AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

War 2 Review: ಆ್ಯಕ್ಷನ್ ಅಬ್ಬರದ ನಡುವೆ ಮಂಕಾದ ‘ವಾರ್ 2’ ಕಥೆ

War 2 Review: ಆ್ಯಕ್ಷನ್ ಅಬ್ಬರದ ನಡುವೆ ಮಂಕಾದ ‘ವಾರ್ 2’ ಕಥೆ
War 2 Movie Review
ವಾರ್ 2
UA
  • Time - 173 Minutes
  • Released - August 14, 2025
  • Language - Hindi
  • Genre - Action , Thriller
Cast - ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ, ಜೂನಿಯರ್ ಎನ್​ಟಿಆರ್, ಅಶುತೋಷ್ ರಾಣಾ, ಅನಿಲ್ ಕಪೂರ್ ಮುಂತಾದವರು.
Director - ಅಯಾನ್ ಮುಖರ್ಜಿ
2.5
Critic's Rating
ಮದನ್​ ಕುಮಾರ್​
|

Updated on: Aug 14, 2025 | 1:42 PM

Share

ಜೂನಿಯರ್ ಎನ್​ಟಿಆರ್ ನಟಿಸಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಕಾರಣಕ್ಕೆ ‘ವಾರ್ 2’ (War 2) ಬಗ್ಗೆ ಸಾಕಷ್ಟು ಹೈಪ್ ಸೃಷ್ಟಿ ಆಗಿತ್ತು. ಈ ಸಿನಿಮಾದಲ್ಲಿ ಅವರು ಹೃತಿಕ್ ರೋಷನ್ (Hrithik Roshan) ಜೊತೆ ತೆರೆ ಹಂಚಿಕೊಂಡಿದ್ದರಿಂದ ನಿರೀಕ್ಷೆ ಡಬಲ್ ಆಗಿತ್ತು. 400 ಕೋಟಿ ರೂಪಾಯಿಗೂ ಹೆಚ್ಚು ಹಣ ಹೂಡಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಆಗಸ್ಟ್ 14ರಂದು ಬಿಡುಗಡೆ ಆಗಿರುವ ‘ವಾರ್ 2’ ಸಿನಿಮಾ ಜನರಿಗೆ ಇಷ್ಟ ಆಗುತ್ತಾ? ಸಿನಿಮಾದಲ್ಲಿ ಪ್ಲಸ್ ಏನು? ಮೈನಸ್ ಏನು ಎಂಬುದು ತಿಳಿಯಲು ಈ ವಿಮರ್ಶೆ (War 2 Movie Review) ಓದಿ..

‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯ ಮೂಲಕ ನಿರ್ಮಾಣವಾದ ‘ವಾರ್’, ‘ಟೈಗರ್’, ‘ಪಠಾಣ್’ ಮುಂತಾದ ಸಿನಿಮಾಗಳು ಈ ಮೊದಲು ಬಿಡುಗಡೆ ಆಗಿ ಅಭಿಮಾನಿಗಳನ್ನು ರಂಜಿಸಿದ್ದವು. ಈ ಸಿನಿಮಾಗಳ ಪಾತ್ರಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಇದನ್ನು ‘ವೈಆರ್​ಎಫ್​ ಸ್ಪೈ ಯೂನಿವರ್ಸ್’ ಎಂದು ಕರೆಯಲಾಗುತ್ತದೆ. ‘ವಾರ್ 2’ ಸಿನಿಮಾದಲ್ಲಿ ಈ ಸ್ಪೈ ಜಗತ್ತಿಗೆ ವಿಕ್ರಮ್ ಎಂಬ ಹೊಸ ಪಾತ್ರ ಎಂಟ್ರಿ ಆಗಿದೆ. ಆ ಪಾತ್ರವನ್ನು ಜೂನಿಯರ್ ಎನ್​ಟಿಆರ್​ ಮಾಡಿದ್ದಾರೆ. ಅವರಿಗೆ ಕಬೀರ್ ಪಾತ್ರದ ಮೂಲಕ ಹೃತಿಕ್ ರೋಷನ್ ಅವರು ಸಾಥ್ ನೀಡಿದ್ದಾರೆ.

‘ವಾರ್ 2’ ಸಿನಿಮಾದ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್​ಗಳಿವೆ. ಕಥೆಯ ಎಳೆ ವಿವರಿಸಿದರೆ ನಂತರ ಸಿನಿಮಾ ನೋಡುವ ಪ್ರೇಕ್ಷಕರಿಗೆ ಥ್ರಿಲ್ ಉಳಿಯುವುದಿಲ್ಲ. ಆದರೂ ಕೂಡ ಈ ಸಿನಿಮಾದ ಕಥೆ ಏನು ಎಂಬುದನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಿಬಿಡಬಹುದು. ಇಲ್ಲಿನ ಎಲ್ಲ ಪಾತ್ರಗಳಿಗೆ ಬೇರೆ ಬೇರೆ ಶೇಡ್​​ಗಳಿವೆ. ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ತಿಳಿಯಲಷ್ಟೇ ಪೂರ್ತಿ ಸಿನಿಮಾ ನೋಡಬೇಕು.

ಇದು ಸಾಹಸ ಪ್ರಧಾನ ಸಿನಿಮಾ. ಹಾಗಾಗಿ ಆ್ಯಕ್ಷನ್ ದೃಶ್ಯಗಳಿಗೆ ಸಿಕ್ಕಾಪಟ್ಟೆ ಮಹತ್ವ ನೀಡಲಾಗಿದೆ. ಎಷ್ಟರಮಟ್ಟಿಗೆಂದರೆ, ಯಾವುದೇ ಲಾಜಿಕ್ ಕೂಡ ಇಲ್ಲಿ ಕೆಲಸ ಮಾಡುವುದಿಲ್ಲ! ನೋಡುಗರನ್ನು ಹೊಡಿಬಡಿ ದೃಶ್ಯಗಳಿಂದ ಖುಷಿಪಡಿಸುವುದೇ ಸಿನಿಮಾದ ಮುಖ್ಯ ಉದ್ದೇಶ ಎಂಬ ರೀತಿಯಲ್ಲಿ ಚಿತ್ರಕಥೆ ಹೆಣೆದುಕೊಳ್ಳಲಾಗಿದೆ. ಏನನ್ನೂ ಪ್ರಶ್ನಿಸಿದೇ ಕೇವಲ ಆ್ಯಕ್ಷನ್ ಸೀನ್ ನೋಡಿ ಎಂಜಾಯ್ ಮಾಡುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಆ್ಯಕ್ಷನ್ ದೃಶ್ಯಗಳಿಗೆ ಪೂರಕವಾಗಿ ಗಟ್ಟಿಯಾದ ಕಥೆ ಇರಬೇಕು ಎಂದು ಬಯಸುವ ಪ್ರೇಕ್ಷಕರಿಗೆ ನಿರಾಸೆ ಆಗಬಹುದು.

ವೈಆರ್​ಎಫ್​ ಸ್ಪೈ ಯೂನಿವರ್ಸ್​​​ಗೆ ಕಿಯಾರಾ ಅಡ್ವಾಣಿ ಕೂಡ ಹೊಸ ಎಂಟ್ರಿ. ಕಾವ್ಯಾ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಮಾತ್ರ ಅವರು ಬಂದುಹೋಗುತ್ತಾರೆ. ಸಣ್ಣ-ಪುಟ್ಟ ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚುವ ಅವಕಾಶ ಪಡೆದಿದ್ದಾರೆ. ಹೃತಿಕ್ ಮತ್ತು ಕಿಯಾರಾ ನಡುವೆ ಲವ್ ಸ್ಟೋರಿ ಇದೆಯಾದರೂ ಭಾವನಾತ್ಮಕವಾಗಿ ಸೆಳೆಯುವಷ್ಟು ಗಟ್ಟಿಯಾಗಿಲ್ಲ. ಜೂನಿಯರ್ ಎನ್​ಟಿಆರ್​ ಹಾಗೂ ಹೃತಿಕ್ ನಡುವೆ ಸ್ನೇಹ ಮತ್ತು ಸಮರವನ್ನು ತೋರಿಸಲಾಗಿದೆ. ಅಂತಿಮವಾಗಿ ಸ್ನೇಹ ಗೆಲ್ಲುತ್ತಾ ಅಥವಾ ಸಮರ ಗೆಲ್ಲುತ್ತಾ ಎಂಬುದು ಸಸ್ಪೆನ್ಸ್.

ಇದನ್ನೂ ಓದಿ: ಎಷ್ಟು ಅದ್ದೂರಿಯಾಗಿದೆ ‘ವಾರ್ 2’ ಸಿನಿಮಾ? ಇಲ್ಲಿದೆ ಫಸ್ಟ್ ಹಾಫ್ ವಿಮರ್ಶೆ

ಹತ್ತು ಹಲವು ದೇಶಗಳ ಸುಂದರ ಲೊಕೇಷನ್, ಮೈನವಿರೇಳಿಸುವ ಆ್ಯಕ್ಷನ್, ಸ್ಟಾರ್ ಕಲಾವಿದರನ್ನು ಒಳಗೊಂಡ ಪಾತ್ರವರ್ಗ, ಎಲ್ಲ ಫ್ರೇಮ್​​ನಲ್ಲೂ ಅದ್ದೂರಿತನ ಇವು ‘ವಾರ್ 2’ ಸಿನಿಮಾದ ಪ್ಲಸ್ ಪಾಯಿಂಟ್. ಆದರೆ ಕಥೆ, ಚಿತ್ರಕಥೆ ವಿಚಾರದಲ್ಲಿ ಸಿನಿಮಾಗೆ ಹಿನ್ನಡೆ ಆಗಿದೆ. ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ಈ ಸಿನಿಮಾ ಹಿಂದೇಟು ಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ