ಕ್ಷುಲ್ಲಕ ಕಾರಣಕ್ಕೆ ಐಕಾನಿಕ್ ಸಿನಿಮಾದ ಅವಕಾಶ ಕಳೆದುಕೊಂಡ ವಿಕ್ರಂ

ಮಣಿರತ್ನಂರ ಬಾಂಬೆ ಸಿನಿಮಾ ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ನಾಯಕನ ಪಾತ್ರ ಮೊದಲು ದೊರೆತಿದ್ದು ವಿಕ್ರಂಗೆ ಆದರೆ ಆ ಅವಕಾಶ ನಿರಾಕರಿಸಿದ್ದರು ವಿಕ್ರಂ.

ಕ್ಷುಲ್ಲಕ ಕಾರಣಕ್ಕೆ ಐಕಾನಿಕ್ ಸಿನಿಮಾದ ಅವಕಾಶ ಕಳೆದುಕೊಂಡ ವಿಕ್ರಂ
ಚಿಯಾನ್ ವಿಕ್ರಂ
Follow us
ಮಂಜುನಾಥ ಸಿ.
|

Updated on: Apr 28, 2023 | 9:00 AM

ಚಿಯಾನ್ ವಿಕ್ರಂ (Chiyan Vikram) ಭಾರತದ ಅತ್ಯದ್ಭುತ ನಟರಲ್ಲಿ ಒಬ್ಬರು. ಅವರ ನಟನೆಗೆ ಅವರೇ ಸಾಟಿ. ಆಮಿರ್ ಖಾನ್ (Aamir Khan)​ಗಿಂತಲೂ ಹೆಚ್ಚು ಭಿನ್ನವಾದ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಿಕ್ರಂ, ಭಾರತದ ಇನ್ಯಾವುದೇ ಸ್ಟಾರ್ ನಟರು ವಹಿಸದಷ್ಟು ಶ್ರಮವನ್ನು ತಮ್ಮ ಪಾತ್ರಗಳಿಗಾಗಿ ವಹಿಸುತ್ತಾರೆ. ಬಾಡಿ ಟ್ರಾನ್ಸ್​ಫಾರ್ಮೇಷನ್​ನಿಂದ ಹಿಡಿದು ಯಾವುದೇ ರೀತಿಯ ಸಿದ್ಧತೆಯನ್ನು ಶ್ರದ್ಧೆಯಿಂದ ಮಾಡುವ ಬೆರಳೆಣಿಕೆಯ ಸ್ಟಾರ್ ನಟರಲ್ಲಿ ವಿಕ್ರಂ ಅಗ್ರಗಣ್ಯರು. ತಮ್ಮ ಪಾತ್ರಕ್ಕೆ ಬಹಳ ನಿಷ್ಠರು ಸಹ. ಆದರೆ ಇದೇ ಕಾರಣದಿಂದಾಗಿ ಭಾರತದ ಚಿತ್ರ ಇತಿಹಾಸದಲ್ಲಿಯೇ ಐಕಾನಿಕ್ ಎನಿಸಿಕೊಂಡಿರುವ ಸಿನಿಮಾ ಒಂದರ ಅವಕಾಶವನ್ನು ವಿಕ್ರಂ ಕಳೆದುಕೊಂಡಿದ್ದರು.

ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ನಿರ್ದೇಶಿಸಿರುವ ಹಲವು ಸಿನಿಮಾಗಳು ಐಕಾನಿಕ್ ಎನಿಸಿಕೊಂಡಿವೆ. ರೋಜಾ, ದಿಲ್ ಸೇ, ನಾಯಗನ್, ಗೀತಾಂಜಲಿ, ಕನ್ನತಿಲ್ ಮುತ್ತಮಿತ್ತಾಲ್, ಅಲೈಪಾಯುತೆ ಇದೇ ಸಾಲಿಗೆ ಸೇರುತ್ತದೆ ಅವರದ್ದೇ ನಿರ್ದೇಶನದ ಬಾಂಬೆ ಸಿನಿಮಾ. ಈ ಸಿನಿಮಾದ ಹಾಡುಗಳಿಗಂತೂ ಇನ್ನೂ ನೂರಾರು ವರ್ಷ ಸಾವಿಲ್ಲ. ಈ ಸಿನಿಮಾದ ನಾಯಕನ ಪಾತ್ರದಲ್ಲಿ ಅರವಿಂದ ಸ್ವಾಮಿ ನಟಿಸಿದ್ದರು, ಅಸಲಿಗೆ ನಾಯಕನ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ನಟ ವಿಕ್ರಂ.

ಹೌದು, ಬಾಂಬೆ ಸಿನಿಮಾದಲ್ಲಿ ಅರವಿಂದ ಸ್ವಾಮಿ ನಟಿಸಿರುವ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದಿದ್ದು ಚಿಯಾನ್ ವಿಕ್ರಂ. ಆಗಷ್ಟೆ ಸಿನಿಮಾ ಬದುಕು ಆರಂಭಿಸಿದ್ದ ವಿಕ್ರಂಗೆ ಅದಾಗಲೇ ದೊಡ್ಡ ನಿರ್ದೇಶಕ ಎನಿಸಿಕೊಂಡಿದ್ದ ಮಣಿರತ್ನಂ ತಮ್ಮ ಸಿನಿಮಾದಲ್ಲಿ ನಾಯಕನ ಪಾತ್ರ ನೀಡಿದರು. ಆದರೆ ಆ ಪಾತ್ರವನ್ನು ವಿಕ್ರಂಗೆ ಒಪ್ಪಿಕೊಳ್ಳಲಾಗಲಿಲ್ಲ, ಕಾರಣ ಕ್ಷುಲ್ಲಕ ಎನಿಸಿದರೂ ಅದು ವಿಕ್ರಂರ ಶ್ರದ್ಧೆಯನ್ನು ತೋರಿಸುತ್ತದೆ.

1990 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ವಿಕ್ರಂ ಸತತವಾಗಿ ಸೋಲುಗಳನ್ನೇ ಕಂಡಿದ್ದರು. ಯಾವ ಮಟ್ಟಿಗೆಂದರೆ ಅವರು ನಾಯಕನಾಗಿ ನಟಿಸಿದ್ದ ಮೊದಲ ಮೂರೂ ಸಿನಿಮಾಗಳು ಅಟ್ಟರ್ ಫ್ಲಾಪ್ ಅದಾದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹೋಗಿ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದರು. ತಮಿಳಿನಲ್ಲಿ ಅವಕಾಶಗಳು ನಿಂತಿದ್ದವು ಆ ಸಮಯದಲ್ಲಿ ವಿಕ್ರಂರ ಪ್ರತಿಭೆ ಗುರುತಿಸಿ ಮಣಿರತ್ನಂ ಬಾಂಬೆ ಸಿನಿಮಾದ ಅವಕಾಶ ನೀಡಿದರು. ಆದರೆ ಅವರು ಹಾಕಿದ್ದು ಒಂದೇ ಷರತ್ತು, ಗಡ್ಡ ತೆಗೆಯಬೇಕೆಂಬುದು. ಆದರೆ ಅದಕ್ಕೆ ಒಪ್ಪಲಿಲ್ಲ ವಿಕ್ರಂ!

ತಮಿಳಿನಲ್ಲಿ ಸತತವಾಗಿ ಸೋಲು ಕಂಡ ಬಳಿಕ ಮಲಯಾಳಂ ಹಾಗೂ ತೆಲುಗು ಸಿನಿಮಾಗಳಲ್ಲಿ ಪೋಷಕ ನಟ, ವಿಲನ್ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ್ದರು ವಿಕ್ರಂ. ತಮಿಳಿಗೆ ನಾಯಕ ನಟನಾಗಿ ಮರಳುವ ತುಡಿತದಲ್ಲಿ ಪುದಿಯ ಮನ್ನರಗಲ್ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದರು. ಆ ಸಿನಿಮಾಕ್ಕಾಗಿ ಉದ್ದ ಕೂದಲು, ಗಡ್ಡ ಇರುವುದು ಅವಶ್ಯಕವಾಗಿತ್ತು, ಹಾಗಾಗಿ ಮಣಿರತ್ನಂರ ಬಾಂಬೆ ಸಿನಿಮಾಕ್ಕೆ ಗಡ್ಡ ತೆಗೆಯಲು ವಿಕ್ರಂ ನಿರಾಕರಿಸಿದರು. ಇದೇ ಕಾರಣಕ್ಕೆ ವಿಕ್ರಂ ಅವರನ್ನು ಬಾಂಬೆ ಸಿನಿಮಾಕ್ಕೆ ತೆಗೆದುಕೊಳ್ಳದೆ ಸುಂದರ ವದನ ಅರವಿಂದ ಸ್ವಾಮಿಗೆ ಅವಕಾಶ ಕೊಟ್ಟರು ಮಣಿರತ್ನಂ ಆ ನಂತರ ನಡೆದಿದ್ದು ಇತಿಹಾಸ.

ಬಾಂಬೆ ಸಿನಿಮಾ ಅವಕಾಶ ನಿರಾಕರಿಸಿದ್ದಕ್ಕೆ ವಿಕ್ರಂ ಬಹಳ ಕಷ್ಟಪಡಬೇಕಾಯಿತು. ಪುದಿಯ ಮನ್ನರಗಲ್ ಸಿನಿಮಾ ಸಹ ಸೋತಿತು. ಆ ನಂತರ ಸುಮಾರು ಐದು ವರ್ಷಗಳ ಕಾಲ ವಿಕ್ರಂ ಬಹಳ ಕಷ್ಟಪಟ್ಟರು, ವಿಲನ್ ಆಗಿ ಮಾತ್ರವೇ ಅಲ್ಲದೆ ಪ್ರಭುದೇವ, ಅಜಿತ್ ಕುಮಾರ್ ಅವರುಗಳಿಗೆ ಡಬ್ಬಿಂಗ್ ಕಲಾವಿದನಾಗಿಯೂ ಕೆಲಸ ಮಾಡಿದರು. ಆದರೆ ಕೊನೆಗೂ ಅವರ ಪ್ರತಿಭೆಯೇ ಅವರ ಕೈಹಿಡಿಯಿತು. 1999 ರಲ್ಲಿ ಬಿಡುಗಡೆ ಆದ ಸೇತು ಸಿನಿಮಾ ಸೂಪರ್-ಡೂಪರ್ ಹಿಟ್ ಆಗಿ ಇಡೀ ಭಾರತವೇ ಅವರ ನಟನೆಯನ್ನು ಕೊಂಡಾಡಿತು. ವಿಕ್ರಂ ಚಿಯಾನ್ ವಿಕ್ರಂ ಆಗಿ ಬದಲಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ