Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್​ ಮಿಲ್ಲರ್​’ ಆಶಯ?

ಸಿನಿಮಾದಿಂದ ಸಿನಿಮಾಗೆ ಡಿಫರೆಂಟ್​ ಪಾತ್ರಗಳನ್ನು ನಿಭಾಯಿಸುವ ಮೂಲಕ ಧನುಷ್​​ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲೂ ಅವರು ಅಂಥದ್ದೇ ಒಂದು ಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಶಿವರಾಜ್​ಕುಮಾರ್​ ಕಾಣಿಸಿಕೊಂಡಿದ್ದಾರೆ. ‘ಕ್ಯಾಪ್ಟನ್​ ಮಿಲ್ಲರ್​’ ವಿಮರ್ಶೆ ಇಲ್ಲಿದೆ..

Captain Miller Review: ಮದ್ದು-ಗುಂಡುಗಳ ಸದ್ದಿನಲ್ಲಿ ಮಸುಕಾಯ್ತಾ ‘ಕ್ಯಾಪ್ಟನ್​ ಮಿಲ್ಲರ್​’ ಆಶಯ?
ಧನುಷ್​, ಶಿವರಾಜ್​ಕುಮಾರ್​
Follow us
ಮದನ್​ ಕುಮಾರ್​
|

Updated on: Jan 12, 2024 | 4:27 PM

ಚಿತ್ರ: ಕ್ಯಾಪ್ಟನ್​ ಮಿಲ್ಲರ್​. ನಿರ್ಮಾಣ: ಸತ್ಯ ಜ್ಯೋತಿ ಫಿಲ್ಮ್ಸ್​. ನಿರ್ದೇಶನ: ಅರುಣ್​ ಮಾದೇಶ್ವರನ್​. ಪಾತ್ರವರ್ಗ: ಧನುಷ್​​, ಶಿವರಾಜ್​ಕುಮಾರ್​, ಪ್ರಿಯಾಂಕಾ ಅರುಳ್​ ಮೋಹನ್​, ಜಾನ್​ ಕೊಕೆನ್​ ಮುಂತಾದವರು. ಸ್ಟಾರ್​: 2.5/5

ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ಅನೇಕ ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ ‘ಕ್ಯಾಪ್ಟನ್​ ಮಿಲ್ಲರ್​’ (Captain Miller) ಸಿನಿಮಾ ಬಾರಿ ನಿರೀಕ್ಷೆ ಮೂಡಿಸಿತ್ತು. ಈ ಚಿತ್ರದಲ್ಲಿ ಧನುಷ್​​ (Dhanush) ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕನ್ನಡದ ಸ್ಟಾರ್​ ನಟ ಶಿವರಾಜ್​ಕುಮಾರ್​ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿರುವುದರಿಂದ ಕರ್ನಾಟಕದಲ್ಲೂ ಈ ಸಿನಿಮಾ ಹೈಪ್​ ಪಡೆದುಕೊಂಡಿದೆ. ಸ್ವಾತಂತ್ರ್ಯಪೂರ್ವ ಕಾಲದ ಕಥೆಯನ್ನು ಈ ಸಿನಿಮಾ ಹೊಂದಿದೆ. ಪ್ರೇಕ್ಷಕರು ನಿರೀಕ್ಷಿಸಿದ ರೀತಿಯಲ್ಲೇ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾ ಮೂಡಿಬಂದಿದೆಯಾ ಎಂಬುದನ್ನು ತಿಳಿಯಲು ಈ ವಿಮರ್ಶೆ (Captain Miller Movie Review) ಓದಿ..

ಧನುಷ್​​​ ಪಾತ್ರ ಹೇಗಿದೆ?

ಸಿನಿಮಾದಿಂದ ಸಿನಿಮಾಗೆ ಡಿಫರೆಂಟ್​ ಪಾತ್ರಗಳನ್ನು ನಿಭಾಯಿಸುವ ಮೂಲಕ ಧನುಷ್​​​ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲೂ ಅವರು ಅಂಥದ್ದೇ ಒಂದು ಭಿನ್ನವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶೋಷಿತ ವರ್ಗದ ಯುವಕನಾಗಿ ಅವರು ಕಾಣಿಸಿಕೊಂಡಿದ್ದಾರೆ. ಆ ಪಾತ್ರಕ್ಕೆ ಬೇರೆ ಬೇರೆ ಶೇಡ್​ ಇದೆ. ಸೈನಿಕನಾಗಿ ಅವರು ಗಮನ ಸೆಳೆಯುತ್ತಾರೆ. ನಂತರ ಆಳುವವರ ವಿರುದ್ಧ ತಿರುಗಿಬಿದ್ದ ತೀವ್ರಗಾಮಿಯಾಗಿಯೂ ಅವರು ಅಬ್ಬರಿಸುತ್ತಾರೆ.

ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದ ಕಥೆ:

ಒಂದೆಡೆ ಬ್ರಿಟಿಷರ ವಿರುದ್ಧ, ಇನ್ನೊಂದೆಡೆ ನಮ್ಮದೇ ದೇಶದ ಮೇಲ್ವರ್ಗದವರ ವಿರುದ್ಧ ಬಂಡಾಯ ಏಳುವ ಈಸಾ ಅಲಿಯಾಸ್​ ಕ್ಯಾಪ್ಟನ್​ ಮಿಲ್ಲರ್​ ಎಂಬ ವೀರನ ಕಥೆ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿದೆ. ಸಾಮಾನ್ಯ ಹಳ್ಳಿಯ ಯುವಕನಾಗಿದ್ದವನು ಬ್ರಿಟಿಷ್​ ಸರ್ಕಾರದ ಸೈನ್ಯಕ್ಕೆ ಸೇರಿ ಕ್ಯಾಪ್ಟನ್​ ಆಗುವ ಕನಸು ಕಾಣುತ್ತಾನೆ. ಆದರೆ ಸೈನ್ಯಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಆತನ ನಂಬಿಕೆಗಳಿಗೆ ಪೆಟ್ಟು ಬೀಳುತ್ತದೆ. ಆಗ ಆತ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಳಿಯುತ್ತಾನೆ. ಆಗ ಅವನಿಗೆ ಎದುರಾಗುವ ಸವಾಲುಗಳು ಹಲವು. ಅದನ್ನೆಲ್ಲ ಆತ ಹೇಗೆ ಪರಿಹರಿಸುತ್ತಾನೆ? ಅಂತಿಮವಾಗಿ ಕ್ಯಾಪ್ಟನ್​ ಮಿಲ್ಲರ್​ಗೆ ಜಯ ಸಿಗುತ್ತಾ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಆಹಾ ಎಂಬಂತಿರುವ ಆರಂಭ:

‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಕಥೆ ತೆರೆದುಕೊಳ್ಳುವ ರೀತಿ ಚೆನ್ನಾಗಿದೆ. ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮತ್ತು ಧನುಷ್​​ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಳ್ಳುವ ದೃಶ್ಯ ಗಮನಾರ್ಹವಾಗಿದೆ. ಅಣ್ಣ-ತಮ್ಮನ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡುತ್ತಿರುವ ಅಣ್ಣ ಹಾಗೂ ಬ್ರಿಟಿಷರ ಆರ್ಮಿ ಸೇರಲು ಹೊರಟಿರುವ ತಮ್ಮನ ನಡುವೆ ಬರುವ ಸಂಭಾಷಣೆಗಳಿಗೆ ಒಂದು ತೂಕವಿವೆ. ಅದರ ನಡುವೆ ಸಣ್ಣದೊಂದು ಪ್ರೇಮಕತೆಗೂ ಜಾಗವಿದೆ. ಆದರೆ ಸಿನಿಮಾ ಮುಂದುವರಿದಂತೆಲ್ಲ ಆ ತೀವ್ರತೆ ಮಾಯವಾಗಿ ಹೊಡಿಬಡಿ ದೃಶ್ಯಗಳೇ ಆವರಿಸಿಕೊಂಡಿವೆ.

ಇದನ್ನೂ ಓದಿ: Kaatera Movie Review: ಸಂಘರ್ಷದ ಕಥೆಯೊಂದಿಗೆ ಸಮಾಜಕ್ಕೆ ಸಂದೇಶ ನೀಡುವ ‘ಕಾಟೇರ’

ಆ್ಯಕ್ಷನ್​ ಅಬ್ಬರ:

ಧನುಷ್​​ ಅವರು ಕ್ಲಾಸ್​ ಪಾತ್ರಗಳನ್ನು ಎಷ್ಟು ಚೆನ್ನಾಗಿ ನಿಭಾಯಿಸುತ್ತಾರೋ ಮಾಸ್​ ಪಾತ್ರಗಳನ್ನು ಕೂಡ ಅಷ್ಟೇ ಸಮರ್ಥವಾಗಿ ಮಾಡುತ್ತಾರೆ. ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರದಲ್ಲಿ ಈ ಎರಡೂ ಶೇಡ್​ ಇದೆ. ಆದರೆ ಮಾಸ್​ ಅವತಾರವೇ ಹೆಚ್ಚಿದೆ. ಕಥೆಯಲ್ಲಿ ಅಗತ್ಯಕ್ಕೂ ಮೀರಿದಷ್ಟು ಸಾಹಸ ದೃಶ್ಯಗಳು ಇವೆ. ನಿಜವಾದ ಆಶಯವನ್ನೇ ಮಸುಕು ಮಾಡುವ ರೀತಿಯಲ್ಲಿ ಫೈಟಿಂಗ್​ ಸೀನ್​ಗಳು ಅಬ್ಬರಿಸಿವೆ. ಒಟ್ಟಾರೆ ಸಿನಿಮಾದಲ್ಲಿ ಮದ್ದು-ಗುಂಡುಗಳ ಶಬ್ದವೇ ಹೆಚ್ಚಾಯಿತೇನೋ ಎನಿಸುತ್ತದೆ. ಕಥೆ ಕೂಡ ಎಲ್ಲಿಂದ ಮತ್ತಿನ್ನೆಲ್ಲಿಗೋ ಸಾಗಿದಂತೆ ಭಾಸವಾಗುತ್ತದೆ.

ಕೇವಲ ಅತಿಥಿಯಾದ ಶಿವಣ್ಣ:

ನಟ ಶಿವರಾಜ್​ಕುಮಾರ್​ ಅವರಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿದೆ. ಪರಭಾಷೆಯ ಚಿತ್ರದಲ್ಲಿ ಅವರಿಗೆ ಒಂದು ಪಾತ್ರ ಇರುತ್ತದೆ ಎಂದರೆ ಅಂಥ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ. ಆದರೆ ಆ ಪಾತ್ರಕ್ಕೆ ನಿರೀಕ್ಷಿತ ಮಟ್ಟದ ತೂಕ ಇಲ್ಲದಿದ್ದರೆ ಬೇಸರ ಆಗುವುದು ಸಹಜ. ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲೂ ಹಾಗೆಯೇ ಆಗಿದೆ. ಎರಡು ಮೂರು ದೃಶ್ಯಗಳಲ್ಲಿ ಮಾತ್ರ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಸವಕಲು ಸೂತ್ರದ ರೀತಿ, ಕ್ಲೈಮ್ಯಾಕ್ಸ್​ಗೂ ಮುಂಚೆ ಹೀರೋ ಸಂಕಷ್ಟದಲ್ಲಿ ಇದ್ದಾಗ ಆಪದ್ಭಾಂದವನಂತೆ ಬಂದು ಕಾಪಾಡುತ್ತಾರೆ. ಕ್ಲೈಮ್ಯಾಕ್ಸ್​ ಹೊರತುಪಡಿಸಿ ಇನ್ನುಳಿದ ದೃಶ್ಯಗಳಲ್ಲಿ ಶಿವಣ್ಣನ ಪಾತ್ರ ಆಟಕ್ಕುಂಟು ಲೆಕ್ಕಕಿಲ್ಲ ಎಂಬಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು