ಮಣಿರತ್ನಂ (Mani Rathnam) ನಿರ್ದೇಶಿಸಿರುವ ಬಹುತಾರಾಗಣದ ಭಾರಿ ಬಜೆಟ್ ಪ್ಯಾನ್ ಇಂಡಿಯಾ (Pan India) ಸಿನಿಮಾ ಪೊನ್ನಿಯಿನ್ ಸೆಲ್ವನ್ 2 (Ponniyin Selvan 2) ಇಂದು (ಏಪ್ರಿಲ್ 28) ಬಿಡುಗಡೆ ಆಗಿದೆ. ಪೊನ್ನಿಯಿನ್ ಸೆಲ್ವನ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದ್ದು ಸಿನಿಮಾದಲ್ಲಿ ವಿಕ್ರಂ (Chiyaan Vikram), ಐಶ್ವರ್ಯಾ ರೈ (Aishwarya Rai), ಕಾರ್ತಿ, ತ್ರಿಷಾ, ಜಯಂ ರವಿ, ಐಶ್ವರ್ಯ ಲಕ್ಷಮಿ, ಶೋಭಿತಾ ಧುಲಿಪಾಲ, ನಾಸರ್, ಪ್ರಭು ಇನ್ನೂ ಹಲವು ತಾರಾ ನಟ-ನಟಿಯರು ನಟಿಸಿದ್ದಾರೆ. ಏ.ಆರ್.ರೆಹಮಾನ್ ಸಂಗೀತ ನೀಡಿರುವ ಈ ಸಿನಿಮಾದ ಮೊದಲ ಶೋ ವೀಕ್ಷಿಸಿರುವ ಹಲವಾರು ಮಂದಿ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Ponniyin Selvan Part-2
Movie Rating ⭐- 4.9/5No Spoilers, so don’t worry about that.
One of the best Indian movie I have seen in my life. Period.
The way the actors are trying to act is sooo good. When you get sooo many actors together, the greatest problem a director could… pic.twitter.com/KskjYUrAF2— Nithin George Joseph (@inferno_speaks) April 27, 2023
ನಿತಿನ್ ಜಾರ್ಜ್ ಜೋಸೆಫ್ ಹೆಸರಿನ ವಿದೇಶಿಗರೊಬ್ಬರು ಮೊದಲ ದಿನವೇ ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ. ಇಷ್ಟು ಅದ್ಭುತವಾದ ಸಿನಿಮಾವನ್ನು ಇತ್ತೀಚಿನ ದಿನಗಳಲ್ಲಿ ನಾನು ನೋಡಿಯೇ ಇಲ್ಲ. ಎಲ್ಲ ನಟರೂ ಒಬ್ಬರಿಗಿಂತಲೂ ಒಬ್ಬರು ಅದ್ಭುತವಾಗಿ ನಟಿಸಿದ್ದಾರೆ. ಇಷ್ಟು ಉತ್ತಮ, ಸ್ಟಾರ್ ನಟರನ್ನು ಇರಿಸಿಕೊಂಡು ಎಲ್ಲರಿಗೂ ಸ್ಪೇಸ್ ನೀಡುವುದು ನಿರ್ದೇಶಕರಿಗೆ ಸವಾಲಾಗಿತ್ತು, ಅದನ್ನು ಅದ್ಭುತವಾಗಿ ಮಣಿರತ್ನಂ ನಿಭಾಯಿಸಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಸಿನಿಮಾಕ್ಕೆ ಕಳಶವಿಟ್ಟಿದೆ ಎಂದಿದ್ದಾರೆ.
”ಇದೊಂದು ಅದ್ಭುತವಾದ ಸಿನಿಮಾ ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ಜಯಂ ರವಿ ಪಾತ್ರಗಳು ಅತ್ಯದ್ಭುತವಾಗಿವೆ. ಸಿನಿಮಾದ ಕೆಲವು ದೃಶ್ಯಗಳು ಅತ್ಯದ್ಬುತವಾಗಿವೆ. ಎ.ಆರ್.ರೆಹಮಾನ್ ಸಂಗೀತ ಇಲ್ಲದಿದ್ದರೆ ಆ ದೃಶ್ಯಗಳು ಎಫೆಕ್ಟ್ ಕಳೆದುಕೊಳ್ಳುತ್ತಿದ್ದವೇನೋ” ಎಂದು ಹೊಗಳಿದ್ದಾರೆ ಸತ್ಯ ಹೆಸರಿನ ಸಿನಿಮಾ ಪ್ರೇಮಿ.
Ponniyin Selvan Part 2 – There isn’t any cinematic highs or intriguing drama, yet it engages us throughout and ends up as a satisfying watch. The magic of literature, perhaps. AR Rahman’s score again proves why he is THE GREATEST OF ALL-TIME. Climax la he did a sambhavam ? pic.twitter.com/nB9N4t80Eb
— Chaitanya. (@illusionistChay) April 28, 2023
ಪೊನ್ನಿಯಿನ್ ಸೆಲ್ವನ್ 2 ನಲ್ಲಿ ಅತಿಯಾದ ಸಿನಿಮೀಯ ಅಂಶಗಳಾಗಲಿ ಥ್ರಿಲ್ಲಿಂಗ್ ಡ್ರಾಮಾ ಆಗಲಿ ಇಲ್ಲ. ಆದರೂ ಈ ಸಿನಿಮಾ ನಮ್ಮನ್ನು ಹಿಡಿದಿಡುತ್ತದೆ. ಅದ್ಭುತವಾದ ಸಿನಿಮಾ ಅನುಭವ ನೀಡುತ್ತದೆ. ಸಿನಿಮಾದ ಸಾಹಿತ್ಯದ ಮ್ಯಾಜಿಕಲ್, ಬಹುಶಃ ಎಆರ್ ರೆಹಮಾನ್ ಅವರ ಸಂಗೀತ ಈವರೆಗಿನ ಅವರ ವೃತ್ತಿಜೀವನದ ಎನಿಸುತ್ತದೆ, ಅವರೇಕೆ ಸಾರ್ವಕಾಲಿಕ ಶ್ರೇಷ್ಠ ಸಂಗೀತಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕ್ಲೈಮ್ಯಾಕ್ಸ್ ಅಂತೂ ಅತ್ಯದ್ಭುತ ಎಂದು ವಿಶ್ಲೇಷಣೆ ಮಾಡಿದ್ದಾರೆ ಚೈತನ್ಯ ಎಂಬ ಟ್ವಿಟ್ಟರ್ ಬಳಕೆದಾರರು.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಐಕಾನಿಕ್ ಸಿನಿಮಾದ ಅವಕಾಶ ಕಳೆದುಕೊಂಡ ವಿಕ್ರಂ
ಕೆಲವು ಅದ್ಭುತವಾದ ದೃಶ್ಯಗಳನ್ನು ಪೊನ್ನಿಯಿನ್ ಸೆಲ್ವನ್ 2 ಸಿನಿಮಾದಲ್ಲಿ ಮಣಿರತ್ನಂ ಕಟ್ಟಿಕೊಟ್ಟಿದ್ದಾರೆ. ಮೂವರು ಅಣ್ಣ-ತಮ್ಮಂದಿರುವ ಒಟ್ಟಾಗುವ ದೃಶ್ಯ ನನಗೆ ಬಹಳ ಹಿಡಿಸಿತು. ಈ ರೀತಿಯ ಹಲವು ದೃಶ್ಯಗಳು ಪಿಎಸ್2 ಸಿನಿಮಾದಲ್ಲಿವೆ. ಈ ರೀತಿಯ ದೃಶ್ಯಗಳೇ ಸಿನಿಮಾವನ್ನು ಎಂಗೇಜಿಂಗ್ ಆಗಿಸಿದೆ, ಭಾವುನಾತ್ಮಕವಾಗಿಸಿದೆ ಜೊತೆಗೆ ಥ್ರಿಲ್ಲಿಂಗ್ ಸಹ ಆಗಿಸಿದೆ. ಬಹುಕಾಲ ಈ ಸಿನಿಮಾ ನೆನಪುಳಿಯಲಿದೆ ಎಂದಿದ್ದಾರೆ ರೌನಕ್ ಮಂಗೊತ್ತಿಲ್.
ಹಲವರು ಪೊನ್ನಿಯಿನ್ ಸೆಲ್ವನ್ 2 ಇಷ್ಟವಾಗಿದೆಯೆಂದು ಪೋಸ್ಟ್ಗಳನ್ನು ಹಾಕಿದ್ದಾರೆ. ಕೆಲವರು 5ಕ್ಕೆ ಐದು ಸ್ಟಾರ್ಗಳನ್ನು ಸಹ ನೀಡಿದ್ದಾರೆ. ಆದರೆ ಅಲ್ಲೊಬ್ಬರು ಇಲ್ಲೊಬ್ಬರು ಸಿನಿಮಾದ ಬಗ್ಗೆ ಋಣಾತ್ಮಕ ವಿಮರ್ಶೆಗಳನ್ನೂ ಬರೆದಿದ್ದಾರೆ. ಸಿನಿಮಾ ಬೋರಿಂಗ್ ಆಗಿದೆಯೆಂದು, ಥ್ರಿಲ್ಲಿಂಗ್ ಅಂಶಗಳು ಇಲ್ಲವೆಂದು, ಸಂಭಾಷಣೆ ತೀರಾ ಹೆಚ್ಚಾಯ್ತೆಂದು ಸಹ ಹೇಳಿದ್ದಾರೆ, ಆದರೆ ಅಂಥಹವರ ಸಂಖ್ಯೆ ಕಡಿಮೆ. ಒಟ್ಟಾರೆಯಾಗಿ ಪೊನ್ನಿಯಿನ್ ಸೆಲ್ವನ್ 2 ನೆಟ್ಟಿಗರಿಗೆ ಇಷ್ಟವಾಗಿದೆಯೆಂದೇ ಹೇಳಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ