
ಮೃಣಾಲ್ ಠಾಕೂರ್ ಅವರು ಹಲವು ಭಾಷೆಗಳಲ್ಲಿ ನಟಿಸಿ ಫೇಮಸ್ ಆದವರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಕಾಲಿವುಡ್ ನಟ ಧನುಶ್ ಜೊತೆ ಸುತ್ತಾಟ ಮಾಡುತ್ತಿದ್ದಾರೆ ಎನ್ನುವ ಸುದ್ದಿಯು ಇತ್ತೀಚೆಗೆ ಸಾಕಷ್ಟು ಹರಿದಾಡಿತ್ತು ಮತ್ತು ಅನೇಕರು ಇದನ್ನು ನಂಬಿದ್ದರು. ಈ ವಿಚಾರವಾಗಿ ಮೃಣಾಲ್ ಠಾಕೂರ್ (Mrunal Thakur) ಅವರು ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ಮಾತನಾಡುವಾಗ ಈ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಟ-ನಟಿಯರು ಒಟ್ಟಿಗೆ ಕಾಣಿಸಿಕೊಂಡರೆ ಡೇಟಿಂಗ್ ವಿಚಾರವು ಹುಟ್ಟಿಕೊಳ್ಳುತ್ತದೆ. ಇದು ಚಿತ್ರರಂಗಕ್ಕೆ ಹೊಸದೇನು ಅಲ್ಲ. ಈ ಮೊದಲು ಅನೇಕ ನಟ-ನಟಿಯರ ಹೆಸರು ಈ ರೀತಿಯಲ್ಲಿ ತಳುಕು ಹಾಕಿಕೊಂಡಿತ್ತು. ಕೆಲವು ನಿಜವಾದಲ್ಲಿ, ಕೆಲವು ಸುಳ್ಳಾಗಿದೆ. ಈಗ ಮೃಣಾಲ್ ಠಾಕೂರ್ಗೂ ಇದೇ ರೀತಿಯಲ್ಲಿ ತೊಂದರೆ ಉಂಟಾಗಿತ್ತು.
ಧನುಶ್ ಹಾಗೂ ಮೃಣಾಲ್ ಈವರೆಗೆ ಒಂದೇ ಸಿನಿಮಾದಲ್ಲಿ ನಟಿಸಿಲ್ಲ. ಆದಾಗ್ಯೂ ಇವರು ಕೆಲವು ಕಡೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವಿಚಾರವು ಮೃಣಾಲ್ ಗಮನಕ್ಕೂ ಬಂದಿದೆ. ‘ನಾನು ಹಾಗೂ ಧನುಶ್ ಒಳ್ಳೆಯ ಗೆಳೆಯರಷ್ಟೇ’ ಎಂದು ನೇರ ಮಾತುಗಳಲ್ಲಿ ಹೇಳಿದರು. ಇದರ ಜೊತೆಗೆ ಒಂದು ವಿಚಾರಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.
‘ಸನ್ ಆಫ್ ಸರ್ದಾರ್ 2’ ಕಾರ್ಯಕ್ರಮಕ್ಕೆ ಧನುಶ್ ಆಗಮಿಸಿದ್ದರು ಮತ್ತು ಮೃಣಾಲ್ ಜೊತೆ ಆಪ್ತವಾಗಿದ್ದರು. ಅವರೇ ಧನುಶ್ ಅವರನ್ನು ಆಮಂತ್ರಿಸಿದ್ದರು ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಇಲ್ಲ. ‘ಧನುಶ್ ಸನ್ ಆಫ್ ಸರ್ದಾರ್ 2 ಚಿತ್ರದ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು. ಅಜಯ್ ದೇವಗನ್ ಅವರು ಧನುಶ್ನ ಆಮಂತ್ರಿಸಿದ್ದು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಧನುಷ್ ಜೊತೆ ಮೃಣಾಲ್ ಠಾಕೂರ್ ಸುತ್ತಾಟ? ಇಂಡಸ್ಟ್ರಿಯಲ್ಲಿ ಹೊಸ ಜೋಡಿ
ಧನುಶ್ ಹಾಗೂ ರಜನಿಕಾಂತ್ ಮಗಳು ಐಶ್ವರ್ಯಾ ವಿವಾಹ ಆಗಿದ್ದರು. ಹಲವು ವರ್ಷಗಳ ಬಳಿಕ ಇವರ ಸಂಬಂಧ ಕೊನೆ ಆಯಿತು. ಈ ದಂಪತಿ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಈ ಬೆನ್ನಲ್ಲೇ ಧನುಶ್ ಅವರು ಮೃಣಾಲ್ ಜೊತೆ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡವು. ಇವರು ವಿವಾಹ ಆಗುತ್ತಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಈಗ ಮೃಣಾಲ್ ಅವರೇ ಈ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟಂತೆ ಆಗಿದೆ. ಇನ್ನು, ಮುಂದಾದರೂ ಈ ವದಂತಿ ಹಬ್ಬೋದು ನಿಲ್ಲುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.