‘ಸಲಾರ್ 2’ ಸಿನಿಮಾಕ್ಕೆ ಮಲಯಾಳಂ ಸೂಪರ್ ಸ್ಟಾರ್ ಎಂಟ್ರಿ?
ಪ್ರಭಾಸ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದ ‘ಸಲಾರ್’ ಸಿನಿಮಾ ಬಿಡುಗಡೆ ಆಗಿ ವರ್ಷವಾಗುತ್ತಾ ಬಂದಿದೆ. ಇದೀಗ ‘ಸಲಾರ್ 2’ ಸಿನಿಮಾ ಚಿತ್ರೀಕರಣ ಆರಂಭವಾಗುವ ಬಗ್ಗೆ ಅಪ್ಡೇಟ್ ಲಭ್ಯವಾಗಿದ್ದು, ಸ್ಟಾರ್ ನಟರೊಬ್ಬರನ್ನು ಸಿನಿಮಾದಲ್ಲಿ ನಟಿಸುವಂತೆ ಕೇಳಲಾಗಿದೆ.
ಪ್ರಭಾಸ್ ನಟಿಸಿ, ಪ್ರಶಾಂತ್ ನೀಲ್ ನಿರ್ದೇಶಿಸಿದ್ದ ‘ಸಲಾರ್’ ಸಿನಿಮಾ ಬಿಡುಗಡೆ ಆಗಿ ವರ್ಷವಾಗುತ್ತಾ ಬಂದಿದೆ. ‘ಸಲಾರ್’ ಸಿನಿಮಾದ ಮೊದಲ ಭಾಗವಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಇನ್ನೂ ಪ್ರಾರಂಭವೇ ಆಗಿಲ್ಲ. ಈ ನಡುವೆ ಕೆಲವು ಸುದ್ದಿಗಳು ಹರಿದಾಡಿದ್ದವು ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ನಡುವೆ ತಲೆದೂರಿರುವ ಮುನಿಸಿನಿಂದಾಗಿ ‘ಸಲಾರ್ 2’ ಸೆಟ್ಟೇರುವುದಿಲ್ಲ ಎನ್ನಲಾಗಿತ್ತು. ಆದರೆ ಅದೆಲ್ಲ ಸುಳ್ಳಾಗಿದ್ದು, ‘ಸಲಾರ್ 2’ ಸಿನಿಮಾ ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆದಂತಿದೆ. ‘ಸಲಾರ್’ ಸಿನಿಮಾದಲ್ಲಿ ದೊಡ್ಡ ತಾರಾಗಣವಿತ್ತು, ಅಂತೆಯೇ ಈಗ ‘ಸಲಾರ್ 2’ ಸಿನಿಮಾಕ್ಕಾಗಿ ಮತ್ತೊಬ್ಬ ಸೂಪರ್ ಸ್ಟಾರ್ ಅನ್ನು ಪ್ರಶಾಂತ್ ನೀಲ್ ಸಂಪರ್ಕ ಮಾಡಿದ್ದಾರೆ.
‘ಸಲಾರ್’ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ, ಮಲಯಾಳಂನ ಪೃಥ್ವಿರಾಜ್ ಸುಕುಮಾರ್, ಶ್ರುತಿ ಹಾಸನ್, ಬಾಬಿ ಸಿಂಹ, ಗರುಡ ರಾಮ್, ನವೀನ್ ಶಂಕರ್, ಪ್ರಮೋದ್, ಶ್ರಿಯಾ ರೆಡ್ಡಿ, ಭಜರಂಗಿ ಲೋಕಿ, ಬ್ರಹ್ಮಾಜಿ, ಟೀನು ಆನಂದ್, ಜಗಪತಿ ಬಾಬು ಇನ್ನೂ ಹಲವು ದೊಡ್ಡ ನಟರನ್ನು ಜೊತೆಯಾಗಿ ಸೇರಿಸಿದ್ದರು ಪ್ರಶಾಂತ್ ನೀಲ್. ಇದೀಗ ‘ಸಲಾರ್ 2’ ಸಿನಿಮಾಕ್ಕೆ ಇನ್ನೊಬ್ಬ ಸೂಪರ್ ಸ್ಟಾರ್ ಅನ್ನು ನಟಿಸುವಂತೆ ಕೇಳಿದ್ದಾರೆ.
ಇದನ್ನೂ ಓದಿ:ಪ್ರಭಾಸ್ಗೆ ಜೋಕರ್ ಎಂದ ಬಾಲಿವುಡ್ ನಟನ ವಿರುದ್ಧ ಕಲಾವಿದರ ಸಂಘದಿಂದ ದೀರ್ಘ ಪತ್ರ
‘ಸಲಾರ್ 2’ ಸಿನಿಮಾದಲ್ಲಿ ನಟಿಸುವಂತೆ ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಅವರನ್ನು ಪ್ರಶಾಂತ್ ನೀಲ್ ಕೇಳಿಕೊಂಡಿದ್ದಾರೆ. ‘ಸಲಾರ್ 2’ ಸಿನಿಮಾದಲ್ಲಿ ಪ್ರಭಾಸ್ರ ತಂದೆ ಪಾತ್ರದ ಫ್ಲ್ಯಾಷ್ ಬ್ಯಾಕ್ ದೃಶ್ಯಗಳಲ್ಲಿ ನಟಿಸುವಂತೆ ಮೋಹನ್ಲಾಲ್ ಅವರನ್ನು ಪ್ರಶಾಂತ್ ನೀಲ್ ಕೇಳಿದ್ದಾರಂತೆ. ‘ಸಲಾರ್’ ಸಿನಿಮಾದ ಕತೆಯಲ್ಲಿ, ಒಪ್ಪಂದದ ಪ್ರಕಾರ ಪ್ರಭಾಸ್ರ ತಂದೆಯೇ ಒಡೆಯನಾಗಬೇಕಿತ್ತು, ಆದರೆ ಜಗಪತಿ ಬಾಬು ಕುತಂತ್ರದಿಂದ ಅವರ ಸಮುದಾಯಕ್ಕೆ ಒಡೆಯನಾಗುವ ಅವಕಾಶ ತಪ್ಪಿರುತ್ತದೆ. ‘ಸಲಾರ್ 2’ ಸಿನಿಮಾದಲ್ಲಿ ಆ ಫ್ಲ್ಯಾಷ್ಬ್ಯಾಕ್ನ ಕತೆ ಇದ್ದು, ಪ್ರಭಾಸ್ರ ತಂದೆ ಪಾತ್ರ ಬಹಳ ಪ್ರಮುಖವಾಗಿದೆ ಹಾಗಾಗಿ ಆ ಪಾತ್ರಕ್ಕೆ ಮೋಹನ್ಲಾಲ್ ಅವರನ್ನು ನೀಲ್ ಕೇಳಿದ್ದಾರೆ.
ಮೋಹನ್ಲಾಲ್ ಪ್ರಸ್ತುತ ಐದು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಬೆರೋಜ್’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ತೆಲುಗಿನ ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ‘ಲುಸಿಫರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ರಾಮ್’ ಹೆಸರಿನ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ವೃಷಭ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡಿಗ ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಬಿಡುಗಡೆ ತಡವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ