‘ನನ್ನ ಹೆಸರಿನ ಫೇಕ್ ಖಾತೆ ನಂಬಬೇಡಿ’: ಅಭಿಮಾನಿಗಳಿಗೆ ದುಲ್ಕರ್ ಸಲ್ಮಾನ್ ಎಚ್ಚರಿಕೆ

ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರ ಹೆಸರಿಲ್ಲಿದ್ದ ನಕಲಿ ಟ್ವಿಟರ್ ಖಾತೆಯಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಅದಕ್ಕಾಗಿ ಅಭಿಮಾನಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ದುಲ್ಕರ್ ಸಲ್ಮಾನ್ ಅವರು ಬಹಿರಂಗವಾಗಿ ವಾರ್ನಿಂಗ್ ಕೊಟ್ಟ ಬಳಿಕ ಆ ಖಾತೆ ಡಿಲೀಟ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ..

‘ನನ್ನ ಹೆಸರಿನ ಫೇಕ್ ಖಾತೆ ನಂಬಬೇಡಿ’: ಅಭಿಮಾನಿಗಳಿಗೆ ದುಲ್ಕರ್ ಸಲ್ಮಾನ್ ಎಚ್ಚರಿಕೆ
Dulquer Salmaan

Updated on: Sep 28, 2026 | 7:02 PM

ಸೋಷಿಯಲ್ ಮೀಡಿಯಾದಲ್ಲಿ ಖ್ಯಾತ ನಟ-ನಟಿಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಗೊಂದಲ ಸೃಷ್ಟಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಇದೀಗ ಮಲಯಾಳಂ ಮತ್ತು ದಕ್ಷಿಣ ಭಾರತದ ಖ್ಯಾತ ನಟ ದುಲ್ಕರ್ ಸಲ್ಮಾನ್ ಅವರು ತಮ್ಮ ಹೆಸರಿನಲ್ಲಿದ್ದ ನಕಲಿ ಎಕ್ಸ್ (ಟ್ವಿಟರ್) ಖಾತೆಯೊಂದರ ಬಗ್ಗೆ ಅಭಿಮಾನಿಗಳಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿದ್ದ ಈ ಫೇಕ್ ಖಾತೆಯು ಸಿನಿಮಾಗಳು, ಇತರೆ ನಟರು ಹಾಗೂ ತಮ್ಮ ಕುಟುಂಬದ ಸದಸ್ಯರ ಬಗ್ಗೆಯೇ ನಕಲಿ ಪೋಸ್ಟ್‌ಗಳನ್ನು ಮಾಡುತ್ತಾ ಗೊಂದಲ ಸೃಷ್ಟಿಸುತ್ತಿತ್ತು ಎಂದು ದುಲ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ದುಲ್ಕರ್ ಸಲ್ಮಾನ್, ‘@_dulQuer ಎಂಬ ಅಕೌಂಟ್ ಅನ್ನು ನನ್ನ ನಿಜವಾದ ಖಾತೆ ಎಂದು ನಂಬಬೇಡಿ. ಎಲ್ಲರಲ್ಲೂ ನಾನು ವಿನಂತಿಸುತ್ತೇನೆ. ಇದು ನಕಲಿ ಅಕೌಂಟ್. ನನ್ನಂತೆಯೇ ನಟಿಸಿ ಪ್ರತಿಯೊಂದು ವಿಷಯಕ್ಕೂ ಕಾಮೆಂಟ್ ಮಾಡುವುದು ಹಾಸ್ಯಾಸ್ಪದ ಮತ್ತು ತಪ್ಪು’ ಎಂದು ಬರೆದುಕೊಂಡಿದ್ದಾರೆ.

‘ಸಿನಿಮಾಗಳು, ಇತರೆ ನಟರು ಹಾಗೂ ಕೊನೆಗೆ ನನ್ನ ಸ್ವಂತ ಕುಟುಂಬದ ಸದಸ್ಯರಿಗೂ ನಕಲಿ ಶುಭಾಶಯ ಕೋರುವ ಮೂಲಕ ಈ ಖಾತೆಯು ಅನಗತ್ಯ ಗೊಂದಲ ಮತ್ತು ನಕಾರಾತ್ಮಕತೆಯನ್ನು ಹಬ್ಬಿಸುತ್ತಿದೆ. ನಾನು ಈಗಾಗಲೇ ಈ ಅಕೌಂಟ್ ವಿರುದ್ಧ ಅಧಿಕೃತ ದೂರು ನೀಡಿದ್ದು, ‘ಎಕ್ಸ್’ ಸಂಸ್ಥೆಯಿಂದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ’ ಎಂದು ಅವರು ತಿಳಿಸಿದ್ದರು.

ದುಲ್ಕರ್ ಸಲ್ಮಾನ್ ಅವರ ಪೋಸ್ಟ್ ಬೆನ್ನಲ್ಲೇ, ಆ ನಕಲಿ ಖಾತೆಯನ್ನು ನಿರ್ವಹಿಸುತ್ತಿದ್ದ ಅಭಿಮಾನಿ ತಕ್ಷಣವೇ ಸ್ಪಂದಿಸಿ ಕ್ಷಮೆಯಾಚಿಸಿದ್ದಾನೆ. ‘ಕ್ಷಮಿಸಿ, ಯಾವುದೇ ದ್ವೇಷ ಅಥವಾ ನಕಾರಾತ್ಮಕತೆಯನ್ನು ಹಬ್ಬಿಸುವ ಉದ್ದೇಶ ನನಗಿರಲಿಲ್ಲ. ನಾನು ಯಾವಾಗಲೂ ನಿಮ್ಮ ಅಭಿಮಾನಿ. ಯಾವುದೇ ಸೈಬರ್ ಬೆದರಿಕೆಗೆ ಹೆದರಿ ನಾನು ಈ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತಿಲ್ಲ. ಬದಲಿಗೆ ನಿಮ್ಮ ಮಾತು ಮತ್ತು ನಿಮಗಿರುವ ಗೌರವಕ್ಕಾಗಿ ಮಾತ್ರ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಆ ವ್ಯಕ್ತಿ ಕಾಮೆಂಟ್ ಮಾಡಿ, ಖಾತೆಯನ್ನು ಡಿಲೀಟ್ ಮಾಡಿದ್ದಾನೆ.

ಇದನ್ನೂ ಓದಿ: ಬಾಲಿವುಡ್ ಮಾಡಿದ ಅವಮಾನದ ಬಗ್ಗೆ ದುಲ್ಕರ್ ಸಲ್ಮಾನ್ ಮಾತು

ದುಲ್ಕರ್ ಸಲ್ಮಾನ್ ಇತ್ತೀಚೆಗೆ ಮಲಯಾಳಂನ ‘ಐ ಆ್ಯಮ್ ಗೇಮ್’ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಡ್ಯಾನ್ ಜಾನ್ ಎಂಬ ಜೂಜುಕೋರನ ಪಾತ್ರದಲ್ಲಿ ದುಲ್ಕರ್ ನಟಿಸಿದ್ದ ಈ ಚಿತ್ರವು ಪ್ರೇಕ್ಷಕರಿಗೆ ಇಷ್ಟ ಆಗಲಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಹಿನ್ನಡೆ ಕಂಡಿತು. ಈ ಚಿತ್ರವು ಭಾರತದಲ್ಲಿ 25.49 ಕೋಟಿ ರೂಪಾಯಿ ಹಾಗೂ ವಿಶ್ವಾದ್ಯಂತ 47.89 ಕೋಟಿ ರೂಪಾಯಿ ಗಳಿಕೆ ಮಾಡಲಷ್ಟೇ ಶಕ್ತವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us