AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವರ ಪ್ರಕಾರವೇ ಯಾವಾಗಲೂ ಆಡಬೇಕಾ?’; ಮತ್ತೆ ಭುಗಿಲೆದ್ದ ವಿನಯ್ ಹಾಗೂ ಸಂಗೀತಾ ವಾಗ್ವಾದ

ಕಳೆದ ವಾರ ನಡೆದ ಟಾಸ್ಕ್​ನಲ್ಲಿ ವಿನಯ್ ಹಾಗೂ ಸಂಗೀತಾ ಜೋರು ಧ್ವನಿಯಲ್ಲಿ ಮಾತನಾಡಿದ್ದರು. ಇದರಿಂದ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಯಿತು. ಕೈ ಕೈ ಮಿಲಾಯಿಸಿಕೊಂಡುಬಿಟ್ಟರೇನೋ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿತ್ತು.

‘ಅವರ ಪ್ರಕಾರವೇ ಯಾವಾಗಲೂ ಆಡಬೇಕಾ?’; ಮತ್ತೆ ಭುಗಿಲೆದ್ದ ವಿನಯ್ ಹಾಗೂ ಸಂಗೀತಾ ವಾಗ್ವಾದ
ಸಂಗೀತಾ-ವಿನಯ್
Follow us
ರಾಜೇಶ್ ದುಗ್ಗುಮನೆ
|

Updated on: Nov 09, 2023 | 3:07 PM

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಹಲವು ರೀತಿಯ ಟಾಸ್ಕ್ ನೀಡಲಾಗುತ್ತಿದೆ. ಈ ಬಾರಿ ಎರಡು ತಂಡಗಳನ್ನಾಗಿ ಮಾಡಲಾಗಿದೆ. ಪ್ರತಾಪ್ (Drone Prathap) ನೇತೃತ್ವದ ತಂಡಕ್ಕೆ ‘ಗಂಧದಗುಡಿ’ ಎಂದು ಹೆಸರು ಇಡಲಾಗಿದೆ. ಸಿರಿ ನೇತೃತ್ವದ ತಂಡಕ್ಕೆ ‘ವಜ್ರಕಾಯ’ ಎಂದು ಹೆಸರು ಕೊಡಲಾಗಿದೆ. ನವೆಂಬರ್ 8ರ ಎಪಿಸೋಡ್​ನಲ್ಲಿ ತೋರಿಸಿದ ಪ್ರಕಾರ ಈಗಾಗಲೇ ಬಿಗ್​ ಬಾಸ್​ನಲ್ಲಿ ಪ್ರತಾಪ್ ಟೀಂ ಮೂರು ಗೇಮ್ ಗೆದ್ದಿದೆ. ನಾಲ್ಕನೇ ಗೇಮ್​ನ ಪ್ರೋಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ವಿನಯ್ ಟೀಂನ ಫ್ರಸ್ಟ್ರೇಷನ್ ಎದ್ದು ಕಾಣುತ್ತಿದೆ.

ಸಿರಿ, ವಿನಯ್, ತುಕಾಲಿ ಸಂತೋಷ್, ನಮ್ರತಾ, ಸ್ನೇಹಿತ್, ನೀತು ಒಂದು ತಂಡದಲ್ಲಿ ಇದ್ದಾರೆ. ಈ ತಂಡದವರು ಬಲಿಷ್ಠ ಎನಿಸಿಕೊಂಡರೂ ಸತತ ಮೂರು ಗೇಮ್ ಸೋತಿದ್ದಾರೆ. ಈಗ ನಾಲ್ಕನೇ ಟಾಸ್ಕ್ ನೀಡಲಾಗಿದ್ದು, ಇದಕ್ಕೆ ‘ವಾಟರ್ ಬಲೂನ್’ ಎಂದು ಹೆಸರು ಕೊಡಲಾಗಿದೆ. ಈ ಆಟದಲ್ಲಿ ವಿನಯ್ ಹಾಗೂ ಸಂಗೀತಾ ಮತ್ತೆ ಕಿತ್ತಾಡಿಕೊಂಡಿದ್ದಾರೆ. ಏರು ಧ್ವನಿಯಲ್ಲಿ ಮಾತನಾಡುತ್ತಾ ಕಿರುಚಾಡಿದ್ದಾರೆ.

ಕಳೆದ ವಾರ ನಡೆದ ಟಾಸ್ಕ್​ನಲ್ಲಿ ವಿನಯ್ ಹಾಗೂ ಸಂಗೀತಾ ಜೋರು ಧ್ವನಿಯಲ್ಲಿ ಮಾತನಾಡಿದ್ದರು. ಇದರಿಂದ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಯಿತು. ಕೈ ಕೈ ಮಿಲಾಯಿಸಿಕೊಂಡುಬಿಟ್ಟರೇನೋ ಎಂಬಷ್ಟರ ಮಟ್ಟಿಗೆ ಪರಿಸ್ಥಿತಿ ಹೋಗಿತ್ತು. ಈ ವಾರ ಎಲ್ಲವೂ ತಣ್ಣಗಾಗಿತ್ತು. ಆದರೆ, ಈಗ ಮತ್ತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಹೆಸರಲ್ಲಿ ನಡೆಯುತ್ತಿದೆ ವಂಚನೆ; ಎಲ್ಲವನ್ನೂ ಬಿಚ್ಚಿಟ್ಟ ಸ್ಪರ್ಧಿ

ವಿನಯ್ ಹಾಗೂ ಸಂಗೀತಾ ಈ ಬಾರಿ ಕಿತ್ತಾಡಿಕೊಳ್ಳದೇ ಇರೋದಕ್ಕೆ ಹಲವು ಕಾರಣಗಳು ಇದ್ದವು. ತಂಡದ ನಾಯಕ ಪ್ರತಾಪ್ ಅವರು ಮೊದಲೇ ಎಲ್ಲರಿಗೂ ಸೂಚನೆ ಕೊಟ್ಟಿದ್ದರು. ಪರಿಸ್ಥಿತಿ ಯಾವುದೇ ಹಂತಕ್ಕೆ ಹೋದರೂ ಕಿತ್ತಾಡಿಕೊಳ್ಳಬಾರದು ಎಂದು ಸ್ಟ್ರಿಕ್ಟ್ ಆಗಿ ಹೇಳಿದ್ದರು. ಮೊದಲ ಮೂರು ಆಟದಲ್ಲಿ ಇದು ಫಾಲೋ ಆಯಿತು. ಆದರೆ, ನಾಲ್ಕನೇ ಆಟದಲ್ಲಿ ಪರಿಸ್ಥಿತಿ ಕೈಮೀರಿದೆ. ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ