
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮಲಯಾಳಂ ನಟ ಮೋಹನ್ ಲಾಲ್ (Mohanlal) ಅವರಿಗೆ ವಿಶ್ವ ಮಲಯಾಳಿ ಕೌನ್ಸಿಲ್ ಮತ್ತು ಆಲ್ ಇಂಡಿಯಾ ಮಲಯಾಳಿ ಅಸೋಸಿಯೇಷನ್ ಅಭಿನಂದನೆ ತಿಳಿಸಿದೆ. ಮೋಹನ್‌ಲಾಲ್ ಅವರು ನಟನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಇದನ್ನು ಪರಿಗಣಿಸಿಯೇ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ವಿಶ್ವ ಮಲಯಾಳಿ ಕೌನ್ಸಿಲ್ ಉಪಾಧ್ಯಕ್ಷ ಮತ್ತು ಗುಜರಾತ್‌ನ ಅಖಿಲ ಭಾರತ ಮಲಯಾಳಿ ಸಂಘದ ಅಧ್ಯಕ್ಷ ದಿನೇಶ್ ನಾಯರ್ ಈ ಬಗ್ಗೆ ಮಾತನಾಡಿದ್ದಾರೆ. ‘ಮೋಹನ್ ಲಾಲ್ ಅವರ ಸಾಧನೆಯ ಬಗ್ಗೆ ಹೆಮ್ಮೆ ಮತ್ತು ಮೆಚ್ಚುಗೆ ಇದೆ. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಮಲಯಾಳಿಗಳು ಮತ್ತು ಕೇರಳದವರನ್ನು ಹೆಮ್ಮೆಪಡುವಂತೆ ಮಾಡಿದೆ. ನಾಲ್ಕು ದಶಕಗಳ ಕಾಲ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸಿದ್ದಾರೆ. ಇದು ಹೆಮ್ಮೆಯ ವಿಚಾರ’ ಎಂದಿದ್ದಾರೆ ಅವರು.
ಇದನ್ನೂ ಓದಿ: ನನಗೆ ’ಕಾಂತಾರ’ ಚಿತ್ರದಲ್ಲಿ ಅವಕಾಶ ಕೊಡಿ ಎಂದ ಮೋಹನ್ ಲಾಲ್
ಮೋಹನ್‌ಲಾಲ್ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಒಂದೇ ವರ್ಷ ಅವರ ನಟನೆಯ 30ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆದ ಉದಾಹರಣೆ ಇದರಲ್ಲಿ 25 ಸಿನಿಮಾಗಳು ಸೂಪರ್ ಹಿಟ್. ಅವರಿಗೆ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 9 ಕೇರಳ ರಾಜ್ಯ ಪ್ರಶಸ್ತಿ, ಪದ್ಮಶ್ರೀ (2001) ಹಾಗೂ ಪದ್ಮ ಭೂಷಣ (2019) ಅವಾರ್ಡ್ಗಳು ದೊರೆತಿವೆ. ಇದು ಅವರ ಹೆಚ್ಚುಗಾರಿಕೆ.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 1969ರಲ್ಲಿ ಸ್ಥಾಪನೆ ಆಯಿತು. ಇದು ಚಿತ್ರರಂಗದಲ್ಲಿ ಸೇವೆ ಸಲ್ಲಿದವರಿಗೆ ಸಿಗುವ ಅತ್ಯುನ್ನತ ಪ್ರಶಸ್ತಿ. ಸ್ವರ್ಣ ಕಮಲ ಮೆಡಲ್, ಶಾಲು ಹಾಗೂ 10 ಲಕ್ಷ ರೂಪಾಯಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. ಮೋಹನ್‌ಲಾಲ್ ಅವರಿಗೆ ಸೆಪ್ಟೆಂಬರ್ 23ರಂದು ಈ ಪ್ರಶಸ್ತಿ ನೀಡಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.