ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಬಳ್ಳಾರಿಯಲ್ಲಿ ಪತ್ನಿ, ತಾಯಿ ಭೇಟಿಗೆ ಮನವಿ ಮಾಡಿದ ದರ್ಶನ್
ರೇಣುಕಾ ಸ್ವಾಮಿ ಕೊಲೆ ಕೇಸ್ನ ತನಿಖೆ ಪ್ರಮುಖ ಹಂತಕ್ಕೆ ಬಂದಿದೆ. ಚಾರ್ಜ್ಶೀಟ್ನಲ್ಲಿನ ವಿವರಗಳನ್ನು ನೋಡಿದ ಬಳಿಕ ಎಲ್ಲರಿಗೂ ಶಾಕ್ ಆಗಿದೆ. ಮುಂದಿನ ಕಾನೂನು ಕ್ರಮದ ಬಗ್ಗೆ ದರ್ಶನ್ ಅವರು ಈಗ ಕುಟುಂಬದವರ ಜೊತೆ ಮಾತನಾಡಲು ಬಯಸಿದ್ದಾರೆ. ಬಳ್ಳಾರಿ ಜೈಲಿಗೆ ಬುಧವಾರ (ಸೆಪ್ಟೆಂಬರ್ 11) ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಅವರು ಭೇಟಿ ನೀಡಲಿದ್ದಾರೆ.
ನಟ ದರ್ಶನ್ ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಎ2 ಆಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಚಾರ್ಜ್ಶೀಟ್ನಲ್ಲಿನ ವಿವರಗಳು ನಿಜಕ್ಕೂ ಶಾಕಿಂಗ್ ಆಗಿವೆ. ಬೆಂಗಳೂರಿನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಆಗುತ್ತಿದ್ದಂತೆಯೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಕುಟುಂಬದವರ ಭೇಟಿಗೆ ಮನವಿ ಮಾಡಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಮಾತನಾಡಲು ಅವರು ಬಯಸಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಕುಟುಂಬದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಅವರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆಯೇ ಪತ್ನಿ ಜೊತೆ ಅವರು ಚರ್ಚೆ ಮಾಡಿದ್ದಾರೆ. ಪತ್ನಿ ಜೊತೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಪವಿತ್ರಾ ಗೌಡ ಜತೆ ನನ್ನದು ಲಿವ್ಇನ್ ರಿಲೇಷನ್ಶಿಪ್; ದರ್ಶನ್ ಒಪ್ಪಿಕೊಂಡ ಹಲವು ಸತ್ಯಗಳು
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿದಿದೆ. 3991 ಪುಟಗಳು ಇರುವ ಜಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಆರೋಪಗಳು ಗಂಭೀರ ಆಗಿರುವುದರಿಂದ ದರ್ಶನ್ಗೆ ಜಾಮೀನು ಸಿಗುವುದು ಕಷ್ಟ ಇದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಕೇವಲ 5 ನಿಮಿಷ ಫೋನ್ ಕಾಲ್ನಲ್ಲಿ ಮಾತನಾಡಲು ದರ್ಶನ್ಗೆ ಸಾಧ್ಯವಾಗಿಲ್ಲ. ಆದ್ದರಿಂದ ಪತ್ನಿ ಮತ್ತು ತಾಯಿ ಜೊತೆ ನೇರವಾಗಿ ಮಾತನಾಡಲು ಅವರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ‘ಚಾರ್ಜ್ಶೀಟ್ ಸಾರ್ವಜನಿಕ ಡಾಕ್ಯುಮೆಂಟ್’; ದರ್ಶನ್ ಅರ್ಜಿಗೆ ಡಾ. ಪರಮೇಶ್ವರ್ ಪ್ರತಿಕ್ರಿಯೆ
ನಾಳೆಯೇ (ಸೆಪ್ಟೆಂಬರ್ 11) ಜೈಲಿಗೆ ಬರುವಂತೆ ಪತ್ನಿಗೆ ದರ್ಶನ್ ತಿಳಿಸಿದ್ದಾರೆ. ಈ ಬಗ್ಗೆ ದರ್ಶನ್ ಕುಟುಂಬಸ್ಥರು ಬಳ್ಳಾರಿಯ ಜೈಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಮತ್ತು ತಾಯಿ ಮೀನಾ ಕೂಡ ಬರುವುದಾಗಿ ಮಾಹಿತಿ ನೀಡಿದ್ದಾರೆ. ದರ್ಶನ್ ಕುಟುಂಬದವರು ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.