AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Major Twitter Review: ಸಂದೀಪ್ ಉನ್ನಿಕೃಷ್ಣನ್ ಜೀವನವನ್ನು ಆಧರಿಸಿದ ‘ಮೇಜರ್’ ವೀಕ್ಷಿಸಿ ಜನರು ಹೇಳಿದ್ದೇನು? ಇಲ್ಲಿದೆ ಟ್ವಿಟರ್ ರಿವ್ಯೂ

Adivi Sesh | Major Movie: ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರಕ್ಕೆ ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರ ವೀಕ್ಷಿಸಿದ ನೆಟ್ಟಿಗರು ಹೇಳಿದ್ದೇನು? ಇಲ್ಲಿದೆ ನೋಡಿ.

Major Twitter Review: ಸಂದೀಪ್ ಉನ್ನಿಕೃಷ್ಣನ್ ಜೀವನವನ್ನು ಆಧರಿಸಿದ ‘ಮೇಜರ್’ ವೀಕ್ಷಿಸಿ ಜನರು ಹೇಳಿದ್ದೇನು? ಇಲ್ಲಿದೆ ಟ್ವಿಟರ್ ರಿವ್ಯೂ
‘ಮೇಜರ್’ ಚಿತ್ರದಲ್ಲಿ ಅಡಿವಿ ಶೇಷ್​
TV9 Web
| Updated By: shivaprasad.hs|

Updated on: Jun 03, 2022 | 12:00 PM

Share

ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನ್ನಾಧರಿಸಿದ ‘ಮೇಜರ್’ ಚಿತ್ರ (Major Movie) ಇಂದು (ಜೂ.3) ತೆರೆಕಂಡಿದೆ. ಟಾಲಿವುಡ್​ ನಟ ಅಡಿವಿ ಶೇಷ್​ (Adivi Sesh) ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶಿಸಿರುವ ಈ ಚಿತ್ರಕ್ಕೆ ಬಹಳ ಸಮಯದಿಂದ ಅಭಿಮಾನಿಗಳು ಕಾದಿದ್ದರು. ಕನ್ನಡದಲ್ಲಿ ಚಿತ್ರ ರಿಲೀಸ್ ಆಗುತ್ತಿಲ್ಲ ಎಂಬ ಬೇಸರವಿದ್ದರೂ ಕೂಡ ಜನರು ಚಿತ್ರಮಂದಿರಗಳಿಗೆ ಚಿತ್ರ ವೀಕ್ಷಿಸಿದ್ದಾರೆ. ತಮಿಳು ಹಾಗೂ ಮಲಯಾಳಂನಲ್ಲಿ ‘ಮೇಜರ್’ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ವೀಕ್ಷಿಸಿದವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ 26/11ಕ್ಕೆ ನಡೆದ ಉಗ್ರ ದಾಳಿಯಲ್ಲಿ ಹೋರಾಡುತ್ತಾ ಮರಣವನ್ನಪ್ಪಿದ ಉನ್ನಿಕೃಷ್ಣನ್ ಅವರ ಕತೆಯನ್ನಾಧರಿಸಿ ಚಿತ್ರ ತಯಾರಾಗಿದೆ. ಚಿತ್ರ ವೀಕ್ಷಿಸಿದ ನೆಟ್ಟಿಗರು ಟ್ವಿಟರ್​ನಲ್ಲಿ ಹೇಳಿದ್ದೇನು? ಜನರ ಅಭಿಪ್ರಾಯಗಳು ಇಲ್ಲಿವೆ.

ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರಕ್ಕೆ ಬಾಕ್ಸಾಫೀಸ್​ನಲ್ಲಿ ಪ್ರಬಲ ಪೈಪೋಟಿ ಎದುರಾಗಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಪೃಥ್ವಿರಾಜ್’ ತೆರೆಕಂಡಿದ್ದರೆ, ತಮಿಳಿನಲ್ಲಿ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ರಿಲೀಸ್ ಆಗಿದೆ. ಇವುಗಳ ನಡುವೆ ತೆರೆ ಕಂಡಿರುವ ‘ಮೇಜರ್’ಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದು ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಚಿತ್ರ ವೀಕ್ಷಿಸಿದ ಜನರು ಕೊನೆಯ 40 ನಿಮಿಷಗಳನ್ನು ವಿಶೇಷವಾಗಿ ಹೊಗಳಿದ್ದಾರೆ. ಎಲ್ಲರಿಗೂ ಕಣ್ಣೀರು ತರಿಸುವಂತಹ ದೃಶ್ಯಗಳಿವೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ
Image
Shriya Saran: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಶ್ರಿಯಾ ಶರಣ್; ಇಲ್ಲಿವೆ ‘ಕಬ್ಜ’ ಬೆಡಗಿಯ ಫೋಟೋಗಳು
Image
KGF Chapter 2: ಓಟಿಟಿಯಲ್ಲಿ ರಿಲೀಸ್ ಆಯ್ತು ‘ಕೆಜಿಎಫ್ ಚಾಪ್ಟರ್ 2’; ರಾಕಿ ಭಾಯ್ ಬಾಕ್ಸಾಫೀಸ್​ನಲ್ಲಿ ಇದುವರೆಗೆ ಮಾಡಿದ ಕಲೆಕ್ಷನ್ ಎಷ್ಟು?
Image
ಸ್ಟಾರ್ ನಟನ ಜತೆ ಜಗಳಕ್ಕೆ ಇಳಿದ ಕಂಟೆಂಟ್ ಕ್ರಿಯೇಟರ್ ನಿಹಾರಿಕಾ; ಮಹೇಶ್ ಬಾಬು ನೋಡಿ ಗಪ್​ಚುಪ್
Image
Major Teaser: ಜೀವ ಲೆಕ್ಕಿಸದೇ ಜನರ ರಕ್ಷಿಸಿದ: ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ ಮಾಡಿದ ತ್ಯಾಗ ನೆನಪಿಸುವ ‘ಮೇಜರ್’ ಟೀಸರ್

ಜತೆಗೆ ನಿರ್ದೇಶನ ಹಾಗೂ ತಾಂತ್ರಿಕ ವಿಭಾಗಕ್ಕೆ ನೆಟ್ಟಿಗರು ಫುಲ್ ಮಾರ್ಕ್ಸ್​ ನೀಡಿದ್ದಾರೆ. ಹಾಗೆಯೇ ಅಡಿವಿ ಶೇಷ್ ಅವರ ನಟನೆಗೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ವೀಕ್ಷಿಸಿ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಕೆಲವು ಅಭಿಪ್ರಾಯಗಳು ಇಲ್ಲಿವೆ.

‘ಮೇಜರ್’ ಚಿತ್ರಕ್ಕೆ ನಟ ಅಡಿವಿ ಶೇಷ್​ ಅವರೇ ಕತೆ ಬರೆದಿದ್ದಾರೆ. ಸಾಯಿ ಮಂಜ್ರೇಕರ್, ಪ್ರಕಾಶ್ ರಾಜ್, ರೇವತಿ, ಮುರಳಿ ಶರ್ಮಾ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಿ ಪಿಕ್ಚರ್ಸ್​, ಜಿ ಮಹೇಶ್ ಬಾಬು ಪ್ರೊಡಕ್ಷನ್ಸ್​​ ಮತ್ತು ಎ+ಎಸ್​​ ಮೂವೀಸ್​ ಬ್ಯಾನರ್​ಗಳಲ್ಲಿ ಜಂಟಿಯಾಗಿ ಚಿತ್ರವನ್ನು ನಿರ್ಮಿಸಲಾಗಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ