‘ನ್ಯಾಯಯುತವಾಗಿ ಆಟವಾಡಲ್ಲ’ ಎಂದ ವಿನಯ್​ಗೆ ಅವರದೇ ಸ್ಟೈಲ್​ನಲ್ಲಿ ಪಾಠ ಕಲಿಸಿದ ಕಾರ್ತಿಕ್

|

Updated on: Nov 10, 2023 | 2:24 PM

ನೀರು ತುಂಬಿದ ಬಲೂನ್​ನ ಒಡೆಯುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ವಿನಯ್ ಅವರು ಕಾರ್ತಿಕ್​ನ ಮೊದಲು ತಳ್ಳಿದ್ದಾರೆ. ಈ ಬಗ್ಗೆ ಕೇಳಿದರೆ ‘ನಾನು ನ್ಯಾಯಯುತವಾಗಿ ಆಡುವುದಿಲ್ಲ’ ಎಂದು ಓಪನ್ ಆಗಿ ಹೇಳಿದ್ದಾರೆ.

‘ನ್ಯಾಯಯುತವಾಗಿ ಆಟವಾಡಲ್ಲ’ ಎಂದ ವಿನಯ್​ಗೆ ಅವರದೇ ಸ್ಟೈಲ್​ನಲ್ಲಿ ಪಾಠ ಕಲಿಸಿದ ಕಾರ್ತಿಕ್
ವಿನಯ್-ಕಾರ್ತಿಕ್
Follow us on

ಬಿಗ್ ಬಾಸ್​ನಲ್ಲಿ ಗುಂಪು ಕಟ್ಟಿಕೊಂಡು ಆಟ ಆಡುವಂತಿಲ್ಲ. ಆದರೆ, ಈ ಬಾರಿ ಆ ರೀತಿ ಆಗುತ್ತಿಲ್ಲ. ತುಂಬಾನೇ ಗುಂಪುಗಾರಿಕೆ ನಡೆಯುತ್ತಿದೆ. ಈಗಾಗಲೇ ಮನೆ ಎರಡು ಭಾಗವಾಗಿ ಒಡೆದು ಹೋಗಿದೆ. ಒಂದು ತಂಡ ವಿನಯ್​ನ ಮುಂದೆ ಇಟ್ಟು ಮೆರೆಸುತ್ತಿದೆ. ಮತ್ತೊಂದು ಟೀಂನಲ್ಲಿ ಎಲ್ಲರೂ ಎಲ್ಲರನ್ನೂ ಬೆಂಬಲಿಸುತ್ತಿದ್ದಾರೆ. ಕಳೆದ ವಾರ ತುಂಬಾನೇ ಕೋಪದಿಂದ ಆಡಿದ್ದ ವಿನಯ್ (Vinay Gowda) ಅವರು ಈ ವಾರ ಸ್ವಲ್ಪ ಶಾಂತರಾಗಿದ್ದರು. ಆದರೆ, ಗುರುವಾರದ (ಸೆಪ್ಟೆಂಬರ್ 10) ಟಾಸ್ಕ್​​ನಲ್ಲಿ ಅವರು ಭರ್ಜರಿ ಸಿಟ್ಟಾಗಿದ್ದಾರೆ. ನ್ಯಾಯಯುತವಾಗಿ ಆಡುವುದಿಲ್ಲ ಎಂದಿದ್ದಾರೆ. ವಿನಯ್​ಗೆ ಕಾರ್ತಿಕ್ ಪಾಠ ಕಲಿಸಿದ್ದಾರೆ.

ನೀರು ತುಂಬಿದ ಬಲೂನ್​ನ ಒಡೆಯುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ವಿನಯ್ ಅವರು ಕಾರ್ತಿಕ್​ನ ಮೊದಲು ತಳ್ಳಿದ್ದಾರೆ. ಈ ಬಗ್ಗೆ ಕೇಳಿದರೆ ‘ನಾನು ನ್ಯಾಯಯುತವಾಗಿ ಆಡುವುದಿಲ್ಲ’ ಎಂದು ಓಪನ್ ಆಗಿ ಹೇಳಿದ್ದಾರೆ. ಈ ಮೂಲಕ ತಮ್ಮ ಅಸಲಿಮುಖವನ್ನು ಮತ್ತೊಮ್ಮೆ ವೀಕ್ಷಕರಿಗೆ ತೋರಿಸಿದ್ದಾರೆ. ವಿನಯ್​ಗೆ ಪಾಠ ಕಲಿಸಲು ಕಾರ್ತಿಕ್ ನಿರ್ಧರಿಸಿದರು.

ಮುಂದಿನ ಸುತ್ತಿನಲ್ಲಿ ಕಾರ್ತಿಕ್ ಅವರು ವಿನಯ್ ಅವರನ್ನು ತಳ್ಳಿದ್ದಾರೆ. ಈ ವೇಳೆ ವಿನಯ್ ಕೂಗಾಡಿದ್ದಾರೆ. ಆದರೆ, ಕಾರ್ತಿಕ್ ಇದಕ್ಕೆಲ್ಲ ಜಗ್ಗಲಿಲ್ಲ. ಅವರು ತಾವು ಸ್ಟ್ರಾಂಗ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ವಿನಯ್ ಅವರು ಬೇಕು ಎಂದೇ ಎಲ್ಲರನ್ನೂ ಕೆಣಕುತ್ತಿದ್ದಾರೆ. ಅವರಿಗೆ ಎಲ್ಲರೂ ಸರಿಯಾಗಿ ತಿರುಗೇಟು ಕೊಡುತ್ತಿದ್ದಾರೆ.

ಕಾರ್ತಿಕ್ ಅವರು ತೀರಾ ಕಠಿಣವಾಗಿ ನಡೆದುಕೊಂಡರು ಅನ್ನೋದು ಅನೇಕರ ಅಭಿಪ್ರಾಯ. ಇನ್ನೂ ಕೆಲವರು ಕಾರ್ತಿಕ್ ಮಾಡಿದ್ದು ಸರಿ ಇದೆ ಎಂದು ಬೆಂಬಲಿಸಿದ್ದಾರೆ. ‘ವಿನಯ್​ಗೆ ಅವರದೇ ಶೈಲಿಯಲ್ಲಿ ಉತ್ತರ ಕೊಟ್ಟಿರಿ, ಭೇಷ್’ ಎಂದು ಅನೇಕರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​​ ಖ್ಯಾತಿಯ ವಿನಯ್ ಗೌಡ ಅವರ ಮುದ್ದಾದ ಕುಟುಂಬ ಹೇಗಿದೆ ನೋಡಿ

ವಿನಯ್ ಹಾಗೂ ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಡ್ರೋನ್ ಪ್ರತಾಪ್, ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ ಕೂಡ ರೇಸ್​ನಲ್ಲಿ ಇದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:43 am, Fri, 10 November 23