ಪೂನಂ ಪಾಂಡೆಗೆ ಮಂಡೋದರಿ ಪಾತ್ರದ ಆಫರ್; ನಂತರ ಏನಾಯ್ತು?
Poonam Pandey: ದೆಹಲಿಯ ಲವ್ ಕುಶ್ ರಾಮಲೀಲಾದಲ್ಲಿ ಪೂನಂ ಪಾಂಡೆ ಅವರನ್ನು ಮಂಡೋದರಿ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಅವರ ಆಯ್ಕೆಯನ್ನು ಹಲವು ಸಂತರು ಮತ್ತು ವಿಶ್ವ ಹಿಂದೂ ಪರಿಷತ್ತು ವಿರೋಧಿಸಿತು. ಪ್ರತಿಭಟನೆಯಿಂದಾಗಿ, ಸಮಿತಿಯು ಪೂನಂ ಪಾಂಡೆ ಅವರನ್ನು ಪಾತ್ರದಿಂದ ತೆಗೆದುಹಾಕಿದೆ.

ಇತ್ತೀಚೆಗೆ, ದೆಹಲಿಯಲ್ಲಿ ನಡೆದ ಪ್ರಸಿದ್ಧ ‘ಲವ್ ಕುಶ್ ರಾಮಲೀಲಾ’ದಲ್ಲಿ ಪೂನಂ ಪಾಂಡೆ (Poonam Pandey) ಭಾಗವಹಿಸುತ್ತಿದ್ದಾರೆ ಎಂದು ಘೋಷಿಸಲಾಯಿತು. ಅವರು ರಾವಣನ ಪತ್ನಿ ಮಂಡೋದರಿ ಪಾತ್ರವನ್ನು ನಿರ್ವಹಿಸಬೇಕಿತ್ತು. ಆದರೆ ಅದಕ್ಕೂ ಮುಂಚೆಯೇ, ಕೋಲಾಹಲ ಉಂಟಾಯಿತು. ಅನೇಕ ಸಂತರು ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಮಲೀಲಾದಲ್ಲಿ ಪೂನಂ ಪಾಂಡೆ ಅವರ ಅಭಿನಯವನ್ನು ಖಂಡಿಸಿದರು. ಲವ್ ಕುಶ್ ರಾಮಲೀಲಾ ಸಮಿತಿಯು ಈ ಬಗ್ಗೆ ನಿಲುವು ತೆಗೆದುಕೊಂಡು ಪೂನಂ ಪಾಂಡೆಯನ್ನು ಆ ಪಾತ್ರದಿಂದ ತೆಗೆದುಹಾಕಿದೆ.
‘ಲವ್ ಕುಶ್ ರಾಮಲೀಲಾ’ ಸಮಿತಿಯ ಅಧ್ಯಕ್ಷ ಅರ್ಜುನ್ ಕುಮಾರ್ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ‘ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡಲು ನಾವು ಬಯಸುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಈ ಪಾತ್ರವನ್ನು ನಿರ್ವಹಿಸದಂತೆ ಒತ್ತಾಯಿಸಿ ಸಮಿತಿಯು ಈಗ ಪೂನಂ ಪಾಂಡೆಗೆ ಪತ್ರ ಬರೆಯಲಿದೆ ಎಂದು ಅವರು ಹೇಳಿದ್ದಾರೆ.
ಈಗ ಸಮಿತಿಯ ಒತ್ತಾಯಕ್ಕೆ ಮಣಿದ ಪೂನಂ ಪಾಂಡೆ ಮಂಡೋದರಿ ಪಾತ್ರವನ್ನು ನಿರ್ವಹಿಸುವುದಿಲ್ಲ ಎಂದು ತಿಳಿದುಬಂದಿದೆ. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದನ್ನು ತಪ್ಪಿಸಲು, ಸಮಿತಿಯು ಪೂನಂ ಪಾಂಡೆಗೆ ಪತ್ರ ಬರೆದು ಆ ಪಾತ್ರವನ್ನು ನಿರ್ವಹಿಸದಂತೆ ವಿನಂತಿಸಿದೆ.
ಪೂನಂ ಪಾಂಡೆ ವಿಡಿಯೋ
View this post on Instagram
ವಿಶ್ವ ಹಿಂದೂ ಪರಿಷತ್ ಈ ನಿರ್ಧಾರವನ್ನು ಸ್ವಾಗತಿಸಿದೆ
ಸಮುದಾಯದ ಭಾವನೆಗಳು ಮತ್ತು ಸಂತರ ಭಾವನೆಗಳನ್ನು ಗೌರವಿಸುವ ಲವ್ ಕುಶ್ ರಾಮಲೀಲಾ ಸಮಿತಿಯು ಈ ವರ್ಷದ ರಾಮಲೀಲಾ ಕಾರ್ಯಕ್ರಮಕ್ಕೆ ಪೂನಂ ಪಾಂಡೆ ಅವರನ್ನು ಆಹ್ವಾನಿಸದಿರಲು ನಿರ್ಧರಿಸಿದೆ. ಇದನ್ನು ವಿಶ್ವ ಹಿಂದೂ ಪರಿಷತ್ ಕೂಡ ಈ ನಿರ್ಧಾರವನ್ನು ಸ್ವಾಗತಿಸಿದೆ. ‘ಧರ್ಮವು ಯಾವಾಗಲೂ ಶಿಷ್ಟಾಚಾರವನ್ನು ರಕ್ಷಿಸಿದೆ ಮತ್ತು ಅಶ್ಲೀಲತೆಯು ಯಾವಾಗಲೂ ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಅಶ್ಲೀಲತೆಯು ಶಿಷ್ಟಾಚಾರದ ಹಂತವನ್ನು ತಲುಪಲು ಅವಕಾಶ ನೀಡುವುದು ತಪ್ಪು’ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ಇದನ್ನೂ ಓದಿ: ಸತ್ತು ಬದುಕಿ ಬಂದ ಬೋಲ್ಡ್ ನಟಿ ಪೂನಂ ಪಾಂಡೆಗೆ ಜನ್ಮದಿನ
ಪೂನಂ ಪಾಂಡೆ ಈ ಮೊದಲು ಹಲವು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರು ಈ ಕಾರಣದಿಂದಲೇ ಫೇಮಸ್ ಆಗಿದ್ದಾರೆ. ಅವರು ಇತ್ತೀಚೆಗೆ ತಾವು ನಿಧನ ಹೊಂದಿದ್ದಾಗಿ ತಮ್ಮ ಬಗ್ಗೆ ತಾವೇ ಫೇಕ್ ನ್ಯೂಸ್ ಹಬ್ಬಿಸಿಕೊಂಡಿದ್ದರು. ಈಗ ಅವರು ಈ ಕಾರಣದಿಂದ ಸುದ್ದಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:46 am, Wed, 24 September 25







