ್ಟಾರ್ಗಳಾದರಂತೂ ಕೇಳೋದೇ ಬೇಡ. ಇದಕ್ಕೆ ದಳಪತಿ ವಿಜಯ್ ಕೂಡ ಹೊರತಾಗಿಲ್ಲ. ಇವರು ಚೆನ್ನೈ ಸಮುದ್ರ ತೀರದಲ್ಲಿ ಮನೆ ಹೊಂದಿದ್ದಾರೆ. ಈ ಮನೆಯ ಬೆಲೆ 80 ಕೋಟಿ ರೂಪಾಯಿ. ಹಾಲಿವುಡ್ (Hollywood) ಹೀರೋ ಮನೆಯಿಂದ ಇದು ಸ್ಫೂರ್ತಿ ಪಡೆದಿದೆ.
ದಳಪತಿ ವಿಜಯ್ ಅವರು ಹಲವು ಹಿಟ್ ಚಿತ್ರಗಳನ್ನು ಇಂಡಸ್ಟ್ರಿಯಲ್ಲಿ ನೀಡಿದ್ದಾರೆ. ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ವಿಜಯ್ ಅವರು ರಾಜಕೀಯಕ್ಕೆ ಕಾಲಿಡುತ್ತಿದ್ದಾರೆ. ಇಂದು (ಜೂನ್ 22) ಅವರಿಗೆ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಅವರ ಮನೆಯ ಬಗ್ಗೆಯೂ ಬರ್ತ್ಡೇ ದಿನ ಚರ್ಚೆ ನಡೆಯುತ್ತಿದೆ.
ಹಾಲಿವುಡ್ ಖ್ಯಾತ ನಟ ಟಾಮ್ ಕ್ರ್ಯೂಸ್ ಬಗ್ಗೆ ಅನೇಕರಿಗೆ ತಿಳಿದಿದೆ. ಇವರು ಹಲವು ಸ್ಟಂಟ್ ಸಿನಿಮಾಗಳನ್ನು ಮಾಡಿದ್ದಾರೆ. ವಿಜಯ್ ಮನೆ ಟಾಮ್ ಕ್ರ್ಯೂಸ್ ಅವರ ಸಮುದ್ರ ತೀರದ ಮನೆಯಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತಿದೆ. ವಿಜಯ್ ಅವರು ಸಿನಿಮಾ ಶೂಟ್ಗಾಗಿ ಅನೇಕ ಬಾರಿ ಅಮೆರಿಕಕ್ಕೆ ತೆರಳಿದ್ದರು. ಕುಟುಂಬದ ಜೊತೆಯೂ ಹೋಗಿದ್ದರು. ಈ ವೇಳೆ ಅವರಿಗೆ ಹಾಲಿವುಡ್ ನಟ ಟಾಮ್ ಕ್ರ್ಯೂಸ್ ಅವರ ಬೀಚ್ ಸೈಡ್ ಮನೆಯನ್ನು ನೋಡಲು ಅವಕಾಶ ಸಿಕ್ಕಿತ್ತು. ಇದರಿಂದ ಅವರು ಸ್ಫೂರ್ತಿ ಪಡೆದರು ಮತ್ತು ತಾವು ಕೂಡ ಇದೇ ರೀತಿಯ ಮನೆ ಹೊಂದಬೇಕು ಎಂದು ನಿರ್ಧರಿಸಿದರು.
ಇದನ್ನೂ ಓದಿ:ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ನಿರಾಕರಿಸಿದ್ದೇಕೆ ಸಾಯಿ ಪಲ್ಲವಿ
ಚೆನ್ನೈನ ನೀಲಕಾರೈ ಭಾಗದಲ್ಲಿ ವಿಜಯ್ ಅವರು ಮನೆ ಹೊಂದಿದ್ದಾರೆ. ಟಾಮ್ ಕ್ರ್ಯೂಸ್ ಅವರ ಮನೆಯನ್ನು ರೆಫರ್ ಆಗಿಟ್ಟುಕೊಂಡು ಅವರು ಈ ಮನೆ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ದಳಪತಿ ವಿಜಯ್ ಅವರ ಮನೆಯ ಅಭಿಮಾನಿಗಳ ಪಾಲಿಗೆ ದೇವಸ್ಥಾನವೇ ಸರಿ. ಈ ಮೊದಲು ಈ ಮನೆಯಲ್ಲಿ ಬಾಂಬ್ ಇಟ್ಟ ಬಗ್ಗೆ ಹುಸಿ ಕರೆ ಬಂದಿತ್ತು.
ದಳಪತಿ ವಿಜಯ್ ಅವರು ‘ಜನ ನಾಯಗನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಎಚ್. ವಿನೋದ್ ಅವರು ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



