ಮೋಹನ್ಲಾಲ್ ನಟನೆಯ ‘ಎಲ್2:ಎಂಪುರಾನ್’ ಹೇಗಿದೆ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
L2:Empuraan: ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ನಟಿಸಿ, ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡಿರುವ ‘ಎಲ್2:ಎಂಪುರಾನ್’ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ ಇಂದು (ಮಾರ್ಚ್ 27) ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟ್ಟರ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾ ಜನಕ್ಕೆ ಇಷ್ಟವಾಯ್ತಾ? ಇಲ್ಲಿದೆ ಮಾಹಿತಿ...

ಮಲಯಾಳಂ (Malayalam) ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿ, ಅದೇ ಚಿತ್ರರಂಗದ ಮತ್ತೊಬ್ಬ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ಸಿನಿಮಾ ‘ಎಲ್2:ಎಂಪುರನ್’ ಇಂದು (ಮಾರ್ಚ್ 27) ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಈ ಸಿನಿಮಾ ತೆರೆಗೆ ಬಂದಿದ್ದು, ಹಲವು ಕಡೆ ಬೆಳ್ಳಂಬೆಳಿಗ್ಗೆ ಶೋಗಳು ನಡೆದಿವೆ. ಸಿನಿಮಾ ನೋಡಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ…
#Empuraan a decent+ mass masala entertainer with top making from Prithvi & enough high moments and treat for fans 🔥
Enough peak moments for Lalettan fans.. Another fan service from Prithvi..
Watch it from big halls with packed crowd 🔥
4-5 scenes thooki parathi 🤌🔥 pic.twitter.com/VIFsqh99GP
— AB George (@AbGeorge_) March 27, 2025
ಮಲಯಾಳಂ ಚಿತ್ರರಂಗದ ನಟ ಎಬಿ ಜಾರ್ಜ್, ಬೆಳ್ಳಂಬೆಳಿಗ್ಗೆ ‘ಎಲ್2, ಎಂಪುರಾನ್’ ಸಿನಿಮಾ ನೋಡಿದ್ದಾರೆ. ಅದೂ ತುಂಬಿದ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸೇರಿ ಸಿನಿಮಾ ವೀಕ್ಷಿಸಿದ್ದು, ಟ್ವಿಟ್ಟರ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಎಂಪುರಾನ್’ ಸಿನಿಮಾ ಸಾಧಾರಣವಾದ ಮಾಸ್ ಮಸಾಲ ಸಿನಿಮಾ. ಪೃಥ್ವಿರಾಜ್ ಸುಕುಮಾರ್ ಅದ್ಭುತವಾಗಿ ಮೇಕಿಂಗ್ ಮಾಡಿದ್ದಾರೆ. ಮೋಹನ್ಲಾಲ್ ಅಭಿಮಾನಿಗಳಿಗೆ ಕೆಲವು ಒಳ್ಳೆಯ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ನಾಲ್ಕೈದು ಸೀನ್ಗಳಂತೂ ಅದ್ಭುತವಾಗಿವೆ’ ಎಂದಿದ್ದಾರೆ.
#Empuraan A steady first half followed by a strong second half. Prithviraj excels in direction, while Sujith Vaassudev’s cinematography is top-notch. Lalettan has limited screen time in the first half but gets more in the later half. The ‘jungle pwoli scene’ is a major highlight,… pic.twitter.com/m4exUwsMTG
— Forum Reelz (@ForumReelz) March 27, 2025
ಫೋರಮ್ಸ್ ರೀಲ್ಸ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಮಾಡಲಾಗಿರುವ ‘ಎಂಪುರಾನ್’ ಸಿನಿಮಾ ಕುರಿತ ಟ್ವೀಟ್ ಆಸಕ್ತಿಕರವಾಗಿದೆ. ‘ಮೊದಲಾರ್ಧ ಗಟ್ಟಿಯಾಗಿದೆ. ಹಲವು ಕುತೂಹಲಗಳನ್ನು ಹುಟ್ಟಿಸುತ್ತದೆ. ದ್ವೀತಾಯರ್ಧ ಮೊದಲಾರ್ಧಕ್ಕೆ ಪೂರಾಕವಾಗಿದೆ. ಸುಜಿತ್ ವಾಸುದೇವನ್ ಅವರ ಸಿನಿಮಾಟೊಗ್ರಫಿ ಅದ್ಭುತವಾಗಿದೆ. ಮೊದಲಾರ್ಧದಲ್ಲಿ ಮೋಹನ್ಲಾಲ್ಗೆ ಹೆಚ್ಚಿನ ಸ್ಕ್ರೀನ್ ಟೈಂ ಇಲ್ಲ. ಆದರೆ ಎರಡನೇ ಅರ್ಧದಲ್ಲಿ ಅವರೇ ಹೆಚ್ಚಾಗಿದ್ದಾರೆ. ಕಾಡಿನಲ್ಲಿ ನಡೆಯುವ ದೃಶ್ಯ ಇಡೀ ಸಿನಿಮಾದ ಹೈಲೆಟ್, ಸಿನಿಮಾದಲ್ಲಿ ಬರುವ ಅತಿಥಿ ಪಾತ್ರವಂತೂ ಅದ್ಭುತವಾಗಿದೆ’ ಎಂದಿದ್ದಾರೆ.
An well written story and screenplay .. excellent cinematography with mind blowing action sequences🔥💥some of violence scenes in first 30 mins was hard to watch 🫣
Every characters had equal screen space to perform and did well.. some minor flaws are there… pic.twitter.com/5A0II9bHOw
— SmartBarani (@SmartBarani) March 27, 2025
ಸ್ಮಾರ್ತ್ ಬರಾನಿ ಎಂಬುವರು ಟ್ವೀಟ್ ಮಾಡಿ, ‘ಅಚ್ಚಕಟ್ಟಾದ ಕತೆ, ಚಿತ್ರಕತೆ ಸಿನಿಮಾದಲ್ಲಿದೆ. ಅದ್ಭುತವಾದ ಸಿನಿಮಾಟೊಗ್ರಫಿ ಮತ್ತು ಅದ್ಧೂರಿ ಆಕ್ಷನ್ ಸನ್ನಿವೇಶಗಳು ಸಿನಿಮಾದಲ್ಲಿವೆ. ಮೊದಲು 30 ನಿಮಿಷದಲ್ಲಿ ಬರುವ ಕೆಲವು ಹಿಂಸೆ ಸೀನ್ಗಳನ್ನು ನೋಡುವುದು ಕಷ್ಟ ಅನಿಸುತ್ತದೆ. ಸಿನಿಮಾದ ಎಲ್ಲ ಪಾತ್ರಗಳಿಗೂ ಒಳ್ಳೆಯ ಸ್ಕ್ರೀನ್ ಸ್ಪೇಸ್ ಮತ್ತು ಮಹತ್ವ ಇದೆ. ಒಟ್ಟಾರೆಯಾಗಿ ಇದೊಂದು ಬಹಳ ಒಳ್ಳೆಯ ಸಿನಿಮಾ ಎಂದಿದ್ದಾರೆ.
#Empuraan: High on style, low on substance. Relies heavily on visual grandeur but falls heavily on the writing part. Very few genuine high moments and others were a rehash of Lucifer’s best moments.
High rich production values and top notch cinematograohy though Music from… pic.twitter.com/y7dSrj6cZp
— ForumKeralam (@Forumkeralam2) March 27, 2025
ಫೋರಮ್ ಕೇರಳಂ ಟ್ವೀಟ್ ಮಾಡಿ, ಮೇಕಿಂಗ್ ಚೆನ್ನಾಗಿದೆ ಆದರೆ ಕತೆಯಲ್ಲಿ ಹೆಚ್ಚನ ಧಮ್ ಇಲ್ಲ ಎಂದಿದೆ. ಕತೆಗಿಂತಲೂ ಹೆಚ್ಚಾಗಿ ಮೇಕಿಂಗ್, ಆಕ್ಷನ್ ಅಂಥಹಾ ಕಮರ್ಶಿಯಲ್ ಅಂಶಗಳ ಮೇಲೆ ಹೆಚ್ಚು ನಿರ್ಭರವಾಗಿದ್ದಾರೆ ನಿರ್ದೇಶಕ. ಕೆಲ ದೃಶ್ಯಗಳು ಬಹಳ ಚೆನ್ನಾಗಿವೆ, ಉಳಿದ ದೃಶ್ಯಗಳು ನೀರಸವಾಗಿವೆ. ಒಳ್ಳೆಯ ಮೇಕಿಂಗ್, ಸಿನಿಮಾಟೊಗ್ರಫಿ ಸಹ ಅದ್ಧೂರಿಯಾಗಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 am, Thu, 27 March 25