ಸತತ ಸೋಲು ಕಾಣುತ್ತಿರುವ ‘ಬ್ರಹ್ಮಾಸ್ತ್ರ’ ಸಿನಿಮಾಗೆ (Brahmastra Movie) ಬಲ ತುಂಬಲು ಹಲವು ಹೀರೋಗಳು, ನಿರ್ದೇಶಕರು ಪ್ರಯತ್ನಿಸಿ ಸೋತಿದ್ದಾರೆ. ಅಕ್ಷಯ್ ಕುಮಾರ್, ಆಮಿರ್ ಖಾನ್ರಂತಹ ಘಟಾನುಘಟಿ ನಟರ ಸಿನಿಮಾಗಳೇ ಸೋತು ಸುಣ್ಣವಾಗಿದೆ. 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಂದರ್ಭದಲ್ಲಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಇದೇ ಮೊದಲ ಬಾರಿಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾದಲ್ಲಿ ಹಲವು ಸ್ಟಾರ್ ನಟರು ಅತಿಥಿ ಪಾತ್ರ ಮಾಡಿದ್ದಾರೆ. ಬಾಲಿವುಡ್ನ ಸ್ಟಾರ್ ನಟ ಶಾರುಖ್ ಖಾನ್ ಕೂಡ ಈ ಚಿತ್ರದಲ್ಲಿ ಬಂದು ಹೋಗುತ್ತಾರೆ. ಈ ಸಿನಿಮಾಗೆ ಕೆಲವರು ಒಳ್ಳೆಯ ರೇಟಿಂಗ್ ನೀಡಿದರೆ, ಇನ್ನೂ ಕೆಲವರು ಚಿತ್ರವನ್ನು ತೆಗಳಿದ್ದಾರೆ.
Watched #Brahmastra #Brahmashtra . The major letdown is its weak story and Vfx is quite good considering it’s budget. But due to delay it becomes outdated. It’s a very boring movie only one time watchable.
Rating 2/5 ⭐. ALIA SO AVERAGE, RANBBIR SHINES. SUCKS#BrahmashtraReview pic.twitter.com/RyaPXnulDz— DHAAkAD ROY (@DhaakadRoy) September 9, 2022
Dekh Raha Hai Binod kaise bakwaas cameo hai #ShahRukhKhan ka ?
Isiliye toh Kah rahe hain “Avoid Movie Save Money”
One Word Review – Pathetic 1?
Cons-
1. VFX are not great
2. Mouni Roy’s Performance
3. No Energetic Trance Type Songs#BrahmastraReview #Brahmashtra #Brahmastra pic.twitter.com/pLPCBdDSZC— बिनोद (@DekhRahaHBinod) September 8, 2022
‘ಬ್ರಹ್ಮಾಸ್ತ್ರ’ ಸಿನಿಮಾದ ಟ್ರೇಲರ್ ನೋಡಿದವರಿಗೆ ಗ್ರಾಫಿಕ್ಸ್ ಬಗ್ಗೆ ಅನುಮಾನ ಮೂಡಿತ್ತು. ಗ್ರಾಫಿಕ್ಸ್ ಉತ್ತಮವಾಗಿಲ್ಲ ಎಂಬ ಮಾತುಗಳು ಕೇಳಿ ಬಂದವು. ಅದು ನಿಜವಾಗಿದೆ. ಸಿನಿಮಾ ನೋಡಿದ ಅನೇಕರಿಗೆ ಗ್ರಾಫಿಕ್ಸ್ ಇಷ್ಟ ಆಗಲೇ ಇಲ್ಲ. ‘ಬ್ರಹ್ಮಾಸ್ತ್ರ’ ಬರೋಬ್ಬರಿ 410 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧಗೊಂಡಿದೆ. ಬಜೆಟ್ಗೆ ಹೋಲಿಕೆ ಮಾಡಿದರೆ ಸಿನಿಮಾದ ಗ್ರಾಫಿಕ್ಸ್ ಕಳಪೆಯಾಗೇ ಇದೆ ಎಂದು ಕೆಲವರು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ‘ಇದು ಎಕ್ಸ್ಟ್ರಾ ಬಜೆಟ್ನ ನಾಗಿಣಿ ಧಾರಾವಾಹಿ’ ಎಂದು ಕೆಲವರು ಟೀಕೆ ಮಾಡಿದ್ದಾರೆ.
#Brahmashtra looks like Naagin serial with extra budget #BrahmastraMovie #BrahmashtraReview https://t.co/Q1jfwOUQUv
— Ro Jo (@RoJosh) September 9, 2022
ಇನ್ನೂ ಕೆಲವರಿಗೆ ಸಿನಿಮಾ ಇಷ್ಟವಾಗಿದೆ. ‘ಇದು ನಿಜಕ್ಕೂ ಒಂದೊಳ್ಳೆಯ ವಿಶ್ಯುವಲ್ ಟ್ರೀಟ್. ನಿರ್ದೇಶಕ ಅಯಾನ್ ಮುಖರ್ಜಿ ಅವರ ಆಲೋಚನೆ ನಿಜಕ್ಕೂ ಗ್ರೇಟ್. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಲಿದೆ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ.
Done #Brahmashtra
“A Visual Wonder Treat”
Each & every scene is just awesome, #AyanMukerji vision & dreaming become strong & successful ? & it will create wonders at box office, forgot the boycott gangPerfs wise all did their best his/her own ways & yes #ShahRukhKhan? ? pic.twitter.com/arwtDXoo1v
— Md Hussain S ?? (@MdHusanyS) September 9, 2022
ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್ನಲ್ಲಿ ‘ಬ್ರಹ್ಮಾಸ್ತ್ರ’ ಕಮಾಲ್; ಆದರೆ, ‘ಕೆಜಿಎಫ್ 2’ ಸಮೀಪವೂ ಬರಲಿಲ್ಲ ರಣಬೀರ್ ಸಿನಿಮಾ ಕಲೆಕ್ಷನ್
ಕೆಲವರು ಆಲಿಯಾ ಭಟ್ ನಟನೆಯನ್ನು ಕೊಂಡಾಡಿದ್ದಾರೆ. ಅವರು ಒಳ್ಳೆಯ ನಟನೆ ತೋರಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ರಣಬೀರ್ ಕಪೂರ್, ಮೌನಿ ರಾಯ್ ಮೊದಲಾದವರ ಪಾತ್ರದ ಬಗ್ಗೆಯೂ ಮೆಚ್ಚುಗೆ ಕೇಳಿ ಬಂದಿದೆ.