ಸಖತ್ ನಿರೀಕ್ಷೆ ಮೂಡಿಸಿದ್ದ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಇಂದು (ಜುಲೈ 28) ಎಲ್ಲೆಡೆ ರಿಲೀಸ್ ಆಗಿದೆ. ಅಭಿಮಾನಿಗಳು ಮುಗಿಬಿದ್ದು ಈ ಸಿನಿಮಾವನ್ನು ನೋಡುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಟಿಕೆಟ್ ಪಡೆದ ಪ್ರೇಕ್ಷಕರ ಸಡಗರ ಜೋರಾಗಿದೆ. ಕಿಚ್ಚ ಸುದೀಪ್ (Kichcha Sudeep) ಅವರ ನಟನೆ ಬಗ್ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದ್ದೂರಿ ಮೇಕಿಂಗ್, 3ಡಿ ದೃಶ್ಯ ವೈಭವದ ಬಗ್ಗೆಯೂ ಉತ್ತಮ ಮಾತುಗಳು ಕೇಳಿಬರುತ್ತಿವೆ. ಅದಕ್ಕೂ ಮುನ್ನ ವಿದೇಶಿ ಸೆನ್ಸಾರ್ ಮಂಡಳಿ ಸದಸ್ಯ ಉಮೈರ್ ಸಂಧು ಅವರಿಂದ ಬೆಸ್ಟ್ ವಿಮರ್ಶೆ (Vikrant Rona Review) ಸಿಕ್ಕಿದೆ. ‘ವಿಕ್ರಾಂತ್ ರೋಣ’ ನೋಡಿದ ಅವರು ಭೇಷ್ ಎಂದಿದ್ದಾರೆ. ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಮುಖ್ಯ ಅಂಶವೇ ಕ್ಲೈಮ್ಯಾಕ್ಸ್ ಎಂದು ಅವರು ಹೇಳಿದ್ದಾರೆ.
ವಿದೇಶದಲ್ಲಿ ರಿಲೀಸ್ ಆಗುವ ಭಾರತದ ಬಹುತೇಕ ಸಿನಿಮಾಗಳ ಬಗ್ಗೆ ಉಮೈರ್ ಸಂಧು ಅವರು ವಿಮರ್ಶೆ ಹಂಚಿಕೊಳ್ಳುತ್ತಾರೆ. ‘ಕೆಜಿಎಫ್: ಚಾಪ್ಟರ್ 2’ ಬಳಿಕ ಕನ್ನಡ ಚಿತ್ರರಂಗದಿಂದ ಮತ್ತೊಂದು ಅದ್ಭುತ ಸಿನಿಮಾ ಬಂದಿದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ಸಂಭ್ರಮಿಸಬೇಕಾದ ಸಮಯ ಇದು. ಕನ್ನಡ ಚಿತ್ರರಂಗಕ್ಕೆ ಇದು ಅತ್ಯುತ್ತಮ ಕಾಲ ಎಂದು ಅವರು ಹೇಳಿದ್ದಾರೆ.
First Review #VikrantRona from Censor Board ! On the whole, #VikrantRona [Hindi] is a paisa vasool entertainer and rests on #AnupBhandari expert direction, Engaging Story,Breathtaking Cinematography, Action,Thrills & #Sudeep starry presence. Sure Shot HIT.
⭐⭐⭐⭐
— Umair Sandhu (@UmairSandu) July 26, 2022
#KicchaSudeep is in superb form. He is a big star down South but has a considerable following among Hindi speaking audiences. And with his massy avatar, he impresses one and all. #Sudeep look is quite dashing, his action top-class in #VikrantRona.
⭐⭐⭐⭐
— Umair Sandhu (@UmairSandu) July 26, 2022
‘ದಕ್ಷಿಣ ಭಾರತದಲ್ಲಿ ಕಿಚ್ಚ ಸುದೀಪ್ ಅವರು ಸೂಪರ್ ಸ್ಟಾರ್. ಉತ್ತರ ಭಾರತದಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಿಂದ ಅವರು ಹಿಂದಿ ಪ್ರೇಕ್ಷಕರಿಗೂ ಹೆಚ್ಚು ಇಷ್ಟ ಆಗುತ್ತಾರೆ. ಈ ಚಿತ್ರದಲ್ಲಿ ಅವರ ಸಾಹಸ ದೃಶ್ಯಗಳು ಉತ್ಕೃಷ್ಟವಾಗಿವೆ’ ಎಂದು ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ಅವರ ಮಾತುಗಳನ್ನು ಕೇಳಿದ ಬಳಿಕ ಚಿತ್ರದ ಮೇಲಿನ ಹೈಪ್ ಇನ್ನಷ್ಟು ಹೆಚ್ಚಿದೆ.
Kannada Cinema at its best in 2022 in India !!! First #KGFChapter2 & Now #VikrantRona !!
Both are MINDBLOWING FILMS !! Celebration Time for Fans.
— Umair Sandhu (@UmairSandu) July 26, 2022
‘ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ. ಅನೂಪ್ ಭಂಡಾರಿ ಅವರ ನಿರ್ದೇಶನ ಚೆನ್ನಾಗಿದೆ. ಕಥೆ, ಸಾಹಸದೃಶ್ಯ, ಛಾಯಾಗ್ರಹಣ ಎಲ್ಲವೂ ಉತ್ತಮ ಗಣಮಟ್ಟದಲ್ಲಿ ಇವೆ’ ಎಂದು ಉಮೈರ್ ಸಂಧು ಹೇಳಿದ್ದಾರೆ. ಅವರು ಹಿಂದಿ ಅವತರಣಿಕೆಯನ್ನು ನೋಡಿ ಈ ವಿಮರ್ಶೆ ತಿಳಿಸಿದ್ದಾರೆ.
Published On - 8:08 am, Thu, 28 July 22