ಎಲ್ 2:ಎಂಪುರಾನ್ ಕಲೆಕ್ಷನ್, ಮೂರೇ ದಿನಕ್ಕೆ ಹಳೆ ದಾಖಲೆಗಳು ಉಡೀಸ್

|

Updated on: Mar 30, 2025 | 7:59 AM

L2 Empuraan: ಮೋಹನ್​ಲಾಲ್ ನಟಿಸಿ ಪೃಥ್ವಿರಾಜ್ ಸುಕುಮಾರ್ ನಿರ್ದೇಶನದ ‘ಎಲ್​ 2 ಎಂಪುರಾನ್’ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಈ ಹಿಂದಿನ ಎಲ್ಲ ಮಲಯಾಳಂ ಸಿನಿಮಾಗಳ ಕಲೆಕ್ಷನ್ ಗಳನ್ನು ಮುರಿದು ಹಾಕಿದೆ. ‘ಎಂಪುರಾನ್’ ಸಿನಿಮಾ ಮೂರು ದಿನಕ್ಕೆ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದೆಷ್ಟು?

ಎಲ್ 2:ಎಂಪುರಾನ್ ಕಲೆಕ್ಷನ್, ಮೂರೇ ದಿನಕ್ಕೆ ಹಳೆ ದಾಖಲೆಗಳು ಉಡೀಸ್
Empuraan
Follow us on

ಮೋಹನ್​ಲಾಲ್ (Mohanlal) ನಟನೆಯ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಮೂರು ದಿನಗಳಾಯ್ತು. ಮಲಯಾಳಂ, ಕನ್ನಡ ಸೇರಿದಂತೆ ಇನ್ನೂ ಕೆಲ ಭಾರತೀಯ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ರಾಜಕೀಯ, ಸೆಂಟಿಮೆಂಟ್, ಆಕ್ಷನ್ ಒಳಗೊಂಡ ಈ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಿದೆ. ಮೋಹನ್​ಲಾಲ್ ಅಭಿಮಾನಿಗಳಿಗಂತೂ ಟೈಲರ್ ಮೇಡ್ ಸಿನಿಮಾ ಎನ್ನಲಾಗುತ್ತಿದೆ, ಮೊದಲೆರಡು ದಿನ ಉತ್ತಮ ಗಳಿಕೆ ಕಂಡಿರುವ ‘ಎಂಪುರಾನ್’ ಸಿನಿಮಾ ಮೂರನೇ ದಿನವೂ ಸಹ ತಮ್ಮ ಗಳಿಕೆಯ ವೇಗವನ್ನು ಕಾಪಾಡಿಕೊಂಡಿದೆ.

‘ಎಲ್​2, ಎಂಪುರಾನ್’ ಸಿನಿಮಾ ಮಲಯಾಳಂ ಚಿತ್ರರಂಗದ ಎಲ್ಲ ಗಳಿಕೆಯ ದಾಖಲೆಗಳನ್ನು ಕೇವಲ ಮೂರೇ ದಿನಕ್ಕೆ ಬಹುತೇಕ ಮುರಿದು ಬಿಸಾಡಿದೆ. ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾಗಳಾದ ‘ಮಂಜುಮೆಲ್ ಬಾಯ್ಸ್’, ‘ಆವೇಶಂ’ ಸಿನಿಮಾದ ದಾಖಲೆಗಳನ್ನು ಕೇವಲ ಮೂರು ದಿನಕ್ಕೆ ಮುರಿದು ಹಾಕಿರುವ ‘ಎಂಪುರಾನ್’ ಸಿನಿಮಾ ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

‘ಎಂಪುರಾನ್’ ಸಿನಿಮಾ ಬಿಡುಗಡೆ ಆದ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 21.50 ಕೋಟಿ ರೂಪಾಯಿ ಹಣ ಗಳಿಸಿತ್ತು. ಮಲಯಾಳಂ ಚಿತ್ರರಂಗದ ಇನ್ಯಾವುದೇ ಸಿನಿಮಾ ಮೊದಲ ದಿನ ಇಷ್ಟು ದೊಡ್ಡ ಮೊತ್ತ ಗಳಿಸಿದ್ದಿಲ್ಲ. ಈ ಹಿಂದಿನ ದಾಖಲೆಗಳಾದ ‘ಆಡುಜೀವಿತಂ’ ಮತ್ತು ಇದೇ ಸಿನಿಮಾದ ಮೊದಲ ಭಾಗ ‘ಲುಸಿಫರ್’ ಸಿನಿಮಾದ ದಾಖಲೆಗಳನ್ನು ಭಾರಿ ಅಂತರದಿಂದ ಮುರಿಯಿತು ‘ಎಂಪುರಾನ್’. ಆ ಬಳಿಕ ಎರಡನೇ ದಿನ ಸಿನಿಮಾದ ಕಲೆಕ್ಷನ್ ತಗ್ಗಿ 11.27 ಕೋಟಿ ರೂಪಾಯಿಗಳಾಯ್ತು. ಆದರೆ ಇದೂ ಸಹ ಕೇರಳ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆಯೇ.

ಇದನ್ನೂ ಓದಿ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ
ಮಹೇಶ್ ಬಾಬು ಜೊತೆ ನಟಿಸಿದರೂ ಸಿಗದ ಅದೃಷ್ಟ; ಈಗ ಗೂಗಲ್​ನಲ್ಲಿ ಕೆಲಸ
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ಇದನ್ನೂ ಓದಿ:ಗಳಿಕೆಯಲ್ಲಿ ಇತಿಹಾಸ; ಮೊದಲ ದಿನವೇ ಗರಿಷ್ಠ ಕಲೆಕ್ಷನ್ ಮಾಡಿದ ‘ಎಲ್​2: ಎಂಪುರಾನ್’

ಇದೀಗ ಸಿನಿಮಾ ಬಿಡುಗಡೆ ಆಗಿ ಮೂರನೇ ದಿನಕ್ಕೆ 13.37 ಕೋಟಿ ರೂಪಾಯಿ ಹಣ ಗಳಿಕೆ ಮಾಡಿದೆ. ಆ ಮೂಲಕ ಭಾರತದಲ್ಲಿ ಕೇವಲ ಮೂರು ದಿನಕ್ಕೆ 45.87 ಕೋಟಿ ಗಳಿಕೆ ಮಾಡಿದೆ. ಇಂದು ಅಂದರೆ ನಾಲ್ಕನೇ ದಿನದ ಕಲೆಕ್ಷನ್ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಇದ್ದು, ಸಿನಿಮಾದ ಭಾರತದ ಕಲೆಕ್ಷನ್ 60 ಕೋಟಿ ದಾಟುವ ನಿರೀಕ್ಷೆ ಇದೆ.

ಭಾರತದ ಬಾಕ್ಸ್ ಆಫೀಸ್​ನಲ್ಲಿ ಮಾತ್ರವೇ ಅಲ್ಲದೆ ವಿದೇಶಿ ಬಾಕ್ಸ್ ಆಫೀಸ್​ನಲ್ಲಿಯೂ ಸಹ ಈ ಸಿನಿಮಾ ದಾಖಲೆಗಳನ್ನು ಬರೆಯುತ್ತಿದೆ. ವಿದೇಶಿ ಬಾಕ್ಸ್ ಆಫೀಸ್​ನಲ್ಲಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಸಿನಿಮಾ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಸಹ ‘ಎಂಪುರಾನ್’ ಸಿನಿಮಾ ಮುರಿದು ಹಾಕಿದೆ.

‘ಎಂಪುರಾನ್’ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಮೋಹನ್​ಲಾಲ್ ಜೊತೆಗೆ ಟೊವಿನೊ ಥಾಮಸ್, ಮಂಜು ವಾರಿಯರ್, ಕನ್ನಡದ ಕಿಶೋರ್ ಸೇರಿದಂತೆ ಹಲವು ಪ್ರತಿಭಾವಂತ ನಟರು ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:26 am, Sun, 30 March 25