‘ಭೂಲ್​ ಭುಲಯ್ಯ 3’ ಕೆಲವರಿಗೆ ಇಷ್ಟ ಆಯ್ತು, ಇನ್ನೂ ಕೆಲವರಿಗೆ ಬೇಸರವಾಯ್ತು

‘ಭೂಲ್ ಭುಲಯ್ಯ 3’ ಚಿತ್ರ ಹಾರರ್​ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ತೃಪ್ತಿ ದಿಮ್ರಿ, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ರಾಜ್​ಪಾಲ್ ಯಾದವ್ ಮೊದಲಾದವರು ನಟಿಸಿದ್ದಾರೆ. ಅನೀಸ್ ಬಾಜ್ಮಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

‘ಭೂಲ್​ ಭುಲಯ್ಯ 3’ ಕೆಲವರಿಗೆ ಇಷ್ಟ ಆಯ್ತು, ಇನ್ನೂ ಕೆಲವರಿಗೆ ಬೇಸರವಾಯ್ತು
ಭೂಲ್ ಭುಲಯ್ಯ 3
Follow us
ರಾಜೇಶ್ ದುಗ್ಗುಮನೆ
|

Updated on: Nov 01, 2024 | 3:01 PM

‘ಭೂಲ್ ಭುಲಯ್ಯ’ ಚಿತ್ರದಲ್ಲಿ ಹೀರೋ ಆಗಿ ನಟಿಸಿದವರು ಅಕ್ಷಯ್ ಕುಮಾರ್. ಆ ಬಳಿಕ ‘ಭೂಲ್ ಭುಲಯ್ಯ 2’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಹೀರೋ ಆಗಿ ನಟಿಸಿದರು. ದೀಪಾವಳಿ ಪ್ರಯುಕ್ತ ಇಂದು (ನವೆಂಬರ್ 1) ‘ಭೂಲ್ ಭುಲಯ್ಯ 3’ ರಿಲೀಸ್ ಆಗಿದೆ. ಈ ಚಿತ್ರ ನೊಡಿದ ಕೆಲವರು ಮೆಚ್ಚುಗೆ ಸೂಚಿಸಿದರೆ ಇನ್ನೂ ಕೆಲವರು ಬೇಸರ ಹೊರಹಾಕಿದ್ದಾರೆ. ಸಿನಿಮಾ ಹೇಗಿದೆ ಎಂಬುದರ ವಿವರ ಇಲ್ಲಿದೆ.

‘ಭೂಲ್ ಭುಲಯ್ಯ 3’ ಚಿತ್ರ ಹಾರರ್​ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ತೃಪ್ತಿ ದಿಮ್ರಿ, ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ರಾಜ್​ಪಾಲ್ ಯಾದವ್ ಮೊದಲಾದವರು ನಟಿಸಿದ್ದಾರೆ. ಅನೀಸ್ ಬಾಜ್ಮಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೋಡಿದ ಅನೇಕರು ಅಕ್ಷಯ್ ಕುಮಾರ್ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ.

‘ಅಕ್ಷಯ್ ಕುಮಾರ್ ಇಲ್ಲದೆ ಭೂಲ್ ಭುಲಯ್ಯ ಸರಣಿಯ ಸಿನಿಮಾಗಳು ಹೇಗೆ ಕಾಣುತ್ತವೆ’ ಎಂಬುದಕ್ಕೆ ಸಂಬಂಧಿಸಿ ಅಭಿಮಾನಿಯೊಬ್ಬರು ವಿಡಿಯೋ ಹಂಚಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಅವರು ಎಷ್ಟೇ ಉತ್ತಮ ಪರ್ಫಾರಮೆನ್ಸ್ ನೀಡಿದ್ದರೂ ಅಕ್ಷಯ್ ಕುಮಾರ್ ಬೆಸ್ಟ್ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

‘ಮತ್ತೊಂದು ಸೀಕ್ವೆಲ್ ಅಂದುಕೊಂಡ ಮಟ್ಟದಲ್ಲಿ ಮೂಡಿಬಂದಿಲ್ಲ. ಭೂಲ್ ಭುಲಯ್ಯ ಮೂರನೇ ಸಿನಿಮಾ ನಿರಾಸೆ ಮೂಡಿಸಿದೆ’ ಎಂದು ಕೆಲರು ಹೇಳಿದ್ದಾರೆ. ಇನ್ನೂ ಕೆಲವರು ಕಾರ್ತಿಕ್ ಆರ್ಯನ್ ಅವರನ್ನು ಹೊಗಳಿದ್ದಾರೆ. ‘ಕಾರ್ತಿಕ್ ಆರ್ಯನ್ ಅವರು ಮತ್ತೊಂದು ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ: ‘ಭೂಲ್​ ಭುಲಯ್ಯ 3’ ಟ್ರೇಲರ್: ದೆವ್ವದ ಲುಕ್​ನಲ್ಲಿ ಮಾಧುರಿ ದೀಕ್ಷಿತ್​, ವಿದ್ಯಾ ಬಾಲನ್ 

‘ಪ್ರತಿ ಹಂತದಲ್ಲೂ ಟ್ವಿಸ್ಟ್ ಹಾಗೂ ಟರ್ನ್​​ಗಳು ಇವೆ. ಕಥೆ ಉತ್ತಮವಾಗಿದೆ ನನಗೆ ಇಷ್ಟ ಆಯಿತು’ ಎಂದು ಕೆಲವರು ಹೇಳಿಕೊಡಿದ್ದಾರೆ. ಒಟ್ಟಾರೆ ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದ ಜೊತೆಗೆ ‘ಸಿಂಗಂ ಅಗೇನ್’ ಕೂಡ ರಿಲೀಸ್ ಆಗಿದೆ. ಎರಡೂ ಸಿನಿಮಾಗಳಲ್ಲಿ ಯಾವ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ