AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuva Movie Review: ಮಾಸ್ ಆ್ಯಂಡ್ ಕ್ಲಾಸ್ ಈ ಯುವ; ಇದರಲ್ಲಿದೆ ಹಲವು ಭಾವ

ಪುನೀತ್ ರಾಜ್​ಕುಮಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿ ಸಂತೋಷ್ ಆನಂದ್​ರಾಮ್​ ಭೇಷ್ ಎನಿಸಿಕೊಂಡಿದ್ದಾರೆ. ಅದೇ ರೀತಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿ ಹೊಂಬಾಳೆ ಫಿಲ್ಮ್ಸ್ ಹೆಸರು ಮಾಡಿದೆ. ಇವರಿಬ್ಬರೂ ಯುವ ರಾಜ್​ಕುಮಾರ್ ಅವರನ್ನು ಪರಿಚಯಿಸುತ್ತಾರೆ ಎಂದಾಗಲೇ ನಿರೀಕ್ಷೆ ಮೂಡಿತ್ತು. ಇಂದು (ಮಾರ್ಚ್ 29) ‘ಯುವ’ ಸಿನಿಮಾ ರಿಲೀಸ್ ಆಗಿದೆ. ಆ ಸಿನಿಮಾ ವಿಮರ್ಶೆ ಇಲ್ಲಿದೆ.

Yuva Movie Review: ಮಾಸ್ ಆ್ಯಂಡ್ ಕ್ಲಾಸ್ ಈ ಯುವ; ಇದರಲ್ಲಿದೆ ಹಲವು ಭಾವ
ಯುವ ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
| Updated By: ಮಂಜುನಾಥ ಸಿ.

Updated on:Mar 29, 2024 | 2:28 PM

ಚಿತ್ರ: ಯುವ. ನಿರ್ಮಾಣ: ಹೊಂಬಾಳೆ ಫಿಲ್ಮ್ಸ್. ನಿರ್ದೇಶನ: ಸಂತೋಷ್ ಆನಂದ್​ರಾಮ್​. ಪಾತ್ರವರ್ಗ:, ಯುವ ರಾಜ್​ಕುಮಾರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು. ಸ್ಟಾರ್: 3/5

ಫ್ಯಾಮಿಲಿ ಆಡಿಯನ್ಸ್​ಗಳ ನಾಡಿಮಿಡಿತವನ್ನು ನಿರ್ದೇಶಕ ಸಂತೋಷ್ ಆನಂದ್​ರಾಮ್ ಅರಿತಿದ್ದಾರೆ. ಅವರಿಗೆ ಯುವ ರಾಜ್​ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸೋ ಜವಾಬ್ದಾರಿ ಸಿಕ್ಕಿದೆ. ಇದಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ‘ಯುವ’ ಸಿನಿಮಾ ಟ್ರೇಲರ್ ಮೂಲಕ ನಿರೀಕ್ಷೆ ಮೂಡಿಸಿತ್ತು. ಈಗ ಸಿನಿಮಾ ತೆರೆಗೆ ಬಂದಿದೆ. ಆ ಸಿನಿಮಾ ಹೇಗಿದೆ? ಚಿತ್ರದಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

ಮಂಗಳೂರಿನ ಆ ಕಾಲೇಜಿನಲ್ಲಿ ಮೊದಲಿನಿಂದಲೂ ಹಾಸ್ಟೆಲ್ ಹುಡುಗರು ಹಾಗೂ ಲೋಕಲ್ ಹುಡುಗರ ಮಧ್ಯೆ ಕಿರಿಕ್ ಇದ್ದದ್ದೇ. ಲೋಕಲ್ ಹುಡುಗರು ತಾವೇ ಮೇಲು ಎಂಬ ಭಾವನೆಯಲ್ಲಿ ಮೆರೆಯುತ್ತಾ ಇರುತ್ತಾರೆ. ಹಾಸ್ಟೆಲ್ ಹುಡುಗರಿಗೆ ತಾವು ಹೊರಗಿನವರು ಎಂಬ ಅಳುಕು. ಈ ಕಾರಣಕ್ಕೆ ಅವರು ಲೋಕಲ್ ಹುಡುಗರ ಸುದ್ದಿಗೆ ಹೋದವರಲ್ಲ. ಆದರೆ ಹಾಸ್ಟೆಲ್​ನಲ್ಲಿರುವ ಯುವ (ಯುವ ರಾಜ್​ಕುಮಾರ್) ಹಾಗಲ್ಲ. ಆತನ ಬೈಕ್​ ಟಚ್ ಮಾಡಿದ ಲೋಕಲ್ ಹುಡುಗರ ಕೈ- ಕಾಲು ಮುರಿಯುತ್ತಾನೆ. ನಂತರ ಅದು ಗ್ಯಾಂಗ್​ವಾರ್ ಆಗಿ ಬದಲಾಗುತ್ತದೆ. ಮಾತು ಮಾತಿಗೂ ಸಿಡುಕೋ ಈ ಯುವ ನಂತರ ಏಕೆ ಬದಲಾಗುತ್ತಾನೆ? ಶಿಕ್ಷಣ ಮುಗಿದ ಬಳಿಕ ಮನೆಗೆ ಬರುವ ಆತನಿಗೆ ಕಾದಿರೋ ಶಾಕ್ ಏನು? ಆತನ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತಾರೆ ನಿರ್ದೇಶಕ ಸಂತೋಷ್ ಆನಂದ್​ರಾಮ್.

‘ಯುವ’ ಸಿನಿಮಾದ ಮೊದಲಾರ್ಧದಲ್ಲಿ ಯಥೇಚ್ಚವಾಗಿ ಹೊಡಿಬಡಿ ದೃಶ್ಯಗಳು ಕಾಣಿಸುತ್ತವೆ. ಕುಂತಿದ್ದಕ್ಕೆ, ನಿಂತಿದ್ದಕ್ಕೆ ಕಿರಿಕ್ ಆಗುತ್ತವೆ. ಆ ಬಳಿಕ ಶುರುವಾಗೋದು ಫೈಟಿಂಗ್. ಮೊದಲಾರ್ಧ ಬಹುತೇಕ ಕಾಲೇಜಿನಲ್ಲಿ ನಡೆಯೋ ಗ್ಯಾಂಗ್​ವಾರ್​​ಗಳಲ್ಲೇ ಸಾಗುತ್ತದೆ. ದ್ವಿತೀಯಾರ್ಧವನ್ನು ಸಂಪೂರ್ಣವಾಗಿ ಭಾವಾನ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಯುವ ಅವರು ಮೊದಲಾರ್ಧದಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟಂಟ್​ಗಳನ್ನು ಕಲಿತು ಫೈಟ್​ಗಳನ್ನು ಮಾಡಿದ್ದಾರೆ. ಇದಕ್ಕೆ ಅವರು ಹಾಕಿದ ಶ್ರಮ ತೆರೆಮೇಲೆ ಎದ್ದು ಕಾಣುತ್ತದೆ. ದ್ವಿತೀಯಾರ್ಧದಲ್ಲಿ ಓರ್ವ ತಂದೆಯ ಮಗನಾಗಿ, ಮಧ್ಯಮವರ್ಗದ ಹುಡುಗನಾಗಿ ಅವರು ಗಮನ ಸೆಳೆಯುತ್ತಾರೆ. ಡೆಲಿವರಿ ಬಾಯ್​​ ಆಗಿ, ಕಾಲೇಜು ಹುಡುಗನಾಗಿ ಹೀಗೆ ಹಲವು ಶೇಡ್​ಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಡ್ಯಾನ್ಸ್​ಗಳಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಅವರು ಭರವಸೆಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲಲ್ಲಿ.

ಸಂತೋಷ್ ಆನಂದ್​ರಾಮ್ ಅವರು ಫ್ಯಾಮಿಲಿ ಆಡಿಯನ್ಸ್​ನ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ತಂದೆ-ಮಗನ ಸೆಂಟಿಮೆಂಟ್​ನ ಕಟ್ಟಿಕೊಡಲು ಅವರು ಯಶಸ್ವಿ ಆಗಿದ್ದಾರೆ. ಕೆಲವು ದೃಶ್ಯಗಳು ಅಪೂರ್ಣ ಎನಿಸುತ್ತದೆ. ಬೆಂಗಳೂರಿನ ಬ್ಯುಸಿ ರಸ್ತೆಯ ಮಧ್ಯೆ ಕಾರು ನಜ್ಜುಗುಜ್ಜಾಗುವ ಹಾಗೆ, ಎದುರಾಳಿಯ ಕಾಲು ಕೈ ಮುರಿಯುವಂತೆ ಹೊಡೆದರೂ ಆ ಬಗ್ಗೆ ಪೊಲೀಸ್ ಕೇಸ್​ ಆಗಲ್ಲ. ಈ ರೀತಿಯ ಕೆಲವು ಲಾಜಿಕ್​ಗಳು ಕಾಣೆ ಆಗಿವೆ.

ಇದನ್ನೂ ಓದಿ: ಯುವ ಎಂಟ್ರಿಗೆ ಭರ್ಜರಿ ಸಿದ್ಧತೆ; ಥಿಯೇಟರ್ ಎದುರು ನಿಂತಿದೆ ಕಟೌಟ್

ಯುವ ತಂದೆಯಾಗಿ ಅಚ್ಯುತ್ ಕುಮಾರ್ ನಟನೆ ಪ್ರಬುದ್ಧವಾಗಿದೆ. ನಾಯಕಿ ಪಾತ್ರದಲ್ಲಿರುವ ಸಪ್ತಮಿ ಗೌಡ ಅವರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸುಧಾರಾಣಿ, ಹಿತಾ ಚಂದ್ರಶೇಖರ್ ಉತ್ತಮ ನಟನೆ ತೋರಿದ್ದಾರೆ. ಕುಸ್ತಿಯ ಕೋಚ್ ಆಗಿ, ಉತ್ತರ ಕರ್ನಾಟಕದ ಭಾಷೆಯಲ್ಲಿ ಕಿಶೋರ್ ಅವರು ಇಷ್ಟವಾಗುತ್ತಾರೆ. ಅವರು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ, ಶ್ರೀಶಾ ಕುಡುವಲ್ಲಿ ಛಾಯಾಗ್ರಹಣ ಹೆಚ್ಚಿನ ಅಂಕ ಗಿಟ್ಟಿಸಿಕೊಳ್ಳುತ್ತದೆ. ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಎಂದು ಹೊಂಬಾಳೆ ಫಿಲ್ಮ್ಸ್ ಎಲ್ಲಿಯೂ ಕಾಂಪ್ರಮೈಸ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:58 pm, Fri, 29 March 24

ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಪೆಹಲ್ಗಾಮ್ ಉಗ್ರರ ದಾಳಿ: ಉತ್ತರ ಕನ್ನಡ ಪ್ರವಾಸಿ ಸ್ಥಳಗಳಲ್ಲಿ ಹೈಅಲರ್ಟ್​
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಸೇನಾ ಭಾಷೆಯಲ್ಲಿ ಡಿ ಡೇ, ಎಚ್ ಫ್ಯಾಕ್ಟರ್ ಅಂದರೆ ಏನು? ಇಲ್ಲಿದೆ ನೋಡಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಡಿ ಡೇ ಮತ್ತು ಹೆಚ್ ಫ್ಯಾಕ್ಟರ್ ಪದಗಳ ವಿವರಣೆ ನೀಡಿದ ಕರ್ನಲ್ ಹರಿ
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹೇಗಿದೆ? ಪಾಕ್ ಪತ್ರಕರ್ತ ಹೇಳಿದ್ದೇನು?
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಆರೋಪ ಮತ್ತು ಕೊಲೆ, ಪೊಲೀಸರಿಂದ 15 ಜನರ ಬಂಧನ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ಅದ್ದೂರಿಯಾಗಿ ರಿಸೆಪ್ಷನ್ ನಡೆದಾಗ ವರ ಖುಷಿಯಾಗಿದ್ದ! ನಂತರ ನಡೆದದ್ದೇ ಬೇರೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ
ತಮಿಳುನಾಡಿನ ಪೊಲೀಸ್​ ಠಾಣೆಯೊಳಗೆ ಬಂದು ಇಣುಕಿ ನೋಡಿದ ಚಿರತೆ