ದಾಖಲೆ ಬರೆದ ‘ಬಿಗ್ ಬಾಸ್’: ಶನಿವಾರದ ಎಪಿಸೋಡ್ಗೆ ಸಿಕ್ಕ ಟಿಆರ್ಪಿ ಎಷ್ಟು? ಇಲ್ಲಿದೆ ವಿವರ
‘ಬಿಗ್ ಬಾಸ್’ ಆಗಮನ ಆಗುತ್ತದೆ ಎಂದರೆ ಮೂರು ಧಾರಾವಾಹಿಗಳ ಸ್ಲಾಟ್ನ ಈ ರಿಯಾಲಿಟಿ ಶೋಗೆ ಮೀಸಲಿಡಲಾಗುತ್ತದೆ. ಹೀಗಾಗಿ, ಈ ರಿಯಾಲಿಟಿ ಶೋ ಮೇಲೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಈ ಬಾರಿ ಬಿಗ್ ಬಾಸ್ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಜನರಿಗೆ ಇಷ್ಟವಾಗುತ್ತಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಸಾಕಷ್ಟು ಅದ್ದೂರಿ ಹಾಗೂ ವಿಶೇಷವಾಗಿರಲಿದೆ ಎಂದು ವಾಹಿನಿಯವರು ಮೊದಲೇ ಹೇಳಿದ್ದರು. ಅದಕ್ಕೆ ತಕ್ಕಂತೆ ಹೊಸ ಮನೆ ನಿರ್ಮಾಣ ಮಾಡಲಾಯಿತು. ಶೋ ಆರಂಭ ಆದಾಗಿನಿಂದಲೂ ದೊಡ್ಮನೆಯಲ್ಲಿ ಸಾಕಷ್ಟು ಡ್ರಾಮಾಗಳು ನಡೆಯುತ್ತಿವೆ. ಕಳೆದ ಶನಿವಾರ (ನವೆಂಬರ್ 4) ಕಿಚ್ಚ ಸುದೀಪ್ ಅವರು ಅನೇಕರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಎಪಿಸೋಡ್ ಬಗ್ಗೆ ಭರ್ಜರಿ ಚರ್ಚೆ ಆಗಿತ್ತು. ಎಲ್ಲರೂ ಶೋಗೆ ಒಳ್ಳೆಯ ಟಿಆರ್ಪಿ ಬರಬಹುದು ಎಂದು ಊಹಿಸಿದ್ದರು. ಈ ಊಹೆ ನಿಜವಾಗಿದೆ. ‘ಬಿಗ್ ಬಾಸ್’ ರಿಯಾಲಿಟಿ ಶೋ ಭರ್ಜರಿ ಟಿಆರ್ಪಿಯೊಂದಿಗೆ ಮುನ್ನುಗ್ಗುತ್ತಿದೆ.
‘ಬಿಗ್ ಬಾಸ್’ ಆಗಮನ ಆಗುತ್ತದೆ ಎಂದರೆ ಮೂರು ಧಾರಾವಾಹಿಗಳ ಸ್ಲಾಟ್ನ ಈ ರಿಯಾಲಿಟಿ ಶೋಗೆ ಮೀಸಲಿಡಲಾಗುತ್ತದೆ. ಹೀಗಾಗಿ, ಈ ರಿಯಾಲಿಟಿ ಶೋ ಮೇಲೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಈ ಬಾರಿ ಬಿಗ್ ಬಾಸ್ ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಜನರಿಗೆ ಇಷ್ಟವಾಗುತ್ತಿದೆ. ಮನೆಯಲ್ಲಿ ಎರಡು ಟೀಂ ಆಗಿದೆ. ಕಳೆದ ವಾರ ಆದ ಕೆಟ್ಟ ಭಾಷೆಗಳ ಬಳಕೆ, ಮಹಿಳೆಯರಿಗೆ ಅವಮಾನ ಮತ್ತಿತ್ಯಾದಿ ವಿಚಾರಗಳಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇದು ಸಹಕಾರಿ ಆಗಿದೆ.
ಶನಿವಾರದ ಬಿಗ್ ಬಾಸ್ ಎಪಿಸೋಡ್ ನಗರ ಭಾಗದಲ್ಲಿ 8.1 ಟಿವಿಆರ್ ಪಡೆದಿದೆ. ಭಾನುವಾರ 7.6 ಟಿವಿಆರ್ ಹಾಗೂ ವಾರದ ದಿನಗಳಲ್ಲಿ 7.5 ಟಿವಿಆರ್ ಪಡೆದಿದೆ. ಈ ಮೂಲಕ ಬಿಗ್ ಬಾಸ್ ಶೋ ಮೇಲುಗೈ ಸಾಧಿಸಿದಿದೆ.
ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
ಧಾರಾವಾಹಿಗಳ ಟಿಆರ್ಪಿ ಕೂಡ ಹೊರಬಿದ್ದಿದೆ. ನಗರ ಭಾಗದಲ್ಲಿ ಪುಟ್ಟಕ್ಕನ್ನ ಮಕ್ಕಳು ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಗಟ್ಟಿಮೇಳ’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮಿ’
ನಾಲ್ಕನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ, ಐದನೇ ಸ್ಥಾನದಲ್ಲಿ ‘ಸತ್ಯ ಹಾಗೂ ಶ್ರೀರಸ್ತು ಶುಭಮಸ್ತು’ ಆರನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Thu, 9 November 23