‘ನಿದ್ದೆ ಬಂತು’; ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್

Guntur Kaaram Twitter Review: ಕೊನೆಯ ಕ್ಷಣದವರೆಗೂ ಸಿನಿಮಾ ಕೆಲಸಗಳು ನಡೆಯುತ್ತಲೇ ಇದ್ದವು. ಅಂದುಕೊಂಡ ರೀತಿಯಲ್ಲಿ ಜನರು ಪ್ರತಿಕ್ರಿಯೆ ನೀಡುತ್ತಿಲ್ಲ. ಅನೇಕರು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ.

‘ನಿದ್ದೆ ಬಂತು’; ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ನೋಡಿ ವಿಮರ್ಶೆ ತಿಳಿಸಿದ ಫ್ಯಾನ್ಸ್
ಮಹೇಶ್ ಬಾಬು-ಶ್ರೀಲೀಲಾ

Updated on: Jan 12, 2024 | 11:25 AM

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ (Guntur Kaaram) ಇಂದು (ಜನವರಿ 12) ರಿಲೀಸ್ ಆಗಿದೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕರು ಟ್ವಿಟರ್ ಮೂಲಕ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಅನೇಕರಿಗೆ ಈ ಚಿತ್ರ ಇಷ್ಟ ಆಗಿಲ್ಲ. ಕೆಲವರಿಗೆ ಸಿನಿಮಾ ನೋಡಿ ನಿದ್ದೆ ಬಂದಿದೆ. ಈ ಬಗ್ಗೆ ಓಪನ್ ಆಗಿ ಹೇಳಿಕೊಂಡಿದ್ದಾರೆ. ಈ ಚಿತ್ರದಿಂದ ಮಹೇಶ್ ಬಾಬು ಸೋಲು ಕಾಣುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೆ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿತ್ತು. ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿತ್ತು. ಕೊನೆಯ ಕ್ಷಣದವರೆಗೂ ಸಿನಿಮಾ ಕೆಲಸಗಳು ನಡೆಯುತ್ತಲೇ ಇದ್ದವು. ಅಂದುಕೊಂಡ ರೀತಿಯಲ್ಲಿ ಜನರು ಪ್ರತಿಕ್ರಿಯೆ ನೀಡುತ್ತಿಲ್ಲ. ಅನೇಕರು ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ನೀಡಿದ್ದಾರೆ.

‘ಮಹೇಶ್​ ಬಾಬುಗಾಗಿ ಮಾತ್ರ ನೋಡಬೇಕಾದ ಸಿನಿಮಾ ಗುಂಟೂರು ಖಾರಂ. ಅವರ ಕರಿಯರ್​ನ ಬೆಸ್ಟ್ ಪರ್ಫಾರ್ಮೆನ್ಸ್ ಇದು. ತ್ರಿವಿಕ್ರಂ ಮ್ಯಾಜಿಕ್ ಮಿಸ್ ಆಗಿದೆ. ಥಮನ್ ಅವರ ಬಿಜಿಎಂ ಮ್ಯಾಜಿಕ್ ಮಾಡಿಲ್ಲ’ ಎಂದು ಅಭಿಮಾನಿ ಓರ್ವ ಬರೆದುಕೊಂಡಿದ್ದಾನೆ. ‘ಇಡೀ ಗುಂಪನ್ನು ಸೈಲೆಂಟ್ ಮಾಡುವ ತಾಕತ್ತು ಚಿತ್ರಕ್ಕಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಅದೇ ಹಳೆಯ ಕಥೆ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಗೆದ್ದ ಮಹೇಶ್ ಬಾಬು ಸಿನಿಮಾ, ಗಳಿಸಿರುವುದೆಷ್ಟು?

ಮಹೇಶ್ ಬಾಬು ಅವರಿಗೆ ಜೊತೆಯಾಗಿ ಕನ್ನಡದ ಶ್ರೀಲೀಲಾ ನಟಿಸಿದ್ದಾರೆ. ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣ, ಪ್ರಕಾಶ್ ರಾಜ್ ಮೊದಲಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅದು ಹುಸಿ ಆಗಿದೆ. ಮೊದಲ ದಿನ ಈ ಚಿತ್ರ ಗಳಿಕೆ ಎಷ್ಟಾಗಲಿದೆ ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ